4ನೇ ತರಗತಿ ಪರೀಕ್ಷೆ ಪಾಸಾದ 105 ವರ್ಷದ ವೃದ್ಧೆ!

By Suvarna News  |  First Published Feb 6, 2020, 11:55 AM IST

4ನೇ ತರಗತಿ ತತ್ಸಮಾನ ಪರೀಕ್ಷೆ ಪಾಸಾದ ಕೇರಳದ 105 ವರ್ಷದ ವೃದ್ಧೆ!| ಕೇರಳದ ಸಾಕ್ಷರಥಾ ಮಿಷನ್‌ ಕಳೆದ ವರ್ಷ ಕೊಲ್ಲಂನಲ್ಲಿ ಆಯೋಜಿಸಿದ್ದ ಪರೀಕ್ಷೆಯ ಫಲಿತಾಂಶ


ತಿರುವನಂತಪುರಂ: ಕಲಿಕೆಗೆ ವಯಸ್ಸಿನ ಮಿತಿ ಇಲ್ಲ ಎಂಬುದನ್ನು ಕೇರಳದಲ್ಲಿ 105 ವರ್ಷದ ವೃದ್ಧೆಯೊಬ್ಬಳು ನಿರೂಪಿಸಿದ್ದಾಳೆ. ಕೇರಳದ ಸಾಕ್ಷರಥಾ ಮಿಷನ್‌ ಕಳೆದ ವರ್ಷ ಕೊಲ್ಲಂನಲ್ಲಿ ಆಯೋಜಿಸಿದ್ದ ಪರೀಕ್ಷೆಯ ಫಲಿತಾಂಶ ಬುಧವಾರದಂದು ಪ್ರಕಟವಾಗಿದೆ. ಈ ಪರೀಕ್ಷೆಯಲ್ಲಿ ಭಾಗೀರಥಿ ಅಮ್ಮಾ ಎಂಬ ವೃದ್ಧೆ 4ನೇ ತರಗತಿಗೆ ಸಮಾನವಾದ ಪರೀಕ್ಷೆಯೊಂದನ್ನು ಪಾಸು ಮಾಡುವ ಮೂಲಕ ದೇಶದಲ್ಲೇ ಅತೀ ಹಿರಿಯ ವಿದ್ಯಾರ್ಥಿ ಎನಿಸಿಕೊಂಡಿದ್ದಾರೆ.

ಭಾಗೀರಥಿ ಅಮ್ಮಾ 9ನೇ ಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡಿದ್ದರು. ಹೀಗಾಗಿ ಕುಟುಂಬದ ಜವಾಬ್ದಾರಿ ಹೊತ್ತುಕೊಂಡಿದ್ದರಿಂದ 3ನೇ ತರಗತಿ ಬಳಿಕ ಶಾಲೆಗೆ ಹೋಗಿರಲಿಲ್ಲ. ಮದುವೆ ಆದ ಕೆಲವೇ ವರ್ಷಗಳಲ್ಲಿ ಗಂಡ ತೀರಿ ಹೋಗಿದ್ದರಿಂದ ಮಕ್ಕಳನ್ನು ಸಾಕುವ ಹೊಣೆಯನ್ನು ಹೊತ್ತುಕೊಂಡರು.

Tap to resize

Latest Videos

ಹೀಗಾಗಿ ಶಿಕ್ಷಣ ಪಡೆಯುವ ಕನಸು ನನಸಾಗಿರಲೇ ಇಲ್ಲ. ಇದೀಗ ಕೇರಳ ಸರ್ಕಾರದ ವಯಸ್ಕ ಶಿಕ್ಷಣ ಯೋಜನೆ ಅಡಿಯಲ್ಲಿ 4ನೇ ತರಗತಿ ಪರೀಕ್ಷೆಯಲ್ಲಿ ಬರೆದಿದ್ದಾರೆ. ಹಿರಿಯ ವಯಸ್ಸಿನಲ್ಲಿ ಪರೀಕ್ಷೆ ಬರೆಯುವುದು ಕಷ್ಟವಾದ ಕಾರಣ ಪರಿಸರ, ಗಣಿತ ಮತ್ತು ಮಲಯಾಳಂ ವಿಷಯದಲ್ಲಿ 3 ಪ್ರಶ್ನೆ ಪತ್ರಿಕೆಯನ್ನು ಮೂರು ದಿನದಲಲ್ಲಿ ಬರೆದು ಪರೀಕ್ಷೆ ಪಾಸಾಗಿದ್ದಾರೆ.

click me!