ದೇಶದಲ್ಲಿ ದಾಖಲೆಯ 18840 ಜನಕ್ಕೆ ಕೊರೋನಾ, 404 ಮಂದಿ ಸಾವು!

By Kannadaprabha News  |  First Published Jun 22, 2020, 7:56 AM IST

ದೇಶದಲ್ಲೀಗ 4 ಲಕ್ಷ ಗಡಿ ದಾಟಿದ ಸೋಂಕು| ನಿನ್ನೆ ದಾಖಲೆಯ 18840 ಜನಕ್ಕೆ ಕೊರೋನಾ, 404 ಮಂದಿ ಸಾವು!| ಎಂಟೇ ದಿನದಲ್ಲಿ 1 ಲಕ್ಷ ಮಂದಿಗೆ ವೈರಸ್‌


ನವದೆಹಲಿ(ಜೂ.22): ದೇಶದಲ್ಲಿ ಭಾನುವಾರ ಒಂದೇ ದಿನ ಸಾರ್ವಕಾಲಿಕ ದಾಖಲೆಯ 18840 ಕೊರೋನಾಪೀಡಿತರು ಪತ್ತೆಯಾಗಿದ್ದಾರೆ. ಇದರೊಂದಿಗೆ ಕೊರೋನಾ ಸೋಂಕಿತರ ಸಂಖ್ಯೆ 4 ಲಕ್ಷದ ಗಡಿ ದಾಟಿ 412690ಕ್ಕೆ ಏರಿಕೆಯಾಗಿದೆ. ಕೇವಲ 8 ದಿನಗಳಲ್ಲಿ ಒಂದು ಲಕ್ಷ ಕೇಸ್‌ ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಇದೇ ವೇಳೆ ಭಾನುವಾರ ಕೊರೋನಾಕ್ಕೆ 404 ಮಂದಿ ಬಲಿಯಾಗಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 13504ಕ್ಕೆ ಏರಿಕೆಯಾಗಿದೆ. ಬುಧವಾರ ದೇಶದಲ್ಲಿ 15084 ಪ್ರಕರಣ ದಾಖಲಾಗಿದ್ದೇ ಈವರೆಗಿನ ದಾಖಲೆಯಾಗಿತ್ತು. ಅಂದೇ ದೇಶದಲ್ಲಿ ದಾಖಲೆಯ 454 ಸಾವುಗಳು ಸಂಭವಿಸಿದ್ದವು.

ರಾಜ್ಯದಲ್ಲಿ 482 ಕೊರೋನಾ ಕೇಸ್‌ ಹೈರಿಸ್ಕ್‌, ಹೆಚ್ಚಿದ ಆತಂಕ!

Tap to resize

Latest Videos

ಕಳೆದ 10 ದಿನಗಳಿಂದ ನಿರಂತರವಾಗಿ 10 ಸಾವಿರಕ್ಕೂ ಹೆಚ್ಚು ಕೊರೋನಾ ವೈರಸ್‌ ಪ್ರಕರಣಗಳು ದಾಖಲಾಗುತ್ತಿವೆ. ದೇಶದಲ್ಲಿ ಜೂ.1ರಿಂದ ಜೂ.21ರ ಅವಧಿಯಲ್ಲಿ 2,19,926 ಕೊರೋನಾ ವೈರಸ್‌ ಪ್ರಕರಣಗಳು ದಾಖಲಾಗಿವೆ. ಇದೇ ವೇಳೆ ಶೇ.56ರಷ್ಟುರೋಗಿಗಳು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಈವರೆಗೆ 2,27,755 ರೋಗಿಗಳು ಗುಣಮುಖರಾಗಿದ್ದು, ದೇಶದಲ್ಲೀಗ 1,69,451 ಸಕ್ರಿಯ ಪ್ರಕರಣಗಳಿವೆ.

ಕೊರೋನಾ ಮೈಲಿಗಲ್ಲು

ಕೇಸ್‌ ಅವಧಿ

100- 1 ಲಕ್ಷ 109 ದಿನ

1ರಿಂದ 2 ಲಕ್ಷ 15 ದಿನ

2ರಿಂದ 3 ಲಕ್ಷ 10 ದಿನ

3ರಿಂದ 4 ಲಕ್ಷ 8 ದಿನ

ತ.ನಾಡು ಹಿಂದಿಕ್ಕಿ ದಿಲ್ಲಿ 2ನೇ ಸ್ಥಾನಕ್ಕೆ

ನವದೆಹಲಿ: ರಾಷ್ಟ್ರ ರಾಜದಾನಿ ದೆಹಲಿಯಲ್ಲಿ ಸತತ ಮೂರನೇ ದಿನವೂ 3 ಸಾವಿರಕ್ಕೂ ಅಧಿಕ ಕೊರೋನಾ ವೈರಸ್‌ ಪ್ರಕರಣಗಳು ದಾಖಲಾಗಿದ್ದು, ಸೋಂಕಿತರ ಸಂಂಖ್ಯೆ 60 ಸಾವಿರ ಗಡಿ ದಾಟಿದೆ. ಈ ಮೂಲಕ ಸೋಂಕಿತರ ಸಂಖ್ಯೆಯಲ್ಲಿ ತಮಿಳುನಾಡು ಹಿಂದಿಕ್ಕಿ 2ನೇ ಸ್ಥಾನಕ್ಕೆ ಜಿಗಿದಿದೆ. ತಮಿಳುನಾಡಿನಲ್ಲಿ 59,377 ಸೋಂಕಿತರಿದ್ದಾರೆ. 1.28 ಲಕ್ಷದೊಂದಿಗೆ ಮಹಾರಾಷ್ಟ್ರ ಪ್ರಥಮ ಸ್ಥಾನದಲ್ಲಿದೆ.

ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 128205ಕ್ಕೆ ತಲುಪಿದ್ದು, 5984 ಮಂದಿ ಬಲಿಯಾಗಿದ್ದಾರೆ. ಇನ್ನು ಎರಡನೇ ಸ್ಥಾನಕ್ಕೆ ಏರಿರುವ ದೆಹಲಿಯಲ್ಲಿ ಸೋಂಕಿತರ ಸಂಖ್ಯೆ 59746ಕ್ಕೆ ಏರಿಕೆ ಆಗಿದೆ. ಅದೇ ರೀತಿ ತಮಿಳುನಾಡಿನಲ್ಲಿ ಸೋಂಕಿತರ ಸಂಖ್ಯೆ 59377ಕ್ಕೆ ತಲುಪಿದೆ.

ಕೊರೋನಾಕ್ಕೆ ಮತ್ತೊಂದು ಔಷಧ, ಸರ್ಕಾರದಿಂದಲೂ ಸಮ್ಮತಿ: ಬೆಲೆ ಎಷ್ಟು?

ಭಾರತದಲ್ಲಿ ಕೊರೋನಾಕ್ಕೆ ರಣವೇಗ:

ಭಾರತದಲ್ಲಿ ಕೊರೋನಾ ವೈರಸ್‌ ಪ್ರಕರಣ 100 ರಿಂದ 1 ಲಕ್ಷ ಗಡಿಯನ್ನು ಮುಟ್ಟಲು 64 ದಿನಗಳು ಬೇಕಾಗದ್ದವು. ಕಟ್ಟುನಿಟ್ಟಿನ ಲಾಕ್‌ಡೌನ್‌ನಿಂದಾಗಿ ಕೊರೋನಾ ವೈರಸ್‌ ಪ್ರಕರಣಗಳು ನಿಯಂತ್ರಣಕ್ಕೆ ಬಂದಿದ್ದವು. ಆ ಬಳಿಕ 15 ದಿನಗಳ ಅಂತರದಲ್ಲಿ ಕೊರೋನಾ ವೈರಸ್‌ ಪ್ರಕರಣಗಳ ಸಂಖ್ಯೆ 2 ಲಕ್ಷಕ್ಕೆ ಏರಿಕೆ ಆಗಿತ್ತು. ಬಳಿಕ 10 ದಿನಗಳ ಅಂತರದಲ್ಲಿ ಮತ್ತೆ 1 ಲಕ್ಷಕ್ಕೆ ಏರಿಕೆ ಆಗಿ 3 ಲಕ್ಷ ಗಡಿಗೆ ತಲುಪಿತ್ತು.

click me!