ವಿದ್ಯುತ್‌ ಬರ ನೀಗಿಸಲು ಕೇಂದ್ರದ 2 ಮಹತ್ವದ ಕ್ರಮ, ಉತ್ಪಾದನೆ ನಿಲ್ಲಿಸಿದ್ದ 100 ಗಣಿಗಳಿಗೆ ಮರುಜೀವ!

Published : May 07, 2022, 06:56 AM IST
ವಿದ್ಯುತ್‌ ಬರ ನೀಗಿಸಲು ಕೇಂದ್ರದ 2 ಮಹತ್ವದ ಕ್ರಮ, ಉತ್ಪಾದನೆ ನಿಲ್ಲಿಸಿದ್ದ 100 ಗಣಿಗಳಿಗೆ ಮರುಜೀವ!

ಸಾರಾಂಶ

* ಕಲ್ಲಿದ್ದಲು ಉತ್ಪಾದನೆ ನಿಲ್ಲಿಸಿದ್ದ 100 ಗಣಿಗಳಿಗೆ ಮರುಜೀವ * ಆಮದು ಕಲ್ಲಿದ್ದಲು ಆಧರಿತ ಸ್ಥಾವರಗಳಿಗೆ ಪೂರ್ಣ ಪ್ರಮಾಣದ ವಿದ್ಯುತ್‌ ಉತ್ಪಾದನೆ ಕಡ್ಡಾಯ * ವಿದ್ಯುತ್‌ ಬರ ನೀಗಿಸಲು ಕೇಂದ್ರದ 2 ಮಹತ್ವದ ಕ್ರಮ

ನವದೆಹಲಿ(ಮೇ.07): ದೇಶದಲ್ಲಿ ಕಳೆದ 6 ವರ್ಷದಲ್ಲಿ ಕಂಡು ಕೇಳರಿಯದಷ್ಟು ವಿದ್ಯುತ್‌ ಕೊರತೆ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಕಲ್ಲಿದ್ದಲು ಉತ್ಪಾದನೆ ಹಾಗೂ ವಿದ್ಯುತ್‌ ಉತ್ಪಾದನೆಗೆ ಸಂಬಂಧಿಸಿದಂತೆ 2 ಮಹತ್ವದ ನಿರ್ಧಾರಗಳನ್ನು ಕೇಂದ್ರ ಸರ್ಕಾರ ಕೈಗೊಂಡಿದೆ.

ಮೊದಲನೆಯ ನಿರ್ಧಾವರೆಂದರೆ, ಆರ್ಥಿಕವಾಗಿ ಹೊರೆಯಾಗುತ್ತಿವೆ ಎಂಬ ಕಾರಣ ನೀಡಿ ಉತ್ಪಾದನೆ ನಿಲ್ಲಿಸಿದ್ದ 100 ಕಲ್ಲಿದ್ದಲು ಗಣಿಗಳಿಗೆ ಮರುಜೀವ ನೀಡಲು ಸರ್ಕಾರ ಸಿದ್ಧತೆ ಆರಂಭಿಸಿದೆ.

ಎರಡನೆಯ ನಿರ್ಧಾರವೆಂದರೆ, ‘ವಿದ್ಯುತ್‌ ಕಾಯ್ದೆ’ಯ 11ನೇ ಪರಿಚ್ಛೇದದನ್ನು ಸರ್ಕಾರ ಜಾರಿಗೆ ತಂದಿದೆ. ಈ ಪ್ರಕಾರ, ದೇಶದ ಎಲ್ಲ ಆಮದು ಆಧರಿತ ಉಷ್ಣ ವಿದ್ಯುತ್‌ ಸ್ಥಾವರಗಳು ಪೂರ್ಣ ಸಾಮರ್ಥ್ಯಕ್ಕೆ ಅನುಗುಣವಾಗಿ ವಿದ್ಯುತ್‌ ಉತ್ಪಾದನೆ ಮಾಡುವುದು ಕಡ್ಡಾಯವಾಗಲಿದೆ.

100 ಗಣಿಗಳಿಗೆ ಮರುಜೀವ:

ಆರ್ಥಿಕವಾಗಿ ಕಾರ್ಯಸಾಧುವಲ್ಲ ಎಂದು 100 ಕಲ್ಲಿದ್ದಲು ಗಣಿಗಳನ್ನು ಈ ಹಿಂದೆ ಸ್ಥಗಿತಗೊಳಿಸಲಾಗಿತ್ತು. ಕಲ್ಲಿದ್ದಲು ಪರಿಸರಕ್ಕೆ ಮಾರಕ ಎಂಬ ಕಾರಣಕ್ಕೆ ‘ಬ್ಯಾಡ್‌ ಬಾಯ್‌್ಸ’ ಎಂದೂ ಈ ಗಣಿಗಳಿಗೆ ಅಪಹಾಸ್ಯ ಮಾಡಲಾಗುತ್ತಿತ್ತು. ಆದರೆ ಈ ಗಣಿಗಳಲ್ಲಿ ಕಲ್ಲಿದ್ದಲು ಉತ್ಪಾದನೆ ಪುನಾರಂಭಿಸಲು ಸರ್ಕಾರ ಸಿದ್ಧತೆ ಆರಂಭಿಸಿದೆ. ಕಲ್ಲಿದ್ದಲು ಸಚಿವಾಲಯ ಕಾರ್ಯದರ್ಶಿ ಅನಿಲ್‌ ಕುಮಾರ್‌ ಜೈನ್‌ ಅವರೇ ಖುದ್ದು ಈ ವಿಷಯ ಖಚಿತಪಡಿಸಿದ್ದಾರೆ.

ಪೂರ್ಣ ಪ್ರಮಾಣದಲ್ಲಿ ಉತ್ಪಾದನೆ ಕಡ್ಡಾಯ:

ಇದೇ ವೇಳೆ, ವಿದೇಶಗಳಿಂದ ಕಲ್ಲಿದ್ದಲು ಆಮದು ಮಾಡಿಕೊಳ್ಳುವ ಉಷ್ಣ ವಿದ್ಯುತ್‌ ಘಟಕಗಳು ಪೂರ್ಣ ಪ್ರಮಾಣದಲ್ಲಿ ಉತ್ಪಾದನೆ ಆರಂಭಿಸಬೇಕು ಎಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಈ ಸಂಬಂಧ ವಿದ್ಯುತ್‌ ಕಾಯ್ದೆಯ ಪರಿಚ್ಛೇದ-11ನ್ನು ಅದು ಜಾರಿಗೆ ತಂದಿದೆ.

ತುರ್ತು ಸಂದರ್ಭದಲ್ಲಿ ಈ ಪರಿಚ್ಛೇದವನ್ನು ಬಳಸಿಕೊಂಡು ಯಾವುದೇ ವಿದ್ಯುತ್‌ ಉತ್ಪಾದನಾ ಘಟಕಕ್ಕೆ ತನ್ನ ಆದೇಶಕ್ಕೆ ಅನುಗುಣವಾಗಿ ಕೆಲಸ ಮಾಡುವಂತೆ ಆದೇಶಿಸುವ ಅಧಿಕಾರ ಸರ್ಕಾರಕ್ಕಿದೆ. ಸರ್ಕಾರದ ಈ ನಿರ್ಧಾರದಿಂದ ಗುಜರಾತ್‌, ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ ಕೆಲಸ ಮಾಡುತ್ತಿರುವ ಎಸ್ಸಾರ್‌ ಪವರ್‌, ಕೋಸ್ಟಲ್‌ ಎನರ್ಜೆನ್‌, ಅದಾನಿ ಪವರ್‌ ಹಾಗೂ ಟಾಟಾ ಪವರ್‌ ಕಂಪನಿಗಳಿಗೆ ಪೂರ್ಣಪ್ರಮಾಣದ ವಿದ್ಯುತ್‌ ಉತ್ಪಾದನೆ ಮಾಡುವುದು ಕಡ್ಡಾಯವಾಗಲಿದೆ.

ಮೊದಲು ಒಪ್ಪಂದ ಮಾಡಿಕೊಂಡವರಿಗೆ ವಿದ್ಯುತ್‌ ಪೂರೈಸುವುದು ಹಾಗೂ ಬಾಕಿ ಉಳಿದ ವಿದ್ಯುತ್‌ ಅನ್ನು ವಿನಿಮಯ ಘಟಕಗಳ ಮೂಲಕ ರಾಜ್ಯ ಸರ್ಕಾರಗಳಿಗೆ ಕಳಿಸುವುದು- ಈ ಘಟಕಗಳಿಗೆ ಅನಿವಾರ್ಯವಾಗಲಿದೆ.

ಆಮದು ಮಾಡಿಕೊಂಡ ಕಲ್ಲಿದ್ದಲು ದುಬಾರಿ ಎಂಬ ಕಾರಣಕ್ಕೆ ಈವರೆಗೆ ಈ ಘಟಕಗಳು 17 ಸಾವಿರ ಮೆಗಾವ್ಯಾಟ್‌ ಬದಲು 10 ಸಾವಿರ ಮೆಗಾವ್ಯಾಟ್‌ ಮಾತ್ರ ವಿದ್ಯುತ್‌ ಉತ್ಪಾದನೆ ಮಾಡುತ್ತಿದ್ದವು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

India Latest News Live: ₹610 ಕೋಟಿ ಟಿಕೆಟ್‌ ಹಣ ವಾಪಸ್‌ ನೀಡಿದ ಇಂಡಿಗೋ; ಪ್ರಯಾಣಿಕರಿಗೆ ತಲುಪಿದ ಲಗೇಜ್
ಟಾಪ್‌ 10 ಸ್ವಚ್ಛ ಗಾಳಿಯ ನಗರಗಳಲ್ಲಿ ರಾಜ್ಯದ 6 !