Organ Donation: 6 ಮಂದಿಗೆ ಹೊಸ ಜೀವನ ಕೊಟ್ಟ 13 ವರ್ಷದ ಬಾಲಕಿ; ಸಾವಿನಲ್ಲೂ ಸಾರ್ಥಕತೆ!

Published : Nov 03, 2026, 08:05 AM IST
13-year-old girl Guda Rohitha

ಸಾರಾಂಶ

ಹೈದರಾಬಾದ್‌ನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ 13 ವರ್ಷದ ಬಾಲಕಿ ರೋಹಿತಾ ತೀವ್ರವಾಗಿ ಗಾಯಗೊಂಡು ಬ್ರೈನ್ ಡೆಡ್ ಆಗಿದ್ದಳು. ಮಗಳ ಸಾವಿನ ದುಃಖದಲ್ಲೂ ಆಕೆಯ ಪೋಷಕರು ವೈದ್ಯರ ಸಲಹೆಯಂತೆ ಅಂಗಾಂಗ ದಾನ ಮಾಡಲು ಒಪ್ಪಿಗೆ ನೀಡಿದರು.

ಹೈದರಾಬಾದ್: ಭೀಕರ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ 13 ವರ್ಷದ ಬಾಲಕಿಯ ಕುಟುಂಬಸ್ಥರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಅಪಘಾತದಲ್ಲಿ ತಲೆಗೆ ಗಂಭೀರ ಗಾಯವಾಗಿದ್ದ ಕಾರಣ ವೈದ್ಯರ, ಆಕೆಯ ಬ್ರೈನ್ ಡೆಡ್ ಆಗಿದೆ ಎಂದು ಘೋಷಣೆ ಮಾಡಿದ್ದರು. ಇದರೊಂದಿಗೆ ಮಗಳ ಸಾವಿನ ದುಖಃದಲ್ಲೂ, ವೈದ್ಯರ ಸಲಹೆ ಮೇರೆಗೆ ಮಗಳ ಅಂಗಾಗದಾನ ಮಾಡಲು ಒಪ್ಪಿಗೆ ಸೂಚಿಸಿದ್ದಾರೆ. ಆ ಮೂಲಕ 6 ಮಂದಿಗೆ ಹೊಸ ಜೀವನ ಕೊಟ್ಟಿದ್ದಾರೆ.

10 ದಿನ ಸಾವು ಬದುಕಿನ ನಡುವೆ ಹೋರಾಟ

ಮೃತ ಬಾಲಕಿಯನ್ನು 13 ವರ್ಷದ ರೋಹಿತಾ ಎಂದು ಗುರುತಿಸಲಾಗಿದ್ದು, ಈಕೆ ಹೈದರಾಬಾದ್ನ ಬಾಲನಗರದ ಸರ್ಕಾರಿ ಶಾಲೆಯಲ್ಲಿ 9ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಈಕೆ ಕುಟುಂಬಸ್ಥರೊಂದಿಗೆ ಆಟೋದಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ವೇಗವಾಗಿ ಬಂದ ಲಾರಿಯೊಂದು ಆಟೋಗೆ ಡಿಕ್ಕಿಯಾಗಿತ್ತು. ಇದರೊಂದಿಗೆ ಗಾಯಗೊಂಡಿದ್ದ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಕೆಯ ಬ್ರೈನ್ ಡೆಡ್ ಆಗಿತ್ತು, ಈ ಸಂದರ್ಭದಲ್ಲಿ ವೈದ್ಯರು ಜೀವದಾನ್ ಆರ್ಗಾನ್ ಡೊನೇಷನ್ ಯೋಜನೆಯ ಅಡಿ ಮಗಳ ಅಂಗಾನದಾನಕ್ಕೆ ಮನವಿ ಮಾಡಿದ್ದರು. ವೈದ್ಯರ ಸಲಹೆಯೊಂದಿಗೆ ಕುಟುಂಬಸ್ಥರು ಮಗಳ ಅಂಗಾಂಗದಾನಕ್ಕೆ ಸಮ್ಮತಿ ಸೂಚಿಸಿದ್ದರು.

ಬಾಲಕಿ ಕುಟುಂಬಕ್ಕೆ ಪೊಲೀಸ್ ಕಮಿಷನರ್ ಸಂತ್ವಾನ

ಅಕ್ಟೋಬರ್ 20ರಂದು ಕುಟುಂಬಸ್ಥರೊಂದಿಗೆ ದೇವಸ್ಥಾನಕ್ಕೆ ತೆರಳಿ, ಮನೆಗೆ ಆಟೋದಲ್ಲಿ ವಾಪಸ್ ಬರುತ್ತಿದ್ದ ಸಂದರ್ಭದಲ್ಲಿ ಭೀಕರ ಅಪಘಾತ ಸಂಭವಿಸಿತ್ತು. ಆಟೋಗೆ ಹಿಂಬದಿಯಿಂದ ವೇಗವಾಗಿ ಬಂದ ಲಾರಿ ಡಿಕ್ಕಿಯಾಗಿತ್ತು. ಘಟನೆಯಲ್ಲಿ ಗಾಯಗೊಂಡ ಬಾಲಕಿಯನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರ್ಪಡೆ ಮಾಡಲಾಗಿತ್ತು. ಆದರೆ ಅಕ್ಟೋಬರ್ 30 ರಂದು, ಅಂದರೆ 10 ದಿನಗಳ ಕಾಲ ಚಿಕಿತ್ಸೆ ನೀಡಿದ ಬಳಿಕ ಬಾಲಕಿಯ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡುಬಂದಿರಲಿಲ್ಲ. ಅಲ್ಲದೇ ಆಕೆಯ ಬ್ರೈನ್ ಡೆಡ್ ಆಗಿತ್ತು.

ಬಾಲಕಿಯ ತಂದೆ ನಾರಾಯಣ ರಾವ್ ಅವರು ಮಗಳ ಅಂಗಾಂಗದಾನಕ್ಕೆ ಸಮ್ಮತಿಸಿದ್ದು, ಸದ್ಯ ಈಕೆಯ ಎರಡು ಕಿಡ್ನಿಗಳನ್ನು ಇಬ್ಬರು ರೋಗಿಗಳಿಗೆ ಅಳವಡಿಸಲಾಗಿದೆ. ಉಳಿದಂತೆ ಲಿವರ್, ಎರಡು ಕಣ್ಣಿನ ಪದರಗಳನ್ನು ತೆಗೆದುಕೊಂಡು ಅಗತ್ಯವಿರುವ ರೋಗಿಗಳಿಗೆ ಅಳವಡಿಸಲಾಗಿದೆ. ಈ ಮೂಲಕ ಸಾವಿನಲ್ಲೂ ಆರು ಮಂದಿ ಹೊಸ ಜೀವನ ಕೊಟ್ಟು ಬಾಲಕಿ ಕೊನೆಯುಸಿರೆಳೆದಿದ್ದಾರೆ.

ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಹೈದರಾಬಾದ್ ಪೊಲೀಸ್ ಕಮಿಷನರ್ ವಿಸಿ ಸಜ್ಜನರ್ ಅವರು ಕುಟುಂಬ ಸದಸ್ಯರಿಗೆ ಸಂತಾಪಗಳನ್ನು ತಿಳಿಸಿದ್ದಾರೆ. ಅಲ್ಲದೇ ಅಂಗಾಂಗದಾನಕ್ಕೆ ಒಪ್ಪಿಗೆ ನೀಡಿದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಬಾಲಕಿ ರೋಹಿತಾ ಆತ್ಮಕ್ಕೆ ಶಾಂತಿ ಸಿಗಲಿ ಅಂತ ಪ್ರಾರ್ಥನೆ ಸಲ್ಲಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕರ್ನಾಟಕದ ದುಡಿಮೆಯ ಹಣ ಯುಪಿ, ಬಿಹಾರಕ್ಕೆ': ಚೀನಾ ಮಾಡೆಲ್ ತೆರಿಗೆ ಸಮರ ಕೆರಳಿಸಿದ ಝೆರೋಧಾ ನಿಖಿಲ್ ಕಾಮತ್!
ಫಿಲ್ಮ್ ರಿಲೀಸ್‌ ಡೇಟ್‌ ನೆಪ ಹೇಳಿದ್ರೆ ಇನ್ಮುಂದೆ ವಿನಾಯಿತಿ ಇಲ್ಲ! ಏನಿದು 'ಸೆನ್ಸಾರ್​ಮಂಡಳಿ' ಹೊಸ ರೂಲ್ಸ್‌?