Viral Video: ಕುಸಿದು ಬಿತ್ತು ವಧುವರರಿದ್ದ ಎಲವೇಟೆಡ್‌ ಮದುವೆ ಮಂಟಪ

By Suvarna News  |  First Published Dec 13, 2021, 6:07 PM IST
  • ಕುಸಿದು ಬಿದ್ದ ವಧು ವರರಿದ್ದ ಎಲವೇಟೆಡ್‌ ವೇದಿಕೆ
  • ಸಣ್ಣ ಪುಟ್ಟ ಗಾಯಗಳಿಂದ ಪಾರಾದ ಜೋಡಿ
  • ಛತ್ತೀಸ್‌ಗಡದ ರಾಜಧಾನಿ ರಾಯ್‌ಪುರದಲ್ಲಿ ಘಟನೆ

ಛತ್ತೀಸ್‌ಗಡ: ಮದುವೆಯೊಂದರಲ್ಲಿ ವಧು ವರರಿಗೆ ಕುಳಿತುಕೊಳ್ಳಲು ಮಾಡಿದ (ತೂಗಾಡುವ ವೇದಿಕೆ) ಎಲವೇಟೆಡ್‌ ಪ್ಲಾಟ್‌ಫಾರ್ಮ್‌ವೊಂದು ವಧುವರರಿದ್ದಾಗಲೇ ಕುಸಿದು ಬಿದ್ದ ಘಟನೆ ಛತ್ತೀಸ್‌ಗಡ(Chhattisgarh)ದ ರಾಜಧಾನಿ ರಾಯ್‌ಪುರ(Raipur)ದಲ್ಲಿ ನಡೆದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಅಲ್ಪಸ್ವಲ್ಪ ಗಾಯದೊಂದಿಗೆ ವಧು ವರರು ಬಚಾವಾಗಿದ್ದಾರೆ. ಶನಿವಾರ ನಡೆದ ಸಮಾರಂಭವೊಂದರಲ್ಲಿ ಪಟಾಕಿಗಳೊಂದಿಗೆ ಸಂಪೂರ್ಣ ಎತ್ತರದಲ್ಲಿದ್ದ ತೂಗುವ ವೇದಿಕೆ ಕುಸಿದು ಬಿದ್ದಿದೆ. ಈ ಮೂಲಕ ವಧುವರರು ನಿರೀಕ್ಷಿಸಿದ್ದಕ್ಕಿಂತ ರೋಮಾಂಚನಕಾರಿಯಾಗಿ ಮದುವೆ ನಡೆಯಿತು ಎಂದು ಘಟನೆಯನ್ನು ವರ್ಣಿಸಲಾಗುತ್ತಿದೆ. 

ಘಟನೆಯಲ್ಲಿ ದಂಪತಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, 30 ನಿಮಿಷಗಳ ನಂತರ ಮತ್ತೆ ಮದುವೆಯ ಇತರ ಆಚರಣೆಗಳು ಮುಂದುವರೆದವು. ಪ್ರಸ್ತುತ ಈ ವಿಡಿಯೋ ಸೋಶಿಯಲ್‌ ಮೀಡಿಯಾ(social media)ದಲ್ಲಿ ವೈರಲ್‌ ಆಗಿದೆ. ಪ್ರಾರಂಭದಲ್ಲಿ ವಧು ಮತ್ತು ವರರನ್ನು ವೇದಿಕೆಯಿಂದ ಎಲವೇಟೆಡ್‌ ವೇದಿಕೆ ಮೂಲಕ ಸುಮಾರು ಮೇಲೆ ಎತ್ತಲಾಯಿತು. ನಂತರ ಸ್ವಲ್ಪ ಸಮಯದಲ್ಲೇ ಎಲವೇಟೆಡ್‌ ವೇದಿಕೆ ತಲೆ ಕೆಳಗಾಗಿದ್ದು ವಧು ವರರಿಬ್ಬರು ಕೆಳಗೆ ಬಿದ್ದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ದೂರು ದಾಖಲಾಗಿದೆ. ಇವೆಂಟ್‌ ಮ್ಯಾನೇಜ್‌ಮೆಂಟ್‌ ಸಂಸ್ಥೆಯೊಂದು ಈ ಮದುವೆಯ ಪ್ಲಾನಿಂಗ್‌ ಮಾಡಿದ್ದು, ಸಂಸ್ಥೆ ಘಟನೆ ಬಗ್ಗೆ ಕ್ಷಮೆ ಕೇಳಿದೆ. 

Latest Videos

undefined

Chamarajanagar Farmer Marriage : ಚಾಮರಾಜನಗರದಲ್ಲೊಂದು ವಚನ ಕಲ್ಯಾಣ, ಮಾದರಿ ಹೆಜ್ಜೆ

ಮದುವೆಯ ಸಂಗೀತಾ ಕಾರ್ಯಕ್ರಮದ ವೇಳೆ ಕೆಲವು ತಾಂತ್ರಿಕ ಕಾರಣದಿಂದಾಗಿ ಈ ಘಟನೆ ನಡೆಯಿತು ಎಂದು ಇವೆಂಟ್‌ ಮ್ಯಾನೇಜ್‌ಮೆಂಟ್‌ ಸಂಸ್ಥೆಯ (event management company) ಉದ್ಯೋಗಿಯೊಬ್ಬರು ಹೇಳಿದ್ದಾರೆ.  ಘಟನೆಯಲ್ಲಿ ಯಾರಿಗೂ ಹಾನಿಯಾಗಿಲ್ಲ. ವಧು ಮತ್ತು ವರ ಇಬ್ಬರು ಸುರಕ್ಷಿತವಾಗಿದ್ದಾರೆ. ಭವಿಷ್ಯದಲ್ಲಿ ಮುಂದೆಂದು ಇಂತಹ ಘಟನೆ  ನಡೆಯದಂತೆ  ಸಂಸ್ಥೆಯು  ಜಾಗೃತೆ ವಹಿಸಲಿದೆ ಎಂದು ಹೇಳಿದರು.

ದೇವಲೋಕದಲ್ಲಿ ನಿಶ್ಚಿಯವಾಗುವ ಮದುವೆ ಭೂಮಿಯಲ್ಲಿ ನಡೆಯುತ್ತದೆ ಎಂಬ ಮಾತಿದೆ. ಮದುವೆ ಎಂಬುದು ಕೆಲವೊಂದು ಸಲ ಹೇಗೆ ನಡೆಯುತ್ತದೆ ಎಂದೇ ಹೇಳಲಾಗದು. ಇದಕ್ಕೆ ತಕ್ಕಂತೆ ಈಗ ಕೆಲವು ಮದುವೆಗಳು ಹಲವು ವಿಚಿತ್ರ ಕಾರಣಗಳಿಂದ ಸುದ್ದಿಯಾಗುತ್ತಿವೆ. ಇತ್ತೀಚೆಗೆ ರಾಜ್ಯದ ಚಾಮರಾಜನಗರದಲ್ಲಿ ವಿಶಿಷ್ಟವಾದ ಮದುವೆಯೊಂದು ನಡೆದಿತ್ತು. ಜಿಲ್ಲಾ ರೈತ (Farmer) ಸಂಘದ ಅಧ್ಯಕ್ಷ ಹೊನ್ನೂರು ಪ್ರಕಾಶ್ ಅವರ ಪುತ್ರಿ ಶೋಭಾ ಹಾಗೂ ಯುವ ರೈತ  ಪೃಥ್ವಿ ಅವರ ವಿವಾಹವೂ ವಚನ ಕಲ್ಯಾಣ ಅಂದರೆ ವಚನಗಳನ್ನು (Vachana sahitya) ಪಠಿಸುವ ಮೂಲಕ ಸರಳವಾಗಿ ನೆರವೇರಿತ್ತು. ಯಾವುದೇ ಬ್ಯಾಂಡ್ ಬಾಜಾ, ಮಂಗಳ ವಾದ್ಯ, ಶಾಸ್ತ್ರಗಳಿಲ್ಲದೇ ಈ ಮದುವೆ ನೆರವೇರಿತು. 

Anti-Conversion Bill: 'ಮದುವೆ ಆಗುವವರಲ್ಲಿ ಲವ್ ಇದ್ಮೇಲೆ ಜಿಹಾದ್ ಏಕೆ ಬರುತ್ತದೆ.'?

ಯಾವ ಶಾಸ್ತ್ರ, ಕಟ್ಟು ಕಂದಾಚಾರಗಳಿಲ್ಲದೇ ಬಸವಾದಿ ಶರಣರ ವಚನ ಪಠಿಸುತ್ತಾ ವಿವಾಹ ಕಾರ್ಯ ನಡೆದಿದ್ದು ಸಮಾನತೆಯ ಪ್ರತೀಕವಾಗಿ ವಧುವಿನಿಂದ ವರನ ಕೊರಳಿಗೆ ರುದ್ರಾಕ್ಷಿ ಧಾರಣೆ ಬಳಿಕ ವರನಿಂದ ವಧುವಿನ ಕೊರಳಿಗೆ ಸಾಂಪ್ರದಾಯಿಕ ಮಾಂಗಲ್ಯ ಧಾರಣೆ ಮಾಡಿ ವಚನ ಹೇಳುತ್ತಾ ದಾಂಪತ್ಯ ಜೀವನ ಕುರಿತಂತೆ ಪ್ರತಿಜ್ಞೆಯನ್ನು ಕೈಗೊಂಡರು. ಕಾರ್ಯಕ್ರಮದಲ್ಲಿ ಮಾತನಾಡಿದ  ಮರಿಯಾಲ ಮಠ ಮುರುಘರಾಜೇಂದ್ರಶ್ರೀ(Mariala Math Murugarajendrashree)  ರೈತರಿಗೆ ಹೆಣ್ಣು ಸಿಗುತ್ತಿಲ್ಲ. ಎಲ್ಲರಿಗೂ ಅನ್ನ ನೀಡುವವನೇ ರೈತ. ರೈತರಷ್ಟು ಯೋಗ್ಯರನ್ನು ಬೇರೆ ಕಡೆ ಕಾಣಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ರೈತರಿಗೆ ಹೆಣ್ಣುಕೊಡಲು ಹಿಂಜರಿಕೆ ಬೇಡ ಎಂದುತಿಳಿಸಿದರು.

During a wedding function in Raipur, the bride and the groom were on a swing suddenly, the harness snaps and the couple take a tumble both of them are safe with minor injuries pic.twitter.com/ABHa2AMDtK

— Anurag Dwary (@Anurag_Dwary)

 

ಲಿಂಗಾಯಿತರು ವಚನದ ಆಧಾರದ ಮೇಲೆ ಸರಳ ವಿವಾಹ ಮಾಡುವ ಮೂಲಕ ಇತರಿಗೆ ಮಾದರಿಯಾಗಬೇಕು. ಅದ್ದೂರಿ ವಿವಾಹಗಳಿಗೆ ಕಡಿವಾಣ ಹಾಕಬೇಕು ಎಂದು ಉಕ್ಕೇರಿ ಮಠ(Ukkeri math)ದ  ಶರಣಬಸವದೇವರು(Sharana basava devar) ತಿಳಿಸಿದರು. ಕೊರೋನಾ ಆತಂಕದ ನಂತರ ಸಹಜವಾಗಿಯೇ ಅದ್ದೂರಿ ಮದುವೆಗೆಳಿಗೆ ಬ್ರೇಕ್ ಬಿದ್ದಿದೆ.  ಮಂತ್ರ ಮಾಂಗಲ್ಯದ ಮೂಲಕವೂ ಮದುವೆಯಾಗುತ್ತಿರುವ ನಿದರ್ಶನಗಳು ಇವೆ.

click me!