ದೆಹಲಿಯಲ್ಲಿ ಕಫದ ಸಿರಪ್‌ ಕುಡಿದು ಮೂವರು ಮಕ್ಕಳ ದಾರುಣ ಸಾವು

By Contributor Asianet  |  First Published Dec 21, 2021, 11:18 AM IST
  • ಕಪದ ಸಿರಪ್‌ ಕುಡಿದು ಮೂವರು ಮಕ್ಕಳ ಸಾವು
  • ವಿಷವಾಗಿ ಪರಿಣಮಿಸಿದ dextromethorphan ಸಿರಪ್‌
  • ದೆಹಲಿಯ  ಕಲಾವತಿ ಸರಣ್ ಮಕ್ಕಳ ಆಸ್ಪತ್ರೆಯಲ್ಲಿ ದುರಂತ

ನವದೆಹಲಿ(ಡಿ.21): ಕೆಮ್ಮು ಹಾಗೂ ಕಫ ನಿವಾರಕ ಔಷಧಿ ಸೇವಿಸಿ ಮೂವರು ಮಕ್ಕಳು ಸಾವಿಗೀಡಾದ ಘಟನೆ ದೆಹಲಿಯ ಕಲಾವತಿ ಸರಣ್‌ ಮಕ್ಕಳ ಆಸ್ಪತ್ರೆಯಲ್ಲಿ ( Kalawati Saran Children Hospital) ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಮೂವರು ವೈದ್ಯರನ್ನು ಸೇವೆಯಿಂದ ವಜಾಗೊಳಿಸಿ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ದೆಹಲಿ ಸರ್ಕಾರ ಆದೇಶಿಸಿದೆ. ಅಧಿಕಾರಿಗಳ ಪ್ರಕಾರ, ಕೇಂದ್ರ ಸರ್ಕಾರ ನಡೆಸುತ್ತಿರುವ ಕಲಾವತಿ ಸರಣ್‌ ಮಕ್ಕಳ ಆಸ್ಪತ್ರೆಯಲ್ಲಿ ಜೂನ್ 29 ರಿಂದ ನವೆಂಬರ್ 21 ರವರೆಗೆ ಒಂದರಿಂದ ಆರು ವರ್ಷದೊಳಗಿನ 16  ಮಕ್ಕಳಿಗೆ ನೀಡಿದ್ದ  ಡೆಕ್ಸ್ಟ್ರೋಮೆಥಾರ್ಫಾನ್ ಔಷಧಿ ವಿಷವಾಗಿ ಪರಿಣಮಿಸಿದ  ಪ್ರಕರಣ ವರದಿ ಆಗಿದೆ. 

ಹೆಚ್ಚಿನ ಮಕ್ಕಳು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ ಎಂದು ದೂರಿದ್ದಾರೆ. ಆದರೆ ಸಾವನ್ನಪ್ಪಿದ ಮೂವರು ಮಕ್ಕಳು ಆಸ್ಪತ್ರೆಗೆ ಬರುವ ವೇಳೆಯ ತುಂಬಾ ಹದಗೆಟ್ಟ ಸ್ಥಿತಿಯಲ್ಲಿದ್ದರು ಎಂದು ಆಸ್ಪತ್ರೆಯ ಹಿರಿಯ ವೈದ್ಯರು ತಿಳಿಸಿದ್ದಾರೆ. ಮಕ್ಕಳ ಸಾವಿನ ಹಿನ್ನೆಲೆಯಲ್ಲಿ ನಗರಾಡಳಿತ ಮೂವರು ವೈದ್ಯರನ್ನು ಸೇವೆಯಿಂದ ವಜಾಗೊಳಿಸಿದೆ ಎಂದು ಆರೋಗ್ಯ ಸಚಿವ(Health Minister) ಜೈನ್ ಹೇಳಿದ್ದಾರೆ. ಘಟನೆಯ ಕುರಿತು ತನಿಖೆಗೆ ಆದೇಶಿಸಲಾಗಿದೆ ಮತ್ತು ತಪ್ಪಿತಸ್ಥರನ್ನು ಸುಮ್ಮನೆ ಬಿಡಲಾಗುವುದಿಲ್ಲ ಎಂದು ಅವರು ಹೇಳಿದ್ದಾರೆ. 

Tap to resize

Latest Videos

Puneeth Rajkumar ನಿಧನದ ನಂತರ ಚಿಕ್ಕ ಮಕ್ಕಳಲ್ಲೂ ಶುರುವಾಗಿದೆ ಎದೆ ನೋವಿನ ಭಯ?

ಕೆಲವು ದಿನಗಳ ಹಿಂದೆ ಕಲಾವತಿ ಸರಣ್ ಆಸ್ಪತ್ರೆಯಲ್ಲಿ ಔಷಧ ಸೇವನೆಯಿಂದ ವ್ಯತಿರಿಕ್ತ ಪರಿಣಾಮ ಬೀರಿ ಮೂವರು ಮಕ್ಕಳು ಮೃತಪಟ್ಟಿದ್ದು, ವಿಷಯ ತಿಳಿದ ತಕ್ಷಣ ಮೂವರು ವೈದ್ಯರನ್ನು ಸೇವೆಯಿಂದ ಅಮಾನತುಗೊಳಿಸಿ ತನಿಖೆಗೆ ಆದೇಶಿಸಿದ್ದೇವೆ. ಅಲ್ಲದೇ ಘಟನೆಯ ಬಗ್ಗೆ ದೆಹಲಿ ವೈದ್ಯಕೀಯ ಮಂಡಳಿ (Delhi Medical Council)ಗೆ ದೂರು ನೀಡಿದ್ದೇವೆ ಎಂದು ಸಚಿವರು ಹೇಳಿದರು. ಘಟನೆಗೆ ಸಂಬಂಧಿಸಿದಂತೆ ದೆಹಲಿ ಸರ್ಕಾರ ಸೋಮವಾರ ನಾಲ್ಕು ಸದಸ್ಯರ ತನಿಖಾ ಸಮಿತಿಯನ್ನು ರಚಿಸಿದೆ. ಜಿಲ್ಲಾ ಮುಖ್ಯ ವೈದ್ಯಕೀಯ ಅಧಿಕಾರಿ (ಆಗ್ನೇಯ ದೆಹಲಿ) ಡಾ. ಗೀತಾ ( Dr Geeta) ಅವರು ಈ ಸಮಿತಿಗೆ ಅಧ್ಯಕ್ಷರಾಗಿದ್ದು, ಏಳು ದಿನಗಳಲ್ಲಿ ಈ ಬಗ್ಗೆ ವರದಿ ಸಲ್ಲಿಸುವಂತೆ ಸಮಿತಿಗೆ ಕೇಳಲಾಗಿದೆ. 

ಆಸ್ಪತ್ರೆಯ ಆಡಳಿತವು ಡೆಕ್ಸ್ಟ್ರೋಮೆಥೋರ್ಫಾನ್  ಔಷಧಿ ಬಗ್ಗೆ ಜುಲೈ 1 ರಂದೇ ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ದೆಹಲಿ ಸರ್ಕಾರಕ್ಕೆ ಈ ವಿಷಯವನ್ನು ವರದಿ ಮಾಡಿತ್ತು.. ಸಚಿವಾಲಯವು ಅಕ್ಟೋಬರ್ ಅಂತ್ಯದಲ್ಲಿ ಈ ವಿಷಯದ ಬಗ್ಗೆ ತನಿಖೆ ಪ್ರಾರಂಭಿಸಿತು ಎಂದು ಹಿರಿಯ ವೈದ್ಯರು ತಿಳಿಸಿದ್ದಾರೆ. ಡೆಕ್ಸ್ಟ್ರೋಮೆಥೋರ್ಫಾನ್ (Dextromethorphan) ಅತ್ಯಂತ ಮಾಮೂಲಿಯಾಗಿ ಬಳಸಲಾಗುವ ಕೆಮ್ಮು ನಿವಾರಕ ಔಷಧಿಯಲ್ಲಿ ಒಂದಾಗಿದೆ. ಆದಾಗ್ಯೂ, ಇದು ಅಡ್ಡ ಪರಿಣಾಮಗಳಿಗೆ ಕಾರಣವಾಗುತ್ತಿದೆ. ಈ ಔಷಧದ ಹೆಚ್ಚಿನ ಪ್ರಮಾಣದ ಸೇವನೆ ನಿದ್ರಾಹೀನತೆ, ತಲೆತಿರುಗುವಿಕೆ, ವಾಕರಿಕೆ, ಚಡಪಡಿಕೆ, ಉಸಿರಾಟ ಸಮಸ್ಯೆ ಮತ್ತು ಅತಿಸಾರ ಇತ್ಯಾದಿಗಳಿಗೆ ಕಾರಣವಾಗಬಹುದು.

ಕೊರೋನಾ 2ನೇ ಅಲೆ; ಏಪ್ರಿಲ್-ಮೇ ಅವಧಿಯಲ್ಲಿ 645 ಮಕ್ಕಳು ತಬ್ಬಲಿ!

ಡಿಸೆಂಬರ್ 7 ರಂದು, ಕೇಂದ್ರ ಆರೋಗ್ಯ ಸಚಿವಾಲಯದ ಅಧೀನದಲ್ಲಿರುವ ಆರೋಗ್ಯ ಸೇವೆಯ ಡೈರೆಕ್ಟರೇಟ್ ಜನರಲ್ ಡಾ ಸುನೀಲ್ ಕುಮಾರ್ ( Dr Sunil Kumar) ಅವರು ದೆಹಲಿ ಸರ್ಕಾರಕ್ಕೆ ಪತ್ರ ಬರೆದಿದ್ದು, ಡಿಸ್ಪೆನ್ಸರಿಗಳು ಮತ್ತು ಮೊಹಲ್ಲಾ ಚಿಕಿತ್ಸಾಲಯಗಳಲ್ಲಿ ವೈದ್ಯರು 4 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಡೆಕ್ಸ್ಟ್ರೋಥೋರ್ಫಾನ್ ಅನ್ನು ಶಿಫಾರಸು ಮಾಡುವುದನ್ನು ನಿಲ್ಲಿಸುವಂತೆ ಕೇಳಿಕೊಂಡಿದ್ದರು. ಜೊತೆಗೆ ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಒಮೆಗಾ ಫಾರ್ಮಾ ಕಂಪನಿ ತಯಾರಿಸಿದ ಈ ಔಷಧವನ್ನು ಹಿಂಪಡೆಯುವಂತೆ ನಗರಾಡಳಿತಕ್ಕೆ ಡಾ. ಸುನೀಲ್‌ ಕುಮಾರ್‌ ಸೂಚಿಸಿದರು.

ಕಲಾವತಿ ಸರಣ್‌ ಮಕ್ಕಳ ಆಸ್ಪತ್ರೆಯಲ್ಲಿ ಡೆಕ್ಸ್ಟ್ರೋಮೆಥೋರ್ಫಾನ್ ವಿಷವಾಗಿ ಪರಿಣಮಿಸಿದ 16 ಪ್ರಕರಣಗಳು ವರದಿಯಾಗಿವೆ. ಅದರಲ್ಲಿ ಮೂರು ಮಕ್ಕಳು ಪ್ರಾಣ ಬಿಟ್ಟಿದ್ದಾರೆ. ಈ ಮಕ್ಕಳಿಗೆ ದೆಹಲಿ ಸರ್ಕಾರದ ಅಡಿ ಕಾರ್ಯ ನಿರ್ವಹಿಸುವ ಮೊಹಲ್ಲಾ ಕ್ಲಿನಿಕ್‌ಗಳು ಡೆಕ್ಸ್ಟ್ರೋಮೆಥೋರ್ಫಾನ್ ಔಷಧವನ್ನು ಶಿಫಾರಸು ಮಾಡಿದ್ದು, ಈ  ವಯಸ್ಸಿನ ಮಕ್ಕಳಿಗೆ ಈ ಔಷಧವನ್ನು ಯಾವುದೇ ಕಾರಣಕ್ಕೂ ಶಿಫಾರಸು ಮಾಡುವಂತಿಲ್ಲ ಎಂದು ಅವರು ತಮ್ಮ ಪತ್ರದಲ್ಲಿ ಬರೆದಿದ್ದರು. 

ಈ ಮಧ್ಯೆ ದೆಹಲಿ ಬಿಜೆಪಿ ಅಧ್ಯಕ್ಷ ಆದೇಶ್ ಗುಪ್ತಾ ( Adesh Gupta) ಹೆಚ್ಚು ಪ್ರಚಾರ ಪಡೆದ ವಿಶ್ವ ದರ್ಜೆಯ ಮೊಹಲ್ಲಾ ಚಿಕಿತ್ಸಾಲಯಗಳ ಕಟುವಾದ ವಾಸ್ತವವು ಎಲ್ಲರ ಮುಂದೆ ಹೊರಬಂದಿದೆ. ಈ ಘಟನೆಯ ಹೊಣೆ ಹೊತ್ತು ಸಿಎಂ ಕೇಜ್ರಿವಾಲ್(Kejriwal) ಮತ್ತು ಆರೋಗ್ಯ ಸಚಿವ ಜೈನ್ (Jain) ರಾಜೀನಾಮೆ ನೀಡಬೇಕು ಮತ್ತು ಮೃತ ಮಕ್ಕಳ ಕುಟುಂಬಗಳಿಗೆ ಪರಿಹಾರ ನೀಡಬೇಕು ಎಂದು ಅವರು ಒತ್ತಾಯಿಸಿದರು. ಮೃತ ಮೂರು ಮಕ್ಕಳ ಕುಟುಂಬಕ್ಕೆ ತಲಾ  1 ಕೋಟಿ ಪರಿಹಾರ ಹಾಗೂ ಇತರ 13 ಮಕ್ಕಳಿಗೆ 10 ಲಕ್ಷ ರೂ ಪರಿಹಾರ ನೀಡಬೇಕು ಎಂದು ದೆಹಲಿ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಕುಮಾರ್ (Anil Kumar)ಒತ್ತಾಯಿಸಿದ್ದಾರೆ. 

click me!