ಝಾನ್ಸಿ ರಾಣಿ ಹೋರಾಟದ ಬಗ್ಗೆ ಚೀನೀ ಪ್ರಧಾನಿಗಿದ್ದ ಅಭಿಮಾನ ನೆಹರುಗಿರಲಿಲ್ಲ..!

By Suvarna NewsFirst Published Jul 7, 2020, 3:45 PM IST
Highlights

ಇತಿಹಾಸವನ್ನು ನೋಡುತ್ತಾ ಹೋದರೆ ನಮ್ಮನ್ನಾಳಿದವರ ಪಾಸಿಟಿವ್ ಹಾಗೂ ನೆಗೆಟಿವ್ ಮುಖಗಳು ಬಿಚ್ಚಿಕೊಳ್ಳುತ್ತಾ ಹೋಗುತ್ತವೆ. ಆ ಸಾಲಿನಲ್ಲಿ ಪ್ರಮುಖವಾಗಿ ಬರುವವರು ಜವಹರ್‌ಲಾಲ್ ನೆಹರು. ಝಾನ್ಸಿ ರಾಣಿ ಲಕ್ಷ್ಮೀ ಭಾಯಿ ಬಗ್ಗೆ ನೆಹರು ಲಘುವಾಗಿ ಮಾತನಾಡಿದ ಪ್ರಸಂಗವಿದು. ನಮ್ಮ ಸ್ವತಂತ್ರ ಹೋರಾಟಗಾರರ ಬಗ್ಗೆ ಒಳ್ಳೆಯ ಮಾತುಗಳನ್ನಾಡದಷ್ಟು ಸಣ್ಣವರಾದರೆ ನೆಹರು ಎಂದೆನಿಸುತ್ತದೆ. 

ನವದೆಹಲಿ (ಜು. 07): 1954 ರಲ್ಲಿ ಪಂಡಿತ್ ನೆಹರು ಭೇಟಿಗೆ ಬಂದಿದ್ದ ಚೀನಿ ಪ್ರಧಾನಿ ಚೌ ಎನ್ ಲಾಯ್  ಬೆಳಿಗ್ಗೆ ಮಾತುಕತೆ ಶುರು ಮಾಡುವುದ್ದಕ್ಕಿಂತ ಮುಂಚೆ ಸೊಹ್ರಾಬ್ ಮೋದಿ ಅವರ ಝಾನ್ಸಿ ಕಿ ರಾಣಿ ಚಲನ ಚಿತ್ರ ನೋಡಿ ಬಂದಿರುತ್ತಾರೆ.

ಗಡಿ ಬಗ್ಗೆ ಚೀನಾ ಜತೆ ಮಾತಾಡಲು ಒಪ್ಪದ ನೆಹರು; ಲಡಾಕ್‌ನತ್ತ ನುಗ್ಗಿದ ಚೀನೀ ಸೈನಿಕರು

ಒಳ್ಳೆಯ ಚಿತ್ರ ವಿದೇಶಿಯರ ವಿರುದ್ಧದ ಹೋರಾಟ  ಎಂದು ಚೀನಿ ಪ್ರಧಾನಿ ಹೇಳಿದರೆ ಭಾರತದ ಪ್ರಧಾನಿ ಇಲ್ಲ ಅದು ಕೇವಲ ಜಮೀನ್ದಾರಿಗಳ ಹೋರಾಟ ಎನ್ನುತ್ತಾರಂತೆ.ಆಗ ಮಾವೋ ಜೊತೆಯಲ್ಲಿ  ಸುದೀರ್ಘ ಹೋರಾಟ ಮಾಡಿ ಪ್ರಧಾನಿ ಆಗಿದ್ದ  ಚೌ  ಎನ್ ಲಾಯ್ ವಿದೇಶಿಯರ ವಿರುದ್ಧ ಮೊದಲು ಬೀದಿ ಗಿಳಿಯುವುದು ಶ್ರೀಮಂತರೆ ಅಲ್ಲವೇ ಆಮೇಲೆ ಸಾಮಾನ್ಯರು ಜೊತೆ ಗೂಡುತ್ತಾರೆ ಎನ್ನುತ್ತಾರಂತೆ. ಆದರೆ ನೆಹರು ಇಲ್ಲ ಇಲ್ಲ ಎಂದು ತಲೆ ಯಾಡಿಸುತ್ತಾರೆ.ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ದ ಗಾಥೆ ಬರೆದು ಸಾವರ್ಕರ್ ರಾಣಿ ಲಕ್ಷ್ಮಿ ಬಾಯಿ ಮತ್ತು ತಾತ್ಯಾ ಟೋಪಿ ಯನ್ನು ಹೀರೊ ಗಳಂತೆ ಚಿತ್ರಿಸಿದ ಬಗ್ಗೆ ನೆಹರು ಅವರಿಗೆ ಅಸಹನೆ ಇತ್ತು ಎನಿಸುತ್ತದೆ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ  

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ 

click me!