ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾದ ವೀಡಿಯೊದಲ್ಲಿ, ಹುಡುಗನಿಗೆ ಚಾಕು ಹಿಡಿದು ಬೆದರಿಸಿದ ಅವನ 'ಸ್ನೇಹಿತರು' ಮೊದಲು ಅವರ ಬೂಟುಗಳನ್ನು ನೆಕ್ಕುವಂತೆ ಮಾಡಿದರು ಮತ್ತು ನಂತರ 'ಅಸ್ವಾಭಾವಿಕ ಕೃತ್ಯ' ಮಾಡಲು ಒತ್ತಾಯಿಸಿರುವುದನ್ನು ಕಾಣಬಹುದು.
ಆಘಾತಕಾರಿ ಘಟನೆಯೊಂದರಲ್ಲಿ, ಮೂವರು ಹದಿಹರೆಯದವರು ದಕ್ಷಿಣ ದೆಹಲಿಯ ಹೌಜ್ ಖಾಸ್ ಪ್ರದೇಶದಲ್ಲಿ 14 ವರ್ಷದ ಬಾಲಕನಿಗೆ 'ಅಸ್ವಾಭಾವಿಕ ಲೈಂಗಿಕತೆ' ನಡೆಸುವಂತೆ ಒತ್ತಾಯಿಸಿ ಕೃತ್ಯವನ್ನು ರೆಕಾರ್ಡ್ ಮಾಡಿ ಅದರ ವೀಡಿಯೊವನ್ನು ಸೋಷ್ಯಲ್ ಮೀಡಿಯಾದಲ್ಲಿ ಹಾಕಿದ್ದಾರೆ.
ಮೂವರು ಬಾಲಾಪರಾಧಿಗಳಲ್ಲಿ ಒಬ್ಬನು ಭಾನುವಾರ ರಾತ್ರಿ ವಿಡಿಯೋವನ್ನು ಬಾಲಕನ ತಾಯಿಗೆ ಕಳುಹಿಸಿದ್ದು, ನಂತರ ಆಕೆ ಸ್ಥಳೀಯ ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾದ ವೀಡಿಯೊದಲ್ಲಿ, ಹುಡುಗನಿಗೆ ಚಾಕು ಹಿಡಿದು ಬೆದರಿಸಿದ ಅವನ 'ಸ್ನೇಹಿತರು' ಮೊದಲು ಅವರ ಬೂಟುಗಳನ್ನು ನೆಕ್ಕುವಂತೆ ಮಾಡಿದರು ಮತ್ತು ನಂತರ 'ಅಸ್ವಾಭಾವಿಕ ಕೃತ್ಯ' ಮಾಡಲು ಒತ್ತಾಯಿಸಿರುವುದನ್ನು ಕಾಣಬಹುದು.
ಭಾನುವಾರ ರಾತ್ರಿ ಪಿಸಿಆರ್ ಕರೆಗೆ ಪ್ರತಿಕ್ರಿಯಿಸಿದ ಸ್ಥಳೀಯ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಅಲ್ಲಿ ಕರೆ ಮಾಡಿದವರು ಕೆಲವು ಹುಡುಗರು ತನ್ನ 14 ವರ್ಷದ ಮಗನೊಂದಿಗೆ ಅಸ್ವಾಭಾವಿಕ ಕೃತ್ಯ ಎಸಗಿದ್ದಾರೆ ಮತ್ತು ವೀಡಿಯೊ ಕ್ಲಿಪ್ ಅನ್ನು ತಮ್ಮ ಮೊಬೈಲ್ ಫೋನ್‌ಗೆ ಕಳುಹಿಸಿದ್ದಾರೆ ಎಂದು ತಾಯಿ ತಿಳಿಸಿದ್ದಾರೆ. ಬಳಿಕ ಬಾಲಕನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ನಂತರ ಕೌನ್ಸೆಲಿಂಗ್ ನಡೆಸಲಾಯಿತು.
ಸಂತ್ರಸ್ತ ಬಾಲಕ ಶನಿವಾರ ಸಂಜೆ 6.30 ರ ಸುಮಾರಿಗೆ ಹೌಜ್ ಖಾಸ್‌ನ ಸೆಂಟ್ರಲ್ ಪಾರ್ಕ್‌ನಲ್ಲಿ ಆಟವಾಡುತ್ತಾ ಮನೆಗೆ ಹೋಗುತ್ತಿದ್ದಾಗ 12 ರಿಂದ 14 ವರ್ಷ ವಯಸ್ಸಿನ ಅವನ ಮೂವರು ಸ್ನೇಹಿತರು ಅವನನ್ನು ತಮ್ಮೊಂದಿಗೆ ಯಾರೂ ಇಲ್ಲದ ಸ್ಥಳಕ್ಕೆ ಬರುವಂತೆ ಒತ್ತಾಯಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಅಂಕಿತಾ ಲೋಖಂಡೆ ಪತಿಯ 100 ಕೋಟಿ ರೂ. ಸಾಮ್ರಾಜ್ಯದೊಳಗೆ ಏನುಂಟು ಏನಿಲ್ಲ?
'ಆರೋಪಿಗಳಲ್ಲಿ ಒಬ್ಬನು ತರಕಾರಿ ಹೆಚ್ಚುವ ಚಾಕು ತೋರಿಸಿ ತನ್ನ ಖಾಸಗಿ ಅಂಗವನ್ನು ಬಾಲಕನ ಬಾಯಿಗೆ ಹಾಕಿದನು. ಮೂವರು ಆ ಕೃತ್ಯವನ್ನು ತಮ್ಮ ಮೊಬೈಲ್ ಫೋನ್‌ನಲ್ಲಿ ಸೆರೆ ಹಿಡಿದಿದ್ದಾರೆ,' ಎಂದು ಅವರು ವಿವರಿಸಿದ್ದಾರೆ.
ಕೃತ್ಯದ ಬಗ್ಗೆ ಯಾರಿಗಾದರೂ ತಿಳಿಸಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಆರೋಪಿಗಳು ಬೆದರಿಕೆ ಹಾಕಿದ್ದಾರೆ. ಭಯದಿಂದ, ಹುಡುಗ ತಾನು ಅನುಭವಿಸಿದ ಕಷ್ಟವನ್ನು ಪೋಷಕರಿಂದ ಮರೆ ಮಾಡಿದ್ದಾನೆ.
ಬಾಲಕನ ಹೇಳಿಕೆಯ ಆಧಾರದ ಮೇಲೆ, ಹೌಜ್ ಖಾಸ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 377 (ಅಸ್ವಾಭಾವಿಕ ಲೈಂಗಿಕತೆ) ಮತ್ತು 506 (ಕ್ರಿಮಿನಲ್ ಬೆದರಿಕೆ) ಮತ್ತು ಪೋಕ್ಸೊ ಕಾಯ್ದೆಯ 12 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.