
ತಿರುವನಂತಪುರ(ಮೇ.06): ಕೊರೋನಾ ಪ್ರೊಟೋಕಾಲ್‌ಗಳನ್ನು ಮೀರಿದ ಕೇರಳದ ಇಡುಕ್ಕಿ ಜಿಲ್ಲೆಯ ಮುನ್ನಾರ್‌ನಲ್ಲಿ ಈಗ 100 ಜನ ಪಾದ್ರಿಗಳಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, ಇಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಚರ್ಚ್ ಧಾರ್ಮಿಕ ಕಾರ್ಯಕ್ರಮದಲ್ಲಿ ಕೊರೋನಾ ಗೈಡ್‌ಲೈನ್ಸ್‌ಗಳನ್ನು ಮೀರಿ ಜನರು ಭಾಗವಹಿಸಿದ್ದರು. ಇದೀಗ ಈ ಘಟನೆಯ ಕುರಿತು ಕೇರಳ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
BPL ಕಾರ್ಡಿನ ಕೊರೋನಾ ರೋಗಿಗಳಿಗೆ ದಿನಕ್ಕೆ 5 ಸಾವಿರ ನೆರವು
ಸೋಂಕಿತರಲ್ಲಿ ಚರ್ಚ್ ಆಫ್ ಸೌತ್ ಇಂಡಿಯಾ (ಸಿಎಸ್ಐ) ದಕ್ಷಿಣ ಕೇರಳ ಬಿಷಪ್ ಫಾದರ್ ಧರ್ಮರಾಜ್ ರಸಲಂ ಸೇರಿದ್ದಾರೆ. ಪಾಲ್ಗೊಂಡ ಇಬ್ಬರು ಪುರೋಹಿತರು, ಫಾದರ್ ಬಿಜುಮೊನ್ (52) ಮತ್ತು ರೆವ್ ಶೈನ್ ಬಿ ರಾಜ್ (43) ಕಳೆದ ವಾರ ಕೋವಿಡ್ -19 ದೃಢಪಟ್ಟ ನಂತರ ನಿಧನರಾದರು.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ಘಟನೆ ಬಗ್ಗೆ ವಿಶಾದ ವ್ಯಕ್ತಪಡಿಸಿ ದುರದೃಷ್ಟಕರ ಎಂದು ಹೇಳಿದ್ದಾರೆ. ತನಿಖೆ ನಡೆಸಲು ಜಿಲ್ಲಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು ಹೇಳಿದ್ದಾರೆ.
ಏಪ್ರಿಲ್ 13-17ರ ನಡುವೆ ಕಾರ್ಯಕ್ರಮ ನಡೆಯಿತು. ಕೋವಿಡ್ -19 ನಿರ್ಬಂಧಗಳು ಜಾರಿಯಲ್ಲಿದ್ದ ಸಮಯದಲ್ಲಿ ಇದನ್ನು ನಡೆಸಲಾಯಿತು. ಕಳೆದ ವರ್ಷ ಮೊದಲ ಅಲೆಯಲ್ಲಿ ನವದೆಹಲಿಯ ತಬ್ಲಿಘಿ ಜಮಾಅತ್‌ನ ಒಂದು ಸಭೆಯಲ್ಲಿಯೂ ಪ್ರಕರಣಗಳು ಹೆಚ್ಚಳಕ್ಕೆ ಕಾರಣವಾಗಿತ್ತು. ಕುಂಭಮೇಳದಿಂದಲೂ ಕೊರೋನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗಿತ್ತು.
99ರ ಅಜ್ಜಿಗೆ 30 ವರ್ಷದ ಗೆಳೆಯ: ಇದು ಕೊರೋನಾ ಕಾಲದ ಸ್ನೇಹ
ಕರಕೋಣಂನ ಸಿಎಸ್ಐ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ 40 ಕ್ಕೂ ಹೆಚ್ಚು ಪಾದ್ರಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಆಸ್ಪತ್ರೆಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಈ ಬಗ್ಗೆ ಪ್ರತಿಕ್ರಿಯೆಯನ್ನು ನಿರಾಕರಿಸಲಾಗಿದೆ. ಘಟನೆಯನ್ನು ಮುಚ್ಚಿಹಾಕಲು ತೀವ್ರ ಪ್ರಯತ್ನಗಳು ನಡೆಯುತ್ತಿವೆ ಎಂಬ ಆರೋಪವೂ ಇದೆ.
ಈ ಕಾರ್ಯಕ್ರಮಕ್ಕಾಗಿ ಜಿಲ್ಲಾ ಅಧಿಕಾರಿಗಳಿಂದ ಅನುಮತಿ ಕೋರಿಲ್ಲ. ಘಟನೆ ಕುರಿತು ನಾವು ವಿಚಾರಿಸುತ್ತಿದ್ದೇವೆ. ನಾವು ರೆಸಾರ್ಟ್, ಈವೆಂಟ್ ಆಯೋಜಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಇಡುಕ್ಕಿ ಜಿಲ್ಲಾಧಿಕಾರಿ ಎಚ್ ದಿನೇಶ್ ಹೇಳಿದರು.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ