
ಇಸ್ರೇಲ್ (ಫೆ.27): ಕದನ ವಿರಾಮದ ಬೆನ್ನಲ್ಲೇ ಇಸ್ರೇಲ್‌ನಲ್ಲಿ ಮತ್ತೆ ಭಯೋತ್ಪಾದಕರು ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಸುಮಾರು 8 ಇಸ್ರೇಲಿ ನಾಗರಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಇಸ್ರೇಲ್‌ನ ಹೈಫಾದಲ್ಲಿ ನಡೆದ ನಡೆದ ದಾಳಿಯಲ್ಲಿ ಭಯೋತ್ಪಾದಕರು ಪಾದಾಚಾರಿಗಳ ಮೇಲೆ ಕಾರು ನುಗ್ಗಿಸಿ ಹತ್ಯೆಗೆ ಯತ್ನಿಸಿದ್ದಾರೆ ಎಂದು ಅಂಗ್ಲಮಾಧ್ಯಮಗಳು ವರದಿ ಮಾಡಿವೆ. ಡೈಲಿ ಮೇಲ್ ವರದಿ ಪ್ರಕಾರ, ಪೊಲೀಸರು ಇದೊಂದು ಭಯೋತ್ಪಾದಕ ದಾಳಿ ಎಂದು ಕರೆದಿದ್ದಾರೆ. ಹೈಫಾ ನಗರದ ದಕ್ಷಿಣದಲ್ಲಿರುವ ಕರ್ಕೂರ್‌ನಲ್ಲಿ ಭದ್ರತಾ ಪಡೆಗಳು ಈಗಾಗಲೇ ಶಂಕಿತ ಆರೋಪಿಯನ್ನು ಬಂಧಿಸಿವೆ.
ನಾಗರಿಕರ ಮೇಲೆ ಚಾಕುವಿನಿಂದ ದಾಳಿ:
ಭಯೋತ್ಪಾದಕರು ಮೊದಲು ಬಸ್ ನಿಲ್ದಾಣದಲ್ಲಿ ಹಲವಾರು ಪಾದಾಚಾರಿಗಳಿಗೆ ಡಿಕ್ಕಿ ಹೊಡೆದಿದ್ದಾರೆ, ನಂತರ ಇತರ ಜನರ ಮೇಲೆ ಚಾಕು ತಿವಿದು ದಾಳಿ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇಸ್ರೇಲ್‌ನ ತುರ್ತು ವೈದ್ಯಕೀಯ ಸೇವೆಗಳ ಅಧಿಕಾರಿ ಮ್ಯಾಗೆನ್ ಡೇವಿಡ್ ಮೊದಲ ಪ್ರತಿಕ್ರಿಯೆ ನೀಡಿದ್ದು, ಘಟನೆಯಲ್ಲಿ ಸುಮಾರು ಹತ್ತು ಜನರು ಗಾಯಗೊಂಡಿದ್ದಾರೆ. ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ದಾಳಿಗೊಳಗಾದವರಲ್ಲಿ ಬಾಲಕಿ ಸೇರಿದ್ದಾಳೆ. ಗಾಯಾಳು ಪೈಕಿ ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ