ಪೋಲಿಸರ ಮೇಲೆ ಮೆಣಸಿನ ಹುಡಿ ಎರಚಿ 16 ಕೈದಿಗಳು ಜೈಲಿನಿಂದ ಪರಾರಿ

By Suvarna NewsFirst Published Apr 6, 2021, 11:08 AM IST
Highlights

 ಮೆಣಸಿನ ಹುಡಿ ಎರಚಿ 16 ಕೈದಿಗಳು ಜೈಲಿನಿಂದ ಪರಾರಿ | ರಾಜಸ್ಥಾನದ ಜೋಧ್ಪುರ್ ಜಿಲ್ಲೆಯ ಫಲೋಡಿಯ ಜೈಲಿನಲ್ಲಿ ಘಟನೆ | ಸೋಮವಾರ ಸಂಜೆ ಸುಮಾರು 8.30 ಕ್ಕೇ ಘಟನೆ | ಪರಾರಿಯಾದ ಕೈದಿಗಳ ಪತ್ತೆಗಾಗಿ ಜಿಲ್ಲಾದ್ಯಾಂತ ಪೋಲಿಸ್ ಕಣ್ಗಾವಲು 

ರಾಜಸ್ಥಾನ (ಏ.06) : ರಾಜಸ್ಥಾನದ ಜೊಧ್ಪುರ್ ಜಿಲ್ಲೆಯ ಫಲೋಡಿ ಜೈಲಿನಿಂದ 16 ಜನ ಕೈದಿಗಳು ಪರಾರಿಯಾಗಿದ್ದಾರೆ. ಪೋಲಿಸರ ಕಣ್ಣಿಗೆ ಕರಿ ಮೆಣಸಿನ ಪುಡಿ ಏರಚಿದ ಕೈದಿಗಳು ಪೋಲಿಸರನ್ನು ಥಳಿಸಿ ಪರಾರಿಯಾಗಿದ್ದಾರೆ. ಈ ಘಟನೆ ಸೋಮವಾರ ಸಂಜೆ ಸುಮಾರು 8.30 ಕ್ಕೇ ನಡೆದಿದೆ. ಮೊದಲು ಜೈಲಿನ ಅಡುಗೆ ಕೋಣೆಯಲ್ಲಿ ನೇಮಿಸಲಾಗಿದ್ದ ಮಹಿಳಾ ಭದ್ರತಾ ಸಿಬ್ಬಂದಿಯ ಕಣ್ಣಿಗೆ ಮೆಣಸಿನ ಪುಡಿ ಎರಚಿದ್ದಾರೆ. ಈ ವೇಳೆ ಮಹಿಳಾ ಸಿಬ್ಬಂದಿ ನೆಲಕ್ಕೆ ಬಿದು ಪೆಟ್ಟು ಮಾಡಿಕೊಂಡಿದ್ದಾರೆ ಎಂದು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸರು ದಾಳಿ : ಇಬ್ಬರ ಮಹಿಳೆಯರ ರಕ್ಷಣೆ

ಪರಾರಿಯಾದ ಕೈದಿಗಳಲ್ಲಿ ಮೂವರು ಬಿಹಾರ ಮೂಲದವರಾಗಿದ್ದು ಉಳಿದವರೆಲ್ಲರು ಜೊಧ್ಪುರ್ ಜಿಲ್ಲೆಗೆ ಸೇರಿದವರಾಗಿದ್ದಾರೆ.  ಇವರಲ್ಲಿ ಬಹುತೇಕ ಕೈದಿಗಳು ಡ್ರಗ್ಸ್ ಜಾಲದ ಪ್ರಕರಣಗಳಲ್ಲಿ ಬಂಧಿತರಾದವರು. ʼಘಟನೆಯ ಬಗ್ಗೆ ಎಲ್ಲ ಪೋಲಿಸ್ ಠಾಣೆಗಳಿಗೆ ಮಾಹಿತಿ ನೀಡಲಾಗಿದ್ದು ಎಲ್ಲರಿಗೂ ಜಾಗರೂಕರಾಗಿರುವಂತೆ ಆದೇಶ ನೀಡಲಾಗಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಕೈದಿಗಳ ಪತ್ತೆ ಕಾರ್ಯ ಜಾರಿಯಲ್ಲಿದ್ದು ನಗರದ ಎಲ್ಲ ಹೊರವಲಯಗಳಲ್ಲಿ ಬ್ಯಾರಿಕೇಡ್ಗಳನ್ನು ಇರಿಸಿದ್ದೇವೆ. ಅಕ್ಕಪಕ್ಕದ ಗ್ರಾಮಗಳಲ್ಲಿ ಕೂಡ ಪತ್ತೆ ಕಾರ್ಯ ನಡೆಯುತ್ತಿದ್ದು ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆದುಕೊಳ್ಳಲಾಗಿದೆ. ಬಸ್, ಟ್ರೇನ್ ಸೇರಿದಂತೆ ನಗರದಲ್ಲಿ ಸಂಚರಿಸುತ್ತಿರುವ ಎಲ್ಲ ವಾಹನಗಳ ಮೇಲೆ ನಿಗಾ ವಹಿಸಲಾಗಿದೆ. ಕೈದಿಗಳು ಪರಾರಿಯಾಗಲು ಮೋದಲೇ ಪ್ಲಾನ್ ಮಾಡಿಕೊಂಡಿದ್ದರು ಎನ್ನುವ ಬಗ್ಗೆ ಕೂಡ ತನಿಖೆ ನಡೆಸುತ್ತಿದ್ದೇವೆʼ ಎಂದು ಫಲೋಡಿ ಉಪಜಿಲ್ಲಾಧಿಕಾರಿ ಯಶ್ಪಾಲ್ ಅಹೋಜಾ ತಿಳಿಸಿದ್ದಾರೆ.

ಬಾಲ್ಕನಿಯಲ್ಲಿ ಬೆತ್ತಲಾಗಿ ನಿಂತ ಮಾಡೆಲ್‌ಗಳಿಗೆ ಸಿಕ್ಕ ಶಿಕ್ಷೆ!

ʼಈ ಘಟನೆ ರಾಜ್ಯ ಸರಕಾರದ ವೈಫಲ್ಯದ ಸಂಕೇತ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವ್ಯವಸ್ಥೆ ಹದಗೆಟ್ಟಿದೆ, ಅಲ್ಲದೇ ಜೈಲುಗಳ ಪರಿಸ್ಥಿತಯೂ ಸರಿಯಾಗಿಲ್ಲ ಎಂದು  ಕೇಂದ್ರ ಸಚಿವ ಮತ್ತು ಜೋಧ್ಪುರ್ ಬಿಜೆಪಿ ಸಂಸದ ಗಜೇಂದ್ರ ಸಿಂಗ್ ಶೇಕಾವತ್ ಹೇಳಿದ್ದಾರೆ.

click me!