200 ವೈದ್ಯ ಸಿಬ್ಬಂದಿಗೆ ಕೊರೋನಾ ಸೋಂಕು| 12 ಖಾಸಗಿ ಆಸ್ಪತ್ರೆಗಳ ಕಾರ‍್ಯನಿರ್ವಹಣೆಯನ್ನು ಪೂರ್ಣ ಸ್ಥಗಿತ
ಮುಂಬೈ(ಏ.12): ದೇಶದಲ್ಲಿ ಕೊರೋನಾ ಸೋಂಕಿತ ವೈದ್ಯ ಸಿಬ್ಬಂದಿಗಳ ಸಂಖ್ಯೆ 200ಕ್ಕೆ ಏರಿಕೆಯಾಗಿದ್ದು, 12 ಖಾಸಗಿ ಆಸ್ಪತ್ರೆಗಳ ಕಾರ‍್ಯನಿರ್ವಹಣೆಯನ್ನು ಪೂರ್ಣ ಸ್ಥಗಿತಗೊಳಿಸಲಾಗಿದೆ.
ಈ ನಡುವೆ ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದ ವೈದ್ಯ ಸಿಬ್ಬಂದಿಗಳ ಸಂಘ ಸಂಸ್ಥೆಗಳು ಆರೋಗ್ಯ ಸಿಬ್ಬಂದಿಗೆ ಸರ್ಕಾರ ಸರಿಯಾಗಿ ಮಾಸ್ಕ್, ಗ್ಲೌಸ್ ಮತ್ತು ಸುರಕ್ಷತಾ ಕಿಟ್‌ಗಳನ್ನು ಒದಗಿಸುತ್ತಿಲ್ಲ ಎಂದು ದೂರಿವೆ.
ಸೋಂಕಿತ ಪಕ್ಕಕ್ಕೆ ಬಂದರೆ ಅಲರ್ಟ್ ಮಾಡುತ್ತೆ ಈ ಆ್ಯಪ್!
ಕಳೆದ 2 ವಾರಗಳಲ್ಲಿ ಮುಂಬೈನ ಆಸ್ಪತ್ರೆಗಳಲ್ಲಿಯೇ ವೈದ್ಯರು ಮತ್ತು ಸಿಬ್ಬಂದಿಗಳು ಸೇರಿ ಸುಮಾರು 90 ಜನರಿಗೆ ಕೊರೋನಾ ಸೋಂಕು ಪತ್ತೆಯಾಗಿರುವುದು, ಮಾರಕ ವೈರಸ್ ನಿಗ್ರಹಕ್ಕೆ ಆಸ್ಪತ್ರೆಗಳಲ್ಲಿ ಕೈಗೊಂಡ ಮುಂಜಾಗ್ರತಾ ಕ್ರಮಗಳ ಬಗ್ಗೆಯೇ ಪ್ರಶ್ನೆ ಹುಟ್ಟುವಂತೆ ಮಾಡಿದೆ.