Independence Day: ಉಪನ್ಯಾಸಕನಿಂದ  ಯುವಜನತೆಗೆ ವಿಭಿನ್ನ ಸಂದೇಶ 

By Ravi Nayak  |  First Published Aug 17, 2022, 12:00 AM IST

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಹಿನ್ನೆಲೆ ಇಲ್ಲೊಬ್ಬ ಉಪನ್ಯಾಸಕ \ ದೇಶದ ಯುವ ಜನತೆಗೆ ವಿಭಿನ್ನ ಸಂದೇಶ ಕೊಡಲು ವಿಭಿನ್ನ ಪ್ರಯತ್ನ ಮಾಡಿದ್ದಾರೆ. ಒಡೆದ ಬಾಟಲಿ ಚೂರುಗಳನ್ನು ಬಳಸಿಕೊಂಡು ಭಾರತದ ಭೂಪಟ ರಚಿಸಿದ್ದಾರೆ


ವರದಿ : ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ.

ಕೋಲಾರ (ಆ.16) : ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಪೂರೈಸಿರುವ ಹಿನ್ನೆಲೆಯಲ್ಲಿ ಇಡೀ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ(Independence Amrit Maohotsav)ದ ಸಂಭ್ರಮದಲ್ಲಿದೆ.ಇಡೀ ದೇಶದಾಧ್ಯಂತ ಸಂಭ್ರಮ ಮನೆ ಮಾಡಿದೆ,ಆದರೆ ಇಲ್ಲೊಬ್ಬ ಉಪನ್ಯಾಸಕ ಮಾತ್ರ ಇದೇ ಸಂದರ್ಭವನ್ನು ಬಳಸಿಕೊಂಡು ದೇಶದ ಯುವ ಜನತೆಗೆ ವಿಭಿನ್ನ ಸಂದೇಶ ಕೊಡಲು ವಿಭಿನ್ನ ಪ್ರಯತ್ನ ಮಾಡಿದ್ದಾರೆ.ಏನದು ವಿಭಿನ್ನ ಪ್ರಯತ್ನ ಮುಂದೆ ಓದಿ..

Tap to resize

Latest Videos

undefined

 

Kolara; ದೇಶ ವಿಭಜನೆಯ ಘೋರ ಘಟನೆಗಳ ನೆನಪು ಇಂದಿಗೂ ಅಚ್ಚಳಿಯದಂತೆ ಉಳಿದಿದೆ

ಒಡೆದ ಬಾಟೆಲ್(Bottle)​ ಚೂರುಗಳನ್ನು ಬಾಯಲ್ಲಿ ಕಚ್ಚಿಕೊಂಡು ಭಾರತದ ಭೂಪಟಕ್ಕೆ ಅಂಟಿಸುತ್ತಿರುವ ಉಪನ್ಯಾಸಕ,ತನ್ನ ಎರಡೂ ಕೈಗಳಲ್ಲಿ 7.5 ಕೆಜಿಯ ಡಂಬಲ್ಸ್​ಗಳನ್ನು ಹಿಡಿದು ಗಾಜಿನಲ್ಲಿ ದೇಶದ ಭೂಪಟವನ್ನು ಬಿಡಿಸುತ್ತಿರುವ ಸಾಧಕ,ಅದನ್ನು ಕುತೂಹಲದಿಂದ ವೀಕ್ಷಣೆ ಮಾಡುತ್ತಿರುವ ವಿದ್ಯಾರ್ಥಿಗಳು ಇಂಥದ್ದೊಂದು ದೃಶ್ಯ ನಮಗೆ ಕಂಡು ಬಂದಿದ್ದು ಕೋಲಾರ(kolar) ಇಲ್ಲೆ ಕೆಜಿಎಫ್​ ನಲ್ಲಿ. ಹೌದು ಕೆಜಿಎಫ್​(KGF)ನ ಚಿನ್ನದ ಗಣಿ ಕಾಲೇಜಿ((Gold mines Collage)ನಲ್ಲಿ ಅರಕಾಲಿಕ ಉಪನ್ಯಾಸಕರಾಗಿ ಕೆಲಸ ಮಾಡುತ್ತಿರುವ ಪ್ರತಾಪ್​ ಕುಮಾರ್ ಸ್ವತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ದೇಶದ ಯುವಜನತಗೆ ಏನಾದರೂ ಒಂದು ಸಂದೇಶ ಕೊಡಬೇಕು ಮಾದಕ ವಸ್ತುಗಳ ಚಟಕ್ಕೆ ಬಿದ್ದು ಹಾಳಾಗುತ್ತಿರುವ ಯುವ ಜನತೆಯನ್ನು ಏನಾದರೂ ಮಾಡಿ ಸರಿದಾರಿಗೆ ತರಬೇಕು ಎನ್ನುವ ನಿಟ್ಟಿನಲ್ಲಿ ವಿಭಿನ್ನವಾಗಿ ಸಂದೇಶವೊಂದನ್ನು ರವಾನೆ ಮಾಡುತ್ತಿದ್ದಾರೆ.ಅದಕ್ಕಾಗಿ ಪ್ರತಾಪ್​ ಕುಮಾರ್​ ಮದ್ಯದ ಬಾಟಲಿ ಗಳನ್ನು ಸಂಗ್ರಹಿಸಿ ಅದರ ಗಾಜಿನ 75 ಚೂರುಗಳನ್ನು ಮಾಡಿಕೊಂಡು,ಎರಡೂ ಕೈಗಳಲ್ಲಿ 7.5 ಕೆಜಿಯ ಡಂಬಲ್ಸ್​ ಹಿಡಿದುಕೊಂಡು ಭಾರತದ ಭೂಪಟಕ್ಕೆ ಒಡೆದ ಗಾಜಿನ ಚೂರುಗಳನ್ನು ಬಾಯಿಯಿಂದ ಅಂಟಿಸುವ ಮೂಲಕ ವಿಭಿನ್ನ ಸಾಧನೆಯೊಂದನ್ನು ಮಾಡುವ ಮೂಲಕ ಗಮನಸೆಳೆಯುತ್ತಿದ್ದಾರೆ.

ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂದರ್ಭದಲ್ಲಿ ನರಗುಂದ ರೈತರಿಗೆ ಬಂಪರ್ ಗಿಫ್ಟ್

ಇಂತಹ ವಿಭಿನ್ನ ಸಾಧನೆ ಮಾಡಲು ಉಪನ್ಯಾಸಕ ಪ್ರತಾಪ್​ ಕಳೆದ ಒಂದು ವಾರದಿಂದ ತರಬೇತಿ ಮಾಡಿದ್ದಾರೆ. ನಂತರ ಹಲವೆಡೆ ಹೋಗಿ ಮದ್ಯದ ಬಾಟಲಿಗಳನ್ನು ಸಂಗ್ರಹಿಸಿದ್ದಾರೆ. ನಂತರ ಈ ರೀತಿ ಗಾಜಿನ ಚೂರುಗಳನ್ನು ಕೈಯಲ್ಲಿ ಮುಟ್ಟದ ಬಾಯಿಯಲ್ಲಿ ಅದನ್ನು ಕಚ್ಚಿಕೊಂಡು ಭಾರತದ ಭೂಪಟದ ಚಿತ್ರಕ್ಕೆ ಅಂಟಿಸುವ ಮೂಲಕ ನೂಡುಗರೆ ಮೈ ಜುಂ ಎನ್ನಿಸುವ ಸಾಧನೆ ಮಾಡಿದ್ದಾರೆ. 

ಅಷ್ಟಕ್ಕೂ ಈ ಉಪನ್ಯಾಸಕ ಈ ರೀತಿ ಮದ್ಯದ ಬಾಟಲಿಗಳನ್ನು ಸಂಗ್ರಹಿಸಿ ಅದನ್ನು ಒಡೆದು ಗಾಜಿನ ಚೂರುಗಳನ್ನು ಭಾರತದ ಭೂಪಟಕ್ಕೆ ಅಂಟಿಸಿದ್ದಾದ್ರು ಯಾಕೆ ಅನ್ನೋದರೆ ಹಿಂದೆ ಒಂದು ಸಂದೇಶವಿದೆ.ಈಗಿನ ಯುವಕ ಯುವತಿಯರು ಮದ್ಯ, ಡ್ರಗ್ಸ್​, ಬೀಡಿ ಸಿಗರೇಟು ಕುಡಿತದ ಚಟಕ್ಕೆ ಬಿದ್ದು ತಮ್ಮ ಜೀವನವನ್ನು ತಮ್ಮ ಕೈಯಾರೆ ತಾವು ಹಾಳು ಮಾಡಿಕೊಳ್ಳುತ್ತಿದ್ದಾರೆ.ಇದರಿಂದ ದೇಶ ಶಕ್ತಿಯಾದ ಯುವಕರು 30-40 ವಯಸ್ಸಿಗೆ ಹಲವು ಕಾಯಿಲೆಗಳಿಂದ ಸಾವನ್ನಪ್ಪುತ್ತಿದ್ದಾರೆ ಹೀಗೆ ಯುವಕರು ಅಡ್ಡದಾರಿ ಹಿಡಿದರೆ ದೇಶದ ಭವಿಷ್ಯ ಹೀಗೆ ಒಡೆದ ಗಾಜಿನ ಚೂರಿನಂತಾಗುತ್ತದೆ. ಅದಕ್ಕಾಗಿ ಯುವಕರು ಈ ರೀತಿ ಚಟಗಳಿಗೆ ಬಲಿ ಯಾಗದೆ, ಆರೋಗ್ಯದ ಕಡೆ, ವಿವಿದ ಸಾಂಸ್ಕ್ರುತಿಕ ಚಟುವಟಿಕೆ, ಯೋಗ, ಕಸರತ್ತು ಮಾಡಿ ಹೆಲ್ತಿ ಇಂಡಿಯಾ ನಿರ್ಮಾಣ ಮಾಡಬೇಕು ಎಂದು ಸ್ವತ: ಜಿಮ್​ ಟ್ರೈನರ್​ ಕೂಡಾ ಆಗಿರುವ ಉಪನ್ಯಾಸಕ ಪ್ರತಾಪ್​ ಕುಮಾರ್ ಕಠಿಣ ಪ್ರಯತ್ನ ಮಾಡಿ ಸ್ವತಂತ್ರ್ಯೋತ್ಸವಕ್ಕೆ ಈರೀತಿ ಸಂದೇಶ ರವಾನಿಸುತ್ತಿದ್ದಾರೆ ನನ್ನನ್ನು ನೋಡಿದ ಬೆರಳೆಣಿಕೆಯಷ್ಟು ಜನರಾದರೂ ಬದಲಾದರೆ ನನಗೆ ಅದೇ ತೃಪ್ತಿ ಎನ್ನುತ್ತಾರೆ ಪ್ರತಾಪ್​.ಈ ಹಿಂದೆಯೂ ಹೀಗೆ ಸಾಮಾಜಿಕ ಕಳಕಳಿ ತೋರಿಸಿ ಹಲವು ಗಿನ್ನಿಸ್​ ಹಾಗೂ ವರ್ಡ್​ ರೆಕಾರ್ಡ್​ ಮಾಡಿರುವ ಪ್ರತಾಪ್​ ಈ ಬಾರಿ ಇದೊಂದು ವಿಭಿನ್ನ ಪ್ರಯತ್ನ ಮಾಡಿದ್ದಾರೆ.

ಒಟ್ಟಾರೆ ಸ್ವತಂತ್ರ್ಯೋತ್ಸವದ ಅಮೃತ ಮಹೋತ್ಸವದ ಹಿನ್ನೆಲೆ ಇಡೀ ದೇಶ ಸಂಭ್ರಮಿಸುತ್ತಿದ್ದಾರೆ ಈ ಶಿಕ್ಷಕ ಈ ಸಂಭ್ರಮದಲ್ಲೂ ಕೂಡಾ ದೇಶಕ್ಕೊಂದು,ದೇಶದ ಯುವ ಜನತೆಗೊಂದು ವಿಭಿನ್ನ ಸಂದೇಶ ಕೊಡಲು ಕಠಿಣ ಕಸರತ್ತು ಮಾಡುತ್ತಿದ್ದಾರೆ.ಇವರ ಉದ್ದೇಶ ನಿಜಕ್ಕೂ ಎಲ್ಲರೂ ಕೂಡಾ ಒಪ್ಪುವಂತದ್ದು, ಇವರಿಗೆ ದೇಶದ ಮೇಲಿರುವ ಕಾಳಜಿಗೆ ನಮ್ಮದೊಂದು ಸಲಾಂ..

click me!