
ನವದೆಹಲಿ(ಜ.09): ಕರ್ಫ್ಯೂ ಸಡಿಲಿಕೆ ಬಳಿಕ ಜಮ್ಮು ಮತ್ತು ಕಾಶ್ಮೀರಕ್ಕೆ 15 ರಾಷ್ಟ್ರಗಳ ಸದಸ್ಯರ ನಿಯೋಗವೊಂದು ಭೇಟಿ ನೀಡಿದ್ದು, ವಿಶೇಷ ಸ್ಥಾನಮಾನ ರದ್ದತಿ ನಂತರ ಕಣಿವೆಯ ಸ್ಥಿತಿಗತಿ ಕುರಿತು ಪರಿಶೀಲನೆ ನಡೆಸಿದೆ.
ಹೊಸದಾಗಿ ಅಸ್ತಿತ್ವಕ್ಕೆ ಬಂದ ಕೇಂದ್ರಾಡಳಿತ ಪ್ರದೇಶದ ಸ್ಥಿತಿಗತಿ ಅರಿಯುವುದು ನಿಯೋಗದ ಉದ್ದೇಶವಾಗಿದ್ದು, ಕಣಿವೆ ವಿಪಕ್ಷ ನಾಯಕರೊಂದಿಗೆ ಸಮಾಲೋಚನೆ ನಡೆಸಿರುವುದು ವಿಶೇಷ.
ದ.ಕೊರಿಯಾ, ಮೊರಾಕ್ಕೋ, ನೈಜೀರಿಯಾ, ಗಯಾನಾ, ಅರ್ಜೈಂಟೈನಾ, ನಾರ್ವೆ, ಫಿಲಿಪೈನ್ಸ್, ಮಾಲ್ಡೀವ್ಸ್, ಟೋಗೊ, ಫಿಜಿ, ಪೆರು, ಬಾಂಗ್ಲಾದೇಶ ಹಾಗೂ ವಿಯೇಟ್ನಾಂ ದೇಶಗಳ ಪ್ರತಿನಿಧಿಗಳು ನಿಯೋಗದಲ್ಲಿದ್ದಾರೆ.
ಕಣಿವೆ ನೋಡುವುದೇ ಸುಯೋಗ: ಕಣಿವೆಗೆ ಭೇಟಿ ನೀಡಿದ ಯೂರೋಪಿಯನ್ ನಿಯೋಗ!
ಕಣಿವೆಯ ಸಾಮಾನ್ಯ ಜನರೊಂದಿಗೆ ಸಂವಾದ ನಡೆಸಿರುವ ನಿಯೋಗ, ವಿಶೇಷ ಸ್ಥಾನಮಾನ ರದ್ದತಿ ಹಾಗೂ ನಂತರದ ಬೆಳವಣಿಗೆಗಳ ಕುರಿತು ಅಭಿಪ್ರಾಯ ಸಂಗ್ರಹಿಸಿದೆ.
ಈ ವೇಳೆ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಬಹುತೇಕ ಕಾಶ್ಮೀರಿಗರು ಬೆಂಬಲ ಸೂಚಿಸಿದ್ದು ಕಂಡುಬಂದಿದ್ದು, ಶಾಂತಿಗಾಗಿ ಜನರ ಬಯಕೆಯನ್ನು ಸ್ವಾಗತಿಸುವುದಾಗಿ ನಿಯೋಗ ಹೇಳಿದೆ.
ನಿಯೋಗದ ಭೇಟಿಗೂ ಮೊದಲು ಈ ಕುರಿತು ಟ್ವೀಟ್ ಮಾಡಿದ್ದು, ಕಣಿವೆಗೆ ಭೇಟಿ ನೀಡುತ್ತಿರುವ ಎರಡನೇ ನಿಯೋಗವನ್ನು ಸ್ವಾಗತಿಸುವುದಾಗಿ ಹೇಳಿದೆ.
ಈ ಮೊದಲು ಯುರೋಪಿಯನ್ ಯೂನಿಯನ್ ನೇತೃತ್ವದ ನಿಯೋಗ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಕಣಿವೆಯ ಸಾಮಾನ್ಯ ಜನರೊಂದಿಗೆ ಸಂವಾದ ನಡೆಸುವ ಮೂಲಕ ವಸ್ತುಸ್ಥಿತಿಯ ಕುರಿತು ಮಾಹಿತಿ ಪಡೆಯುವುದು ನಿಯೋಗದ ಉದ್ದೇಶ. ಅದರಂತೆ ಜನರನ್ನು ನೇರವಾಗಿ ಮಾತನಾಡಿಸಿ ಮಾಹಿತಿ ಕಲೆ ಹಾಕಲಾಗಿದೆ.
ಅಲ್ಲದೇ ವಿಪಕ್ಷ ನಾಯುಕನ್ನೂ ಭೇಟಿ ಮಾಡಿ ಚರ್ಚೆ ನಡೆಸಲಾಗಿದ್ದು, ವಿಪಕ್ಷದ ಧ್ವನಿಯನ್ನೂ ಕೇಳಿರುವುದು ಈ ನಿಯೋಗದ ವಿಶೇಷತೆ.
ಒಟ್ಟಿನಲ್ಲಿ ಎರಡನೇ ಅಂತಾರಾಷ್ಟ್ರೀಯ ನಿಯೋಗವೊಂದು ಕಣಿವೆಗೆ ಭೇಟಿ ನೀಡಿದ್ದು, ಅಲ್ಲಿನ ಸ್ಥಿತಿಗತಿಯ ನೈಜ ಪರಿಶೀಲನೆ ನಡೆಸಿದ್ದು, ಶಾಂತಿ ಸ್ಥಾಪನೆಯ ಕೇಂದ್ರ ಸರ್ಕಾರದ ನೀತಿಗೆ ಮತ್ತಷ್ಟು ಬಲ ಬಂದಂತಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ