ನೆಲದಿಂದ 100 ಅಡಿ ಆಳದಲ್ಲಿ ನಿಲ್ದಾಣ, ಸಮುದ್ರದ ಕೆಳಗೆ 7KM ಸುರಂಗ! ದೇಶದ ಮೊದಲ ಬುಲೆಟ್ ರೈಲು ಬಗ್ಗೆ ಕೇಂದ್ರದಿಂದ ಬಿಗ್‌ ಅಪ್‌ಡೇಟ್ಸ್

Published : Oct 25, 2026, 04:40 PM IST
Mumbai-Ahmedabad Bullet Train Big Update

ಸಾರಾಂಶ

ಭಾರತದ ಮೊದಲ ಬುಲೆಟ್ ಟ್ರೈನ್ 2027ರ ವೇಳೆಗೆ ಅಹಮದಾಬಾದ್‌ನಿಂದ ಮುಂಬೈಗೆ ಸಂಚರಿಸುವ ನಿರೀಕ್ಷೆಯಿದೆ. ಮುಂಬೈನ ಬಿಕೆಸಿಯಲ್ಲಿ 10 ಅಂತಸ್ತಿನಷ್ಟು ಆಳದ ಭೂಗತ ನಿಲ್ದಾಣ ಮತ್ತು ಥಾಣೆ ಕ್ರೀಕ್ ಬಳಿ ದೇಶದ ಮೊದಲ ಸಾಗರದೊಳಗಿನ ಸುರಂಗವನ್ನು ನಿರ್ಮಿಸಲಾಗುತ್ತಿದೆ. ಗಂಟೆಗೆ 320 ಕಿ.ಮೀ ವೇಗದಲ್ಲಿ ಚಲಿಸುವ ಈ ರೈಲಿನ ಕಾಮಗಾರಿ ಭರದಿಂದ ಸಾಗುತ್ತಿದೆ.

ನವದೆಹಲಿ: ದೇಶದ ಮೊದಲ ಬುಲೆಟ್ ಟ್ರೈನ್ ಬಗ್ಗೆ ಕೇಂದ್ರ ಸರ್ಕಾರ ಬಿಗ್ ಅಪ್‌ಡೇಟ್ಸ್ ನೀಡಿದೆ. ಬುಲೆಟ್ ಟ್ರೈನ್ ಉದ್ಘಾಟನೆಗೆ ಸಮರೋಪಾದಿಯಲ್ಲಿ ಕೆಲಸಗಳು ನಡೆಯುತ್ತಿದ್ದು, 2027ರ ವೇಳೆಗೆ ಅತೀ ವೇಗದ ರೈಲು ಸಂಚಾರ ನಡೆಸುವ ನಿರೀಕ್ಷೆಗಳಿವೆ. ಈ ಬಗ್ಗೆ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ದೇಶದ ಮೊದಲ ಬುಲೆಟ ಟ್ರೈನ್ ಈಗ ಆಕಾರ ಪಡೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಸುದೀರ್ಘವಾಗಿ ಕೇಂದ್ರ ಸಚಿವರು ಮಾಹಿತಿ ನೀಡಿದ್ದಾರೆ. ಭಾರತದ ಬುಲೆಟ್ ರೈಲು ಉದ್ಘಾಟನೆ ಬಗ್ಗೆ ಇನ್ನೂ ಘೋಷಣೆ ಆಗಿಲ್ಲ.ಇದು ಒಟ್ಟು 508 ಕಿಲೋ ಮೀಟರ್ ದೂರದ ನಿರ್ಮಾಣ ಕಾರ್ಯ. ತಂಬಾ ವೇಗವಾಗಿ ಇದರ ಕಾರ್ಯಗಳು ನಡೆಯುತ್ತಿವೆ. ಇದರ ಮೊದಲ ಸೇವೆ 2027ರ ಕೊನೆಯ ತ್ರೈಮಾಸಿಕದಲ್ಲಿ ಶುರುವಾಗಲಿದೆ ಎಂದು ತಿಳಿಸಿದ್ದಾರೆ. ಮೊದಲ ಬುಲೆಟ್‌ ಟ್ರೈನ್ ಅಹಮದಾಬಾದ್‌ ಟು ಮುಂಬೈಗೆ ಹೈಸ್ಪೀಡ್ ಮಾರ್ಗದಲ್ಲಿ ಸಂಚಾರ ಮಾಡಲಿದೆ.

ವಿಶೇಷತೆ ಏನು?

ಬುಲೆಟ್ ಟ್ರೈನ್‌ ಯೋಜನೆಯ ಮುಂದುರಿದ ಭಾಗವಾಗಿ ಮುಂಬೈನಲ್ಲಿ ಬೃಹತ್ ರೈಲ್ವೇ ನಿರ್ಮಾಣ ಮಾಡಲಾಗುತ್ತಿದೆ.ಬಾಂದ್ರಾ-ಕುರ್ಲಾ ಸಂಕಿರಣದಲ್ಲಿ 100 ಅಡಿ ಕೆಳಗೆ ಅಂದರೆ 10 ಅಂತಸ್ತಿನ ಕಟ್ಟಡಕ್ಕಿಂತ ಆಳವಾಗಿದೆ. ಮುಂಬೈನ ಹೃದಯಭಾಗವಾಗಿರುವ ಬಿಕೆಸಿಯಲ್ಲಿ ನಾವು ಹೈ-ಸ್ಪೀಡ್ ರೈಲು ಕಾರಿಡಾರ್ ನಡೆಯುತ್ತಿದೆ. ಈ ಕಾರಿಡಾರ್‍‌ನಲ್ಲಿ ನಾವು ಏಕೈಕ ಭೂಗತ ನಿಲ್ದಾಣ ನಿರ್ಮಾಣ ಮಾಡುತ್ತಿದ್ದೇವೆ. ರೈಲ್ವೇ ನಿಲ್ದಾಣದ ಎಂಜಿನಿಯರಿಂಗ್ ಅದ್ಭುತವಾಗಿದೆ ಎಂದು ತಿಳಿಸಿದ್ದಾರೆ.

ಕೇಂದ್ರ ಸಚಿವರು ನೀಡಿರುವ ಮಾಹಿತಿ ಪ್ರಕಾರ.. ಭೂಮಿಯ ಆಳದಲ್ಲಿ ರೈಲ್ವೇ ನಿಲ್ದಾಣ ಮಾಡುವ ಉದ್ದೇಶದಿಂದ 32 ಮೀಟರ್ ಆಳದಲ್ಲಿ ಉತ್ಖನ ನಡೆಯುತ್ತಿದೆ. ಪ್ಲಾಟ್‌ಫಾರ್ಮ್‌ಗಳು, ಕಾನ್ಕೋರ್ಸ್‌ಗಳು ಮತ್ತು ಸೇವಾ ಪ್ರದೇಶಗಳನ್ನು ಒಳಗೊಳ್ಳಲಿದೆ. ಈ ಆಳದಲ್ಲಿ ಒಟ್ಟು ಮೂರು ಹಂತಗಳನ್ನ ನಿರ್ಮಿಸಲಾಗುತ್ತದೆ. 400 ಮೀಟರ್‌ಗಿಂತ ಹೆಚ್ಚು ಉದ್ದದ ಒಟ್ಟು ಆರು ಪ್ಲಾಟ್ ಫಾರ್ಮ್‌ ನಿರ್ಮಾಣ ಮಾಡಲಾಗುತ್ತಿದೆ ಎಂಬ ವಿಚಾರವನ್ನು ತಿಳಿಸಿದ್ದಾರೆ.

ಜೊತೆಗೆ ನೀರಿನೊಳಗೆ ರೈಲು ಸುರಂಗ ನಿರ್ಮಿಸಲು 3200 ಟನ್ ತೂಕದ ಯಂತ್ರವು ಥಾಣೆ ಕ್ರೀಕ್‌ನ ಕೆಳಗೆ ಬಂಡೆಗಳನ್ನ ಸೆವೆಸುತ್ತಿದೆ. ಬುಲೆಟ್ ಟ್ರೈನ್ ಅದರ ಮೂಲಕ ಹೆಚ್ಚಿನ ವೇಗದಲ್ಲಿ ಚಲಿಸಲಿದೆ. ಈ ಬುಲೆಟ್ ಟ್ರೈನ್ ಕಾರಿಡಾರ್‍‌ ಒಟ್ಟು 21 ಕಿಲೋ ಮೀಟರ್ ಉದ್ದದ ಸುರಂಗದ ಮೂಲಕ ಚಲಿಸಲಿದೆ. ಅದರಲ್ಲಿ 7 ಕಿಲೋ ಮೀಟರ್ ಥಾಣೆ ಕ್ರಿಕ್‌ನಡಿ ಹಾದು ಹೋಗುತ್ತದೆ. ಇದು ದೇಶದ ಮೊದಲ ಸಾಗರದೊಳಗಿನ ಸುರಂಗ ಆಗಲಿದೆ ಎಂದು ಅವರು ತಿಳಿಸಿದ್ದಾರೆ.

ರೈಲ್ವೇ ಸಚಿವರು ನೀಡಿದ ಹೆಚ್ಚಿನ ಮಾಹಿತಿ

  • ಕಳೆದ ಜುಲೈನಲ್ಲಿ ವಿಖ್ರೋಲಿ ಮತ್ತು ಸಾವ್ಲಿಯಿಂದ 2 ಸುರಂಗ ಕೊರೆಯುವ ಯಂತ್ರಗಳ ಉಡಾವಣೆ
  • ಭಾರತದಲ್ಲಿ ಇದುವರೆಗೆ ಸ್ಥಾಪಿಸಲಾದ ಅತಿದೊಡ್ಡ ಸುರಂಗ ಕೊರೆಯವ ಯಂತ್ರಗಳಲ್ಲಿ ಒಂದಾಗಿದೆ
  • ಪ್ರತಿ ಯಂತ್ರವು 13.6 ಮೀಟರ್ ವ್ಯಾಸದ ಕಟ್ಟರ್‌ಹೆಡ್ ಅನ್ನು ಹೊಂದಿದೆ ಎಂದು ತಿಳಿದುಬಂದಿದೆ
  • ಅಂದರೆ ನಾಲ್ಕು ಅಂತಸ್ತಿನ ಕಟ್ಟಡದಷ್ಟು ಎತ್ತರ, ಪ್ರತಿ ಯಂತ್ರವು 3,000 ಟನ್‌ಗಳಿಗಿಂತ ಹೆಚ್ಚು ತೂಕ
  • ಅಂದರೆ ಸುಮಾರು 500 ಏಷ್ಯನ್ ಆನೆಗಳಿಗೆ ಸಮಾನ, ಯಂತ್ರವು 96 ಮೀಟರ್ ಉದ್ದವಾಗಿದೆ.
  • ಬುಲೆಟ್ ರೈಲು ಪೂರ್ಣ ವೇಗದಲ್ಲಿ ಚಲಿಸಿದಾಗ ಗಂಟೆಗೆ 320 ಕಿ.ಮೀ ವೇಗದಲ್ಲಿ ಇರುತ್ತದೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಕ್ಟೋಬರ್ 31ರಿಂದ ವಾರಣಸಿಗೆ ವಂದೇ ಭಾರತ್ ಸ್ಲೀಪರ್ ರೈಲು ಸಂಪರ್ಕ, ಇಲ್ಲಿದೆ ವೇಳಾಪಟ್ಟಿ
“ಈಗಾಗಲೇ ನಷ್ಟದಲ್ಲಿದ್ದೇನೆ, ದಯವಿಟ್ಟು ರಿಟರ್ನ್ ಮಾಡಬೇಡಿ”; Flipkart Parcelನಲ್ಲಿ ಸಿಕ್ಕಿತು ಮನಕಲಕುವ ಮನವಿ!