ಭಾರತದಲ್ಲಿ 11 ತಳಿ ಒಮಿಕ್ರಾನ್ ಪತ್ತೆ, ಕೋವಿಡ್ ಮಾರ್ಗಸೂಚಿ ಮತ್ತಷ್ಟು ಕಠಿಣ!

By Suvarna NewsFirst Published Jan 5, 2023, 4:55 PM IST
Highlights

ಚೀನಾದಲ್ಲಿ ಕೋವಿಡ್ ಪ್ರಕರಣ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಮಹತ್ವದ ಮಾಹಿತಿ ಬಿಡುಗಡೆ ಮಾಡಿದೆ. ಚೀನಾ ಭಾಗಶಃ ಕೋವಿಡ್‌ನಿಂದ  ತತ್ತರಿಸಿದೆ. ಇದರ ಬೆನ್ನಲ್ಲೇ ಭಾರತದಲ್ಲಿ ಆತಂಕ ನೆರಳು ಹೆಚ್ಚಾಗುತ್ತಿದೆ. ಇದೀಗ ಭಾರತದಲ್ಲಿ ಒಮಿಕ್ರಾನ್ 11 ತಳಿಗಳು ಪತ್ತೆಯಾಗಿದೆ. ಈ ವರದಿ ಬಂದ ಬೆನ್ನಲ್ಲೇ ಕೋವಿಡ್ ಮಾರ್ಗಸೂಚಿ ಮತ್ತಷ್ಟು ಕಠಿಣ ಮಾಡಲಾಗಿದೆ.

ನವದೆಹಲಿ(ಜ.05): ಚೀನಾ, ಜಪಾನ್, ಬ್ರೆಜಿಲ್, ಅಮೆರಿಕ ಸೇರಿದಂತೆ ಕೆಲ ರಾಷ್ಟ್ರಗಳಲ್ಲಿನ ಕೋವಿಡ್ ಹೆಚ್ಚಳದಿಂದ ಭಾರತದಲ್ಲಿ ಆತಂಕ ಹೆಚ್ಚಾಗುತ್ತಿದೆ. ಡಿಸೆಂಬರ್ 24 ರಿಂದ ವಿದೇಶಿ ಪ್ರಯಾಣಿಕರ ಮೇಲೆ ಭಾರತದಲ್ಲಿ ನಿಗಾ ಇಡಲಾಗಿದೆ. ಇದೀಗ ಡಿಸೆಂಬರ್ 24 ರಿಂದ ಜನವರಿ 3ರವರೆಗೆ ಭಾರತಕ್ಕೆ ಆಗಮಿಸಿದ ವಿದೇಶಿ ಪ್ರಯಾಣಿಕರ ಮಾದರಿಯ ವರದಿ ಬಂದಿದೆ. ಇದು ಮತ್ತೆ ಎಚ್ಚರಿಕೆ ಕರೆಗಂಟೆ ಬಾರಿಸಿದೆ. ಈ ಅವಧಿಯಲ್ಲಿ ವಿದೇಶದಿಂದ ಆಗಮಿಸಿದ ಪ್ರಯಾಣಿಕರಲ್ಲಿ ರ್ಯಾಂಡಮ್ ಟೆಸ್ಟ್ ಮಾಡಿಸಲಾಗಿದೆ. ಇದರಲ್ಲಿ 124 ಕೋವಿಡ್ ಕೇಸ್ ಪತ್ತೆಯಾಗಿದೆ. ಈ ಪೈಕಿ 11 ಒಮಿಕ್ರಾನ್ ತಳಿಗಳು ಪತ್ತೆಯಾಗಿದೆ. 11 ಒಮಿಕ್ರಾನ್ ತಳಿಗಳ ಪೈಕಿ ಹೆಚ್ಚಿನ ತಳಿಗಳು XBB ಆಗಿದೆ.

ಒಮಿಕ್ರಾನ್ ತಳಿಗಳೇ ವಿದೇಶಗಳಲ್ಲಿ ಹೆಚ್ಚಿನ ಅನಾನಹುತ ಸೃಷ್ಟಿಸಿದೆ. ಹೀಗಾಗಿ ಭಾರತದಲ್ಲಿ ಮಾರ್ಗಸೂಚಿ ಮತ್ತಷ್ಟು ಕಠಿಣಗೊಳಿಸಲು ನಿರ್ಧರಿಸಲಾಗಿದೆ. ಭಾರತಕ್ಕೆ ಆಗಮಿಸುವ ಪ್ರಯಾಣಿಕರ ಮೇಲೆ ಮತ್ತಷ್ಟು ನಿಗಾ ಇಡಲು ಸೂಚನೆ ನೀಡಲಾಗಿದೆ.   XBB 1, XBB2, XBB3, XBB4, XBB5, BA5, BAQ1, BAQ2, BQ1.1.2, BQ 1.1.5, CH 1.1, CH1. 1.1, BF.7, BF.7.4.1 ಹಾಗೂ BV 3 ಜೊತೆ XBB ಸದ್ಯ ಪತ್ತೆಯಾಗಿರುವ 11 ವೇರಿಯೆಂಟ್ ಒಮಿಕ್ರಾನ್ ತಳಿಗಳು.

Corona Virus: ಕೊರೋನಾ ಸೋಂಕು ಬಂದಿತ್ತಾ ? ಹಾಗಾದ್ರೆ ಮಕ್ಕಳಾಗೋದು ಕಷ್ಟ ಬಿಡಿ !

ಚೀನಾದಲ್ಲಿ ಕೋವಿಡ್ ಹೆಚ್ಚಳ ಭಾರತದಲ್ಲಿ ಅಪಾಯಕ ಎಚ್ಚರಿಕೆ ನೀಡುತ್ತಿದೆ. ಮೊದೆಲೆರಡು ಕೋವಿಡ್ ಅಲೆಯಲ್ಲೂ ಚೀನಾದಲ್ಲಿ ಗಣನೀಯ ಏರಿಕೆ ಬಳಿಕ ಭಾರತದಲ್ಲಿ ಕೋವಿಡ್ ಅಲೆ ಸೃಷ್ಟಿಯಾಗಿತ್ತು. ಇದಕ್ಕಾಗಿ ಸರ್ಕಾರ ತೀವ್ರ ಅಲರ್ಟ್ ಆಗಿದೆ. ಕೋವಿಡ್ ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ. ಇದೀಗ ವಿದೇಶದಿಂದ ಆಗಮಿಸುತ್ತಿರುವ ಪ್ರಯಾಣಿಕರ ಕೋವಿಡ್ ಪರೀಕ್ಷೆ ಹೆಚ್ಚಿಸಲು ನಿರ್ಧರಿಸಲಾಗಿದೆ.

ಚೀನಾ ಸೇರಿ 6 ದೇಶಗಳ ಮೂಲಕ ಅನ್ಯ ದೇಶಗಳಿಂದ ಬಂದವರಿಗೂ ಕೋವಿಡ್‌ ನೆಗೆಟಿವ್‌ ವರದಿ ಕಡ್ಡಾಯ ಮಾಡಲಾಗಿದೆ.  ಈ ಬೆನ್ನಲ್ಲೇ ಇದೀಗ ಅನ್ಯ ದೇಶಗಳಿಂದ ಚೀನಾ, ಜಪಾನ್‌, ಥಾಯ್ಲೆಂಡ್‌, ಸಿಂಗಾಪುರ್‌, ಹಾಂಕಾಂಗ್‌, ದಕ್ಷಿಣ ಕೊರಿಯಾ ಮುಖಾಂತರವಾಗಿ ಬರುವವರು ಸಹ ಕೋವಿಡ್‌ ನೆಗೆಟಿವ್‌ ವರದಿಯನ್ನು ಕಡ್ಡಾಯವಾಗಿ ಅಪಲೋಡ್‌ ಮಾಡಬೇಕು. ಆ ದೇಶಗಳಿಂದ ನಿರ್ಗಮನಕ್ಕೂ 72 ಗಂಟೆಗೂ ಮುನ್ನ ಕೋವಿಡ್‌ ಪರೀಕ್ಷೆಗೆ ಒಳಪಟ್ಟಿರುವ ವರದಿ ಅದಾಗಿರಬೇಕು ಎಂದು ತಿಳಿಸಿದೆ. 

ಮೊದಲ ಬಾರಿಗೆ ಚೀನಾ ಕೋವಿಡ್ ಅಸಲಿ ಸಂಖ್ಯೆ ಬಹಿರಂಗ, ಭಾರತ ಸೇರಿ ವಿಶ್ವಕ್ಕೇ ಆತಂಕ!

ರಾಜ್ಯಕ್ಕೆ ಬಂದ ಯಾರಲ್ಲೂ ಚೀನಿ ಕೋವಿಡ್‌ ಬಿಎಫ್‌ 7 ಪತ್ತೆ ಇಲ್ಲ
ವಿದೇಶದಿಂದ ರಾಜ್ಯಕ್ಕೆ ಆಗಮಿಸಿ ಕೊರೋನಾ ಸೋಂಕು ದೃಢಪಟ್ಟವರ ವಂಶವಾಹಿ ಪರೀಕ್ಷೆ ನಡೆಸಲಾಗಿದ್ದು, ಯಾರೊಬ್ಬರಲ್ಲಿಯೂ ಚೀನಾದಲ್ಲಿ ಅಬ್ಬರಿಸುತ್ತಿರುವ ಹೊಸ ರೂಪಾಂತರಿ ‘ಬಿಎಫ್‌ 7’ ತಳಿ ಪತ್ತೆಯಾಗಿಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಕೊರೋನಾ ಸೋಂಕು ಹೆಚ್ಚಿರುವ ದೇಶಗಳಿಂದ ರಾಜ್ಯದ ವಿಮಾನ ನಿಲ್ದಾಣಗಳಿಗೆ ಆಗಮಿಸುವವರಿಗೆ ಕಡ್ಡಾಯವಾಗಿ ಕೋವಿಡ್‌ ಪರೀಕ್ಷೆ ನಡೆಸಲಾಗುತ್ತಿದೆ. ಮಾತ್ರವಲ್ಲದೆ ಸೋಂಕು ದೃಢಪಟ್ಟವರಿಗೆ ಹೊಸ ರೂಪಾಂತರಿ ತಳಿ ತಗುಲಿದೆಯೇ ಎಂಬುದನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ವಂಶವಾಹಿ ಪರೀಕ್ಷೆಗೊಳಪಡಿಸಲಾಗುತ್ತಿದೆ. ಡಿ.24ರಿಂದ ವಿದೇಶದಿಂದ ಆಗಮಿಸಿದವರ ಪೈಕಿ ಒಟ್ಟು 23 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಎಲ್ಲರ ಮಾದರಿಯನ್ನು ವಂಶವಾಹಿ ಪರೀಕ್ಷೆಗೊಳಪಡಿಸಲಾಗಿತ್ತು. ಪರೀಕ್ಷಾ ವರದಿಯಲ್ಲಿ ಈ ಹಿಂದೆ ಕಾಣಿಸಿಕೊಂಡಿರುವ ಒಮಿಕ್ರೋನ್‌ ತಳಿ ತಗುಲಿರುವುದು ಪತ್ತೆಯಾಗಿದೆ. ಹೊಸ ತಳಿಯಾದ ಬಿಎಫ್‌7 ದೃಢಪಟ್ಟಿಲ್ಲ 
 

click me!