
ಹರಿದ್ವಾರ(ಜೂ.16): ಉತ್ತರಾಖಂಡದ ಹರಿದ್ವಾರದಲ್ಲಿ ನಡೆದ ಕುಂಭಮೇಳದ ವೇಳೆ ಕೋವಿಡ್ ಪರೀಕ್ಷೆಯ ಗುತ್ತಿಗೆ ಪಡೆದಿದ್ದ ಖಾಸಗಿ ಸಂಸ್ಥೆಯೊಂದು 1 ಲಕ್ಷಕ್ಕೂ ಹೆಚ್ಚು ನಕಲಿ ಕೋವಿಡ್ ವರದಿಗಳನ್ನು ನೀಡಿತ್ತು ಎಂಬ ವಿಚಾರ ವಿಸ್ತೃತ ತನಿಖೆಯಿಂದ ಬೆಳಕಿಗೆ ಬಂದಿದೆ. ಇದೇ ವರ್ಷದ ಏ.1ರಿಂದ ಏ.30ರವರೆಗೆ ಕುಂಭಮೇಳ ನಡೆದಿತ್ತು.
ಲಕ್ಷಾಂತರ ಭಕ್ತರು ಸೇರಿದ್ದ ಕುಂಭಮೇಳದಲ್ಲಿ ಸೋಂಕು ಹೆಚ್ಚು ವ್ಯಾಪಕವಾಗಿ ಹರಡದಂತೆ ಮುಂಜಾಗ್ರತೆ ವಹಿಸಲು ಕುಂಭಕ್ಕೆ ಬರುವ ಭಕ್ತರ ಕೋವಿಡ್ ಪರೀಕ್ಷೆ ಜವಾಬ್ದಾರಿಯನ್ನು ಖಾಸಗಿ ಸಂಸ್ಥೆಗೆ ವಹಿಸಲಾಗಿತ್ತು. ನಿತ್ಯ 50 ಸಾವಿರ ಜನರ ಟೆಸ್ಟ್ ನಿಗದಿಪಡಿಸಲಾಗಿತ್ತು. ಆದರೆ ಈ ಗುರಿ ತಲುಪಲು ಆ ಸಂಸ್ಥೆಯು ನಕಲಿ ಕೋವಿಡ್ ವರದಿಗಳನ್ನು ನೀಡಿದೆ ಎಂಬ ಆರೋಪದ ಕೇಳಿಬಂದಿತ್ತು. ಈ ಕುರಿತಾಗಿ ಹರಿದ್ವಾರ ಜಿಲ್ಲಾಡಳಿತ ತನಿಖೆಗೆ ಆದೇಶಿಸಿತ್ತು. ಅಭಿವೃದ್ಧಿಯ ಮುಖ್ಯಾಧಿಕಾರಿ ಸೌರಭ್ ಗಹರ್ವಾರ್ ಅವರ ನೇತೃತ್ವದ ಸಮಿತಿ ನಡೆಸಿದ ತನಿಖೆಯ ಪ್ರಕಾರ ಹಲವು ಅಕ್ರಮಗಳು ನಡೆದಿರುವುದು ಬಯಲಾಗಿದೆ.
ಏನೆಲ್ಲಾ ಅಕ್ರಮಗಳು?:
- ಒಂದೇ ಆ್ಯಂಟಿಜೆನ್ ಕಿಟ್ ಮುಖಾಂತರ 700 ಮಾದರಿಗಳ ಪರೀಕ್ಷೆ
- 50 ಮಂದಿಯ ಕೋವಿಡ್ ಪರೀಕ್ಷೆಯ ನೋಂದಣಿಗಾಗಿ ಒಂದೇ ಫೋನ್ ನಂಬರ್
- ಕೋವಿಡ್ ಟೆಸ್ಟಿಂಗ್ ಸಿಬ್ಬಂದಿ ಕುಂಭಮೇಳದಲ್ಲಿ ಇರಬೇಕಿತ್ತು. ಆದರೆ ಅಲ್ಲಿಗೆ ಬರಲೇ ಇಲ್ಲ
- ರಾಜಸ್ಥಾನದಲ್ಲಿ ಕುಳಿತೇ ಸಿಬ್ಬಂದಿಯಿಂದ ಹರಿದ್ವಾರದಲ್ಲಿ ಇರುವವರ ‘ನಕಲಿ ಮಾದರಿ’ ಸಂಗ್ರಹ
- ಇವರ ಕೃತ್ಯಕ್ಕೆ ಹಲವು ಲ್ಯಾಬ್‌ಗಳ ಸಾಥ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ