ಮೋದಿ 2.0 ಸರ್ಕಾರಕ್ಕೆ ಇಂದು ಮೂರರ ಹರ್ಷ: ಇಂದಿನಿಂದ 15 ದಿನ ಬಿಜೆಪಿ ಪ್ರಚಾರಾಂದೋಲನ!

By Suvarna News  |  First Published May 30, 2022, 6:08 AM IST

* ಮೋದಿ ಪ್ರಧಾನಮಂತ್ರಿ ಆಗಿ ಈಗಾಗಲೇ 8 ವರ್ಷ

*

ನವದೆಹಲಿ: 2019ರ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಅಭೂತಪೂರ್ವ ಜಯ ದೊರಕಿಸಿಕೊಡುವುದರ ಮೂಲಕ 2ನೇ ಬಾರಿಗೆ ದೇಶದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನರೇಂದ್ರ ಮೋದಿ ಸರ್ಕಾರಕ್ಕೆ ಸೋಮವಾರ 3 ವರ್ಷ ತುಂಬಲಿದೆ. ಮೋದಿ ಪ್ರಧಾನಿ ಆಗಿ ಮೇ 26ಕ್ಕೆ 8 ವರ್ಷಗಳು ಸಂದಿವೆ. ಈ ಎಲ್ಲಾ ಹಿನ್ನೆಲೆಯಲ್ಲಿ ಸೋಮವಾರದಿಂದ 15 ದಿನಗಳ ಕಾಲ ಸಾರ್ವಜನಿಕ ಸಂಪರ್ಕ ಅಭಿಯಾನದ ಮೂಲಕ ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳ ಕುರಿತ ಮಾಹಿತಿಯನ್ನು ಜನರಿಗೆ ತಲುಪಿಸುವ ಕಾರ್ಯಕ್ರಮವನ್ನು ಭಾರತೀಯ ಜನತಾ ಪಕ್ಷ ಹಮ್ಮಿಕೊಂಡಿದೆ.

ಮತ್ತೊಂದೆಡೆ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರು, ‘ಪಿಎಂ ಕೇ​ರ್‍ಸ್ ಫಾರ್‌ ಚಿಲ್ಡ್ರನ್‌’ ನಿಧಿಯ ಮೂಲಕ ಕೋವಿಡ್‌ಗೆ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ವಿವಿಧ ಯೋಜನೆಗಳ ಲಾಭವನ್ನು ಹಸ್ತಾಂತರಿಸಲಿದ್ದಾರೆ.

ಸಂಭ್ರಮಾಚರಣೆ:

ಮೋದಿ ಸರ್ಕಾರದ ವರ್ಷಾಚರಣೆ ಈ ಹಿನ್ನೆಲೆಯಲ್ಲಿ 15 ದಿನಗಳ ಕಾಲ ದೇಶಾದ್ಯಂತ ಸಂಭ್ರಮಾಚರಣೆ ನಡೆಸಲು ಬಿಜೆಪಿ ಉದ್ದೇಶಿಸಿದೆ. ಈ ಸಂಭ್ರಮಾಚರಣೆ ಭಾಗವಾಗಿ ಮೇ 30ರಿಂದ ಜೂ.14ರವರೆಗೆ ಪಕ್ಷ ಸಾರ್ವಜನಿಕ ಸಂಪರ್ಕ ಅಭಿಯಾನ ಹಮ್ಮಿಕೊಂಡಿದೆ.

ಈ ಅವಧಿಯಲ್ಲಿ ಕೇಂದ್ರದ ಎಲ್ಲ ಸಚಿವರು, ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳು, ಸಚಿವರು ಹಾಗೂ ಜನಪ್ರತಿನಿಧಿಗಳು ಬೃಹತ್‌ ಸಾರ್ವಜನಿಕ ಸಂಪರ್ಕ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ನಾಯಕರು 2ನೇ ಅವಧಿಯ 3 ವರ್ಷ ಮತ್ತು ಮೊದಲ 5 ವರ್ಷದಲ್ಲಿ ಮೋದಿ ಸರ್ಕಾರ ಜಾರಿಗೊಳಿಸಿದ ಪ್ರಮುಖ ಯೋಜನೆಗಳು ಮತ್ತು ಅದರಿಂದ ಜನ ಸಮುದಾಯಕ್ಕೆ ಆದ ಲಾಭಗಳನ್ನು ವಿವರಿಸಲಿದ್ದಾರೆ. ಅದರಲ್ಲೂ ಪ್ರಮುಖವಾಗಿ ಸೇವೆ, ಉತ್ತಮ ಆಡಳಿತ ಮತ್ತು ಬಡವರ ಕಲ್ಯಾಣದ ಧ್ಯೇಯವನ್ನಿಟ್ಟುಕೊಂಡು ಅಭಿಯಾನಕ್ಕೆ ಪಕ್ಷ ಉದ್ದೇಶಿಸಿದೆ.

ಇದಲ್ಲದೆ 15 ದಿನಗಳ ಅವಧಿಯಲ್ಲಿ ರೈತರು, ಮಹಿಳೆಯರು, ಪರಿಶಿಷ್ಟಜಾತಿ, ಪರಿಶಿಷ್ಟಪಂಗಡ, ಇತರೆ ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರನ್ನು ಭೇಟಿ ಮಾಡಲು ಒಂದೊಂದು ದಿನವನ್ನು ಮೀಸಲಿಡಲಾಗಿದೆ.

ಮೋದಿ ಕಾರ್ಯಕ್ರಮ:

ಪ್ರಧಾನಿ ನರೇಂದ್ರ ಮೋದಿ ಸೋಮವಾರ ವಚ್ರ್ಯುವಲಿ ನಡೆಯುವ ಕಾರ್ಯಕ್ರಮದಲ್ಲಿ ಕೋವಿಡ್‌ನಿಂದ ಪೋಷಕರನ್ನು ಕಳೆದುಕೊಂಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಮಕ್ಕಳಿಗೆ ಬ್ಯಾಂಕ್‌ ಪಾಸ್‌ಬುಕ್‌, ಆಯುಷ್ಮಾನ್‌ ಭಾರತ್‌ ಯೋಜನೆಯಡಿ ಆರೋಗ್ಯ ಕಾರ್ಡ್‌ ವಿತರಣೆ ಮಾಡಲಿದ್ದಾರೆ. ಮಕ್ಕಳು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಚೇರಿ ಮೂಲಕ ಕಾರ್ಯಕ್ರಮಕ್ಕೆ ವಚ್ರ್ಯುವಲಿ ಹಾಜರಾಗಲಿದ್ದಾರೆ.

ಮೋದಿ 2.0 ಸರ್ಕಾರಕ್ಕೆ ಇಂದು ಮೂರರ ಹರ್ಷ 

* ಇಂದಿನಿಂದ 15 ದಿನ ಬಿಜೆಪಿ ಪ್ರಚಾರಾಂದೋಲನ

ನವದೆಹಲಿ(ಮೇ.30): 2019ರ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಅಭೂತಪೂರ್ವ ಜಯ ದೊರಕಿಸಿಕೊಡುವುದರ ಮೂಲಕ 2ನೇ ಬಾರಿಗೆ ದೇಶದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನರೇಂದ್ರ ಮೋದಿ ಸರ್ಕಾರಕ್ಕೆ ಸೋಮವಾರ 3 ವರ್ಷ ತುಂಬಲಿದೆ. ಮೋದಿ ಪ್ರಧಾನಿ ಆಗಿ ಮೇ 26ಕ್ಕೆ 8 ವರ್ಷಗಳು ಸಂದಿವೆ. ಈ ಎಲ್ಲಾ ಹಿನ್ನೆಲೆಯಲ್ಲಿ ಸೋಮವಾರದಿಂದ 15 ದಿನಗಳ ಕಾಲ ಸಾರ್ವಜನಿಕ ಸಂಪರ್ಕ ಅಭಿಯಾನದ ಮೂಲಕ ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳ ಕುರಿತ ಮಾಹಿತಿಯನ್ನು ಜನರಿಗೆ ತಲುಪಿಸುವ ಕಾರ್ಯಕ್ರಮವನ್ನು ಭಾರತೀಯ ಜನತಾ ಪಕ್ಷ ಹಮ್ಮಿಕೊಂಡಿದೆ.

ಮತ್ತೊಂದೆಡೆ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರು, ‘ಪಿಎಂ ಕೇ​ರ್‍ಸ್ ಫಾರ್‌ ಚಿಲ್ಡ್ರನ್‌’ ನಿಧಿಯ ಮೂಲಕ ಕೋವಿಡ್‌ಗೆ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ವಿವಿಧ ಯೋಜನೆಗಳ ಲಾಭವನ್ನು ಹಸ್ತಾಂತರಿಸಲಿದ್ದಾರೆ.

Latest Videos

undefined

ಸಂಭ್ರಮಾಚರಣೆ:

ಮೋದಿ ಸರ್ಕಾರದ ವರ್ಷಾಚರಣೆ ಈ ಹಿನ್ನೆಲೆಯಲ್ಲಿ 15 ದಿನಗಳ ಕಾಲ ದೇಶಾದ್ಯಂತ ಸಂಭ್ರಮಾಚರಣೆ ನಡೆಸಲು ಬಿಜೆಪಿ ಉದ್ದೇಶಿಸಿದೆ. ಈ ಸಂಭ್ರಮಾಚರಣೆ ಭಾಗವಾಗಿ ಮೇ 30ರಿಂದ ಜೂ.14ರವರೆಗೆ ಪಕ್ಷ ಸಾರ್ವಜನಿಕ ಸಂಪರ್ಕ ಅಭಿಯಾನ ಹಮ್ಮಿಕೊಂಡಿದೆ.

ಈ ಅವಧಿಯಲ್ಲಿ ಕೇಂದ್ರದ ಎಲ್ಲ ಸಚಿವರು, ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳು, ಸಚಿವರು ಹಾಗೂ ಜನಪ್ರತಿನಿಧಿಗಳು ಬೃಹತ್‌ ಸಾರ್ವಜನಿಕ ಸಂಪರ್ಕ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ನಾಯಕರು 2ನೇ ಅವಧಿಯ 3 ವರ್ಷ ಮತ್ತು ಮೊದಲ 5 ವರ್ಷದಲ್ಲಿ ಮೋದಿ ಸರ್ಕಾರ ಜಾರಿಗೊಳಿಸಿದ ಪ್ರಮುಖ ಯೋಜನೆಗಳು ಮತ್ತು ಅದರಿಂದ ಜನ ಸಮುದಾಯಕ್ಕೆ ಆದ ಲಾಭಗಳನ್ನು ವಿವರಿಸಲಿದ್ದಾರೆ. ಅದರಲ್ಲೂ ಪ್ರಮುಖವಾಗಿ ಸೇವೆ, ಉತ್ತಮ ಆಡಳಿತ ಮತ್ತು ಬಡವರ ಕಲ್ಯಾಣದ ಧ್ಯೇಯವನ್ನಿಟ್ಟುಕೊಂಡು ಅಭಿಯಾನಕ್ಕೆ ಪಕ್ಷ ಉದ್ದೇಶಿಸಿದೆ.

ಇದಲ್ಲದೆ 15 ದಿನಗಳ ಅವಧಿಯಲ್ಲಿ ರೈತರು, ಮಹಿಳೆಯರು, ಪರಿಶಿಷ್ಟಜಾತಿ, ಪರಿಶಿಷ್ಟಪಂಗಡ, ಇತರೆ ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರನ್ನು ಭೇಟಿ ಮಾಡಲು ಒಂದೊಂದು ದಿನವನ್ನು ಮೀಸಲಿಡಲಾಗಿದೆ.

ಮೋದಿ ಕಾರ್ಯಕ್ರಮ:

ಪ್ರಧಾನಿ ನರೇಂದ್ರ ಮೋದಿ ಸೋಮವಾರ ವಚ್ರ್ಯುವಲಿ ನಡೆಯುವ ಕಾರ್ಯಕ್ರಮದಲ್ಲಿ ಕೋವಿಡ್‌ನಿಂದ ಪೋಷಕರನ್ನು ಕಳೆದುಕೊಂಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಮಕ್ಕಳಿಗೆ ಬ್ಯಾಂಕ್‌ ಪಾಸ್‌ಬುಕ್‌, ಆಯುಷ್ಮಾನ್‌ ಭಾರತ್‌ ಯೋಜನೆಯಡಿ ಆರೋಗ್ಯ ಕಾರ್ಡ್‌ ವಿತರಣೆ ಮಾಡಲಿದ್ದಾರೆ. ಮಕ್ಕಳು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಚೇರಿ ಮೂಲಕ ಕಾರ್ಯಕ್ರಮಕ್ಕೆ ವಚ್ರ್ಯುವಲಿ ಹಾಜರಾಗಲಿದ್ದಾರೆ.

ಏನೇನು ಕಾರ‍್ಯಕ್ರಮ?

- ಇನ್ನು 15 ದಿನಗಳ ಕಾಲ ದೇಶಾದ್ಯಂತ ಬಿಜೆಪಿಯಿಂದ ಸಂಭ್ರಮಾಚರಣೆ

- ಜನ ಸಂಪರ್ಕ ಅಭಿಯಾನ ನಡೆಸಿ ಕೇಂದ್ರದ ಯೋಜನೆಗಳ ಬಗ್ಗೆ ವಿವರಣೆ

- ಕೇಂದ್ರ ಸಚಿವರು, ಬಿಜೆಪಿ ಸಿಎಂಗಳು, ಸಚಿವರು ಕಾರ‍್ಯಕ್ರಮಗಳಲ್ಲಿ ಭಾಗಿ

- ರೈತರು, ಸ್ತ್ರೀಯರು, ಅಹಿಂದ ವರ್ಗದವರ ಭೇಟಿಗೆ ದಿನಗಳು ಮೀಸಲು

- ಕೋವಿಡ್‌ನಿಂದ ಅನಾಥರಾದ ಮಕ್ಕಳಿಗೆ ಸ್ವತಃ ಮೋದಿಯಿಂದ ಪರಿಹಾರ

click me!