ಗಣರಾಜ್ಯೋತ್ಸವಕ್ಕಾಗಿ ದಿಲ್ಲಿಗೆ ಬಂದ 150 ಸೈನಿಕರಿಗೆ ಸೋಂಕು!

Published : Dec 28, 2020, 08:20 AM IST
ಗಣರಾಜ್ಯೋತ್ಸವಕ್ಕಾಗಿ ದಿಲ್ಲಿಗೆ ಬಂದ 150 ಸೈನಿಕರಿಗೆ ಸೋಂಕು!

ಸಾರಾಂಶ

ಗಣರಾಜ್ಯೋತ್ಸವ ಮತ್ತು ಸೇನಾ ದಿನದ ಪಥಸಂಚಲನದಲ್ಲಿ ಭಾಗಿಯಾಗಲು ದೇಶದ ವಿವಿಧ ಭಾಗಗಳಿಂದ ರಾಷ್ಟ್ರರಾಜಧಾನಿಗೆ ಬಂದ ಸೈನಿಕರು| ದೆಹಲಿಗೆ ಆಗಮಿಸಿರುವ ಸುಮಾರು 150 ಸೈನಿಕರಿಗೆ ಕೊರೋನಾ ಸೋಂಕು 

ನವದೆಹಲಿ(ಡಿ.28): ಗಣರಾಜ್ಯೋತ್ಸವ ಮತ್ತು ಸೇನಾ ದಿನದ ಪಥಸಂಚಲನದಲ್ಲಿ ಭಾಗಿಯಾಗಲು ದೇಶದ ವಿವಿಧ ಭಾಗಗಳಿಂದ ದೆಹಲಿಗೆ ಆಗಮಿಸಿರುವ ಸುಮಾರು 150 ಸೈನಿಕರಿಗೆ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ಸೇನಾ ಮೂಲಗಳು ತಿಳಿಸಿವೆ. \

‘ಪಥಸಂಚಲನದಲ್ಲಿ ಭಾಗಿಯಾಗಲು ಆಗಮಿಸಿದ್ದ ಯೋಧರನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ಕೆಲವರಿಗೆ ಸೋಂಕು ದೃಢಪಟ್ಟಿದ್ದು, ಬಹುತೇಕರಲ್ಲಿ ಲಕ್ಷಣ ರಹಿತ ಸೋಂಕು ಪತ್ತೆಯಾಗಿದೆ. ಅವರೆಲ್ಲರನ್ನು ದೆಹಲಿ ಕಂಟೋನ್ಮೆಂಟ್‌ನಲ್ಲಿ ಕ್ವಾರಂಟೈನ್‌ ಮಾಡಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ಗಣರಾಜ್ಯೋತ್ಸವ ಮತ್ತು ಸೇನಾ ದಿನದ ಅಂಗವಾಗಿ ಸಾವಿರಾರು ಯೋಧರು ಪ್ರತಿವರ್ಷ ದೆಹಲಿಗೆ ಆಗಮಿಸುತ್ತಾರೆ. ಈ ಬಾರಿಯ ಗಣರಾಜ್ಯೋತ್ಸವಕ್ಕೆ ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಮುಖ್ಯ ಅತಿಥಿಯಾಗಿದ್ದಾರೆ.

ಅಥಿತಿಯಾಗಿ ಆಹ್ವಾನಿಸಿದೆ. ಬ್ರಿಟನ್ನಿನಲ್ಲಿ ರೂಪಾಂತರಿ ಕೊರೋನಾ ವೈರಸ್‌ ಕಾಣಿಸಿಕೊಂಡ ಹೊರತಾಗಿಯೂ ಬೋರಿಸ್‌ ಅವರು ಭಾರತಕ್ಕೆ ಆಗಮಿಸಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬಿಜೆಪಿಯಿಂದ ಟಿಕೆಟ್ ಗಿಟ್ಟಿಸಿಕೊಂಡ ಸೋನಿಯಾ ಗಾಂಧಿಗೆ ಕೇರಳ ಚುನಾವಣೆಯಲ್ಲಿ ಸೋಲು
ಶೇ.100ರಷ್ಟು ಕ್ರಿಶ್ಚಿಯನ್ ಜನಸಂಖ್ಯೆ ಇರುವ ಕೇರಳದ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ ಗೆಲುವು