ಮೋದಿ ಬಿಡುಗಡೆ ಮಾಡಿದ 17 ಸುಪರ್ ತಳಿಗಳು, ಏನಿದರ ವಿಶೇಷ?

By Suvarna NewsFirst Published Oct 16, 2020, 9:40 PM IST
Highlights

ಆಹಾರ ಭದ್ರತೆ ವಿಚಾರದಲ್ಲಿ ಹೊಸ ಹೆಜ್ಜೆ/ ಹದಿನೇಳು ಹೊಸ ತಳಿಗಳ ಅನಾವರಣ ಮಾಡಿದ ಪ್ರಧಾನಿ/ ಅಪೌಷ್ಠಿಕತೆಯನ್ನು ನಿವಾರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ದೃಢ ಹೆಜ್ಜೆ/ ಹೊಸ ತಳಿಗಳ ಬಗ್ಗೆ ತಿಳಿದುಕೊಳ್ಳೋಣ

ನವದೆಹಲಿ(.16)  ದೇಶದ ಅಪೌಷ್ಠಿಕತೆಯನ್ನು ನಿವಾರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ದೃಢ ಹೆಜ್ಜೆ ಇಟ್ಟಿದ್ದು, ಸಿರಿಧಾನ್ಯಗಳು ಮತ್ತು ಅಕ ಪಷಕಾಂಶದ ಬೆಳೆಗಳ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ ಎಂದಿರುವ ಪ್ರಧಾನಿ ನರೇಂಧ್ರ ಮೋದಿ  17 ಜೈವಿಕ ಭದ್ರತೆಯ ಹೊಸ ತಳಿ ಬೆಳೆಗಳನ್ನು ಅನಾವರಣ ಮಾಡಿದ್ದಾರೆ.

ಸ್ಥಳೀಯ ಪರಿಸರಕ್ಕೆ ಅನುಗುಣವಾಗಿ ಬೆಳೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಬಿಸಿಯೂಟ ಮತ್ತು ಅಂಗನವಾಡಿ ಊಟಕ್ಕೆ ಈ ಹೊಸ ಆಹಾರಗಳು ಬಳಕೆಯಾಗಲಿವೆ. ರೈತರ ಆದಾಯ ದ್ವಿಗುಣ ಮಾಡುವ  ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ.

ನೆರೆ ಹಾವಳಿ; ಕರ್ನಾಟಕಕ್ಕೆ ಕೇಂದ್ರದ ಅಭಯ, ನಿಮ್ಮೊಂದಿಗೆ ಇದ್ದೇವೆ ಎಂದ ಮೋದಿ

ಹಾಗಾದರೆ ಪ್ರಧಾನಿ ಅನಾವರಣ ಮಾಡಿದ ಹೊಸ ತಳಿಗಳು  ಯಾವವು?
ಅಕ್ಕಿ; ಸಿಆರ್ ಧನ್ 315 (ಜಿಂಕ್ ಪ್ರಮಾಣ ಅಧಿಕ)

ಗೋಧಿ; ಎಚ್‌ಐ 1663(ಪ್ರೋಟಿನ್, ಕಬ್ಬಿಣಾಂಶ, ಜಿಂಕ್) 

ಗೋಧಿ; ಡಿಬಿಡಬ್ಲೂ 303 ಮತ್ತು ಡಿಡಿಡಬ್ಲೂ 48(ಪ್ರೋಟಿನ್) 

ಲಾಡೋವಾಲ್; ಕ್ವಾಲಿಟಿ ಪ್ರೋಟಿನ್ ಮೈಕ್ ಹೈಬ್ರಿಡ್ 1-2-3( ಲೈಸಿನ್, ಟ್ರಿಪ್ಟೊಫಾನ್ ) 

ರಾಗಿ; ಸಿಎಲ್‌ಎಂವಿ1( ಕಬ್ಬಿಣಾಂಶ ಮತ್ತು ಜಿಂಕ್) 

ಸಾಸಿವೆ; ಪುಸಾ ಸಾಸಿವೆ32 (ಅತಿ ಕಡಿಮೆ ಎರುಸಿಕ್ ಆಸಿಡ್) 

ಶೇಂಗಾ; ಗಿರ್ ನಾರ್ 4 ಮತ್ತು 5 ( ಹೆಚ್ಚಿನ ಒಲೀಕ್ ಆಸಿಡ್) 

ಯಾಮ್; ಶ್ರೀ ನೀಲಿಮಾ( ಜಿಂಕ್ ಮತ್ತು ಅಧಿಕ ಕಬ್ಬಿಣಾಂಶ)

ಯಾಮ್: ಡಿಎ 340 ಜಿಂಕ್ ಮತ್ತು ಅಧಿಕ ಕಬ್ಬಿಣಾಂಶ)

 

ಇಂಗ್ಲಿಷ್‌ ನಲ್ಲಿಯೂ ಓದಿ

click me!