ಪೈಲಟ್ ಸಮಯಪ್ರಜ್ಞೆಯಿಂದ ಉಳಿಯಿತು 75 ಜನರ ಪ್ರಾಣ!

By Kannadaprabha NewsFirst Published Jul 20, 2020, 10:01 AM IST
Highlights

ತಿರುಪತೀಲಿ ತಪ್ಪಿತು 75 ಜನರಿದ್ದ ಇಂಡಿಗೂ ವಿಮಾನದ ಅಪಘಾತ| ಇಳಿವ ಕೆಲ ಕ್ಷಣ ಮುನ್ನ ರನ್‌ವೇಲಿ ಅಪಘಾತಕ್ಕೀಡಾದ ಫೈರ್‌ ಇಂಜಿನ್‌ ವಾಹನ ಪತ್ತೆ| ತಕ್ಷಣವೇ ಲ್ಯಾಂಡಿಂಗ್‌ ರದ್ದು ಮಾಡಿ ವಿಮಾನ ಬೆಂಗಳೂರಿಗೆ ತಂದು ಇಳಿಸಿದ ಪೈಲಟ್‌

ತಿರುಪತಿ(ಜು.20):  75 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಇಂಡಿಗೋ ಸಂಸ್ಥೆಗೆ ಸೇರಿದ ವಿಮನವೊಂದು ಭಾರೀ ಅಪಘಾತದಿಂದ ಸ್ವಲ್ಪದರಲ್ಲೇ ಪಾರಾದ ಘಟನೆ ಭಾನುವಾರ ತಿರುಪತಿಯಲ್ಲಿ ನಡೆದಿದೆ. ಪೈಲಟ್‌ನ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದ್ದು, ತಿರುಪತಿಯಲ್ಲಿ ಇಳಿಯಬೇಕಿದ್ದ ವಿಮಾನವನ್ನು ಸುರಕ್ಷಿತವಾಗಿ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ತಂದು ತಿಳಿಸಲಾಗಿದೆ.

ಲಡಾಖ್‌ನಲ್ಲಿ ಭಾರತೀಯ ಸೇನೆ ಸಮರಭ್ಯಾಸ; ಯುದ್ಧ ವಿಮಾನದಿಂದ ಜಿಗಿದು ಸಾಹಸ ಪ್ರದರ್ಶನ!

ಏನಾಯ್ತು: ಹೈದ್ರಾಬಾದ್‌ -ತಿರುಪತಿ- ಬೆಂಗಳೂರು ನಡುವೆ ಸಂಚರಿಸುವ ಇಂಡಿಯೋ ವಿಮಾನ ಭಾನುವಾರ ಬೆಳಗ್ಗೆ 41 ಪ್ರಯಾಣಿಕರನ್ನು ಇಳಿಸಲು ತಿರುಪತಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದತ್ತ ಆಗಮಿಸುತ್ತಿತ್ತು. ವಿಮಾನ ಇನ್ನೇನು ಇಳಿಯಬೇಕು ಅನ್ನುವ ಹಂತದಲ್ಲಿ ಪೈಲಟ್‌ಗೆ ರನ್‌ವೇನಲ್ಲಿ ಅಪಘಾತಕ್ಕೀಡಾದ ಅಗ್ನಿಶಾಮಕ ದಳದ ವಾಹನ ಪತ್ತೆಯಾಗಿದೆ. ಕೂಡಲೇ ಸಮಯಪ್ರಜ್ಞೆ ತೋರಿದ ಪೈಲಟ್‌, ವಿಮಾನವನ್ನು ಇಳಿಸುವ ಬದಲು ಸೀದಾ ಬೆಂಗಳೂರಿಗೆ ಕೊಂಡೊಯ್ದು, ಅಲ್ಲಿ ಸುರಕ್ಷಿತವಾಗಿ ಇಳಿಸಿದ್ದಾರೆ. ಹೀಗಾಗಿ ಪ್ರಯಾಣಿಕರು ಯಾವುದೇ ತೊಂದರೆ ಇಲ್ಲದೇ ಪಾರಾಗಿದ್ದಾರೆ.

ಶಸ್ತ್ರಚಿಕಿತ್ಸೆಗೆ ಒಳಗಾದ ಎಳೆ ಕೂಸಿಗೆ 1000 ಕಿ.ಮೀ ದೂರದಿಂದ ಎದೆಹಾಲು!

ಪ್ರಾಥಮಿಕ ವಿಚಾರಣೆ ವೇಳೆ, ಸಾಮಾನ್ಯ ತಪಾಸಣೆಗೆ ತೆರಳಿದ್ದ ವೇಳೆ ಅಗ್ನಿಶಾಮಕ ವಾಹನ ಅಪಘಾತಕ್ಕೀಡಾಗಿದ್ದು ಬೆಳಕಿಗೆ ಬಂದಿದೆ. ಘಟನೆ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಸಂಚರಿಸುವ ವಿಮಾನಗಳ ಸಂಚಾರದಲ್ಲಿ ಸುಮಾರು 3 ಗಂಟೆಗಳ ವ್ಯತ್ಯಯವಾಗಿದೆ.

click me!