ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆ ; ಕಾಂಗ್ರೆಸ್ ನಿಂದ ಪಾದಯಾತ್ರೆ. ರಾಯಚೂರು ತಾ. ಗಿಲ್ಲೆಸೂಗೂರುನಿಂದ ಯರಗೇರಾವರೆಗೆ ಪಾದಯಾತ್ರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮತ್ತು ಮಾಜಿ ಸಚಿವ ಎಚ್.ಆಂಜನೇಯ ನೇತೃತ್ವದಲ್ಲಿ ಪಾದಯಾತ್ರೆ.
ರಾಯಚೂರು (ಆ.9) : ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆ ರಾಯಚೂರು ಜಿಲ್ಲಾ ಕಾಂಗ್ರೆಸ್ ವತಿಯಿಂದ ಪಾದಯಾತ್ರೆ ಕೈಗೊಳ್ಳಲಾಗಿದೆ. ರಾಯಚೂರು ತಾಲೂಕಿನ ಗಿಲ್ಲೇಸೂಗೂರು ಗ್ರಾಮದಿಂದ ಯರಗೇರಾದವರೆಗೆ ಕಾಂಗ್ರೆಸ್ ಪಾದಯಾತ್ರೆ ನಡೆಯಿತು. ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಕ್ಷೇತ್ರದಲ್ಲಿ ನಡೆದ ಪಾದಯಾತ್ರೆಯಲ್ಲಿ ನೂರಾರು ಕಾರ್ಯಕ್ರಮ ಭಾಗವಹಿಸಿದರು.
ರಾಯಚೂರು(Raichur) ತಾಲೂಕಿನ ಗಿಲ್ಲೇಸೂಗೂರು(Gillesuguru) ಗ್ರಾಮದ ವಾಲ್ಮೀಕಿ ಭವನದ ಬಳಿ ಜಮಾಯಿಸಿದ ನೂರಾರು ಕಾರ್ಯಕರ್ತರನ್ನು ಉದ್ದೇಶಿಸಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ(Eshwar Khandre) ಮಾತನಾಡಿದರು. ಸ್ವಾತಂತ್ರ್ಯ ನಿಜವಾದ ವಾರಸ್ಸುದಾರು ಕಾಂಗ್ರೆಸ್(Congress) ನ ನಾಯಕರು.. ಸರಳವಾಗಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದಿಲ್ಲ. ನೂರಾರು ನಾಯಕರು ಬ್ರಿಟಿಷರ ವಿರುದ್ಧ ಹೋರಾಟ ಮಾಡಿ ಜೈಲಿಗೆ ಹೋಗಿದ್ದಾರೆ. ಅಂತಹ ನಾಯಕರ ತ್ಯಾಗ ಬಲಿದಾನದಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಅವರಿಗೆ ನೆನಪಿಸಬೇಕಾಗಿದೆ. ಅಂತಹ ಹೋರಾಟಗಾರಿಗೆ ನಮನ ಸಲ್ಲಿಸಬೇಕು. ಅಂತಹ ಹೋರಾಟಗಾರ ತ್ಯಾಗವನ್ನು ಇಂದಿನ ಯುವಕರಿಗೆ ತಿಳಿಸಿ ಯುವಕರಲ್ಲಿ ರಾಷ್ಟ್ರೀಯತೆ, ದೇಶಪ್ರೇಮಿ, ಸ್ವಾತಂತ್ರ್ಯದ ಕಿಚ್ಚು ಯುವಕರಲ್ಲಿ ಮೂಡಿಸಬೇಕು. ಈ ದೇಶಕ್ಕೆ ತ್ರಿವರ್ಣ ಧ್ವಜಕೊಟ್ಟದ್ದು ಕಾಂಗ್ರೆಸ್. ಸಂವಿಧಾನ ಕೊಟ್ಟದ್ದು ಕಾಂಗ್ರೆಸ್.ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರದ ಕಾಂಗ್ರೆಸ್ ಸಾಧನಗಳನ್ನು ತಿಳಿಸಲು ಹಾಗೂ ಜನರಲ್ಲಿ ಭಾವೈಕ್ಯತೆ ಮೂಡಿಸಲು ಪಾದಯಾತ್ರೆ ಶುರು ಮಾಡಿದ್ದೇವೆ ಎಂದು ತಿಳಿಸಿದರು.
ಇನ್ನೂ ಈ ವೇಳೆ ಮಾಜಿ ಸಚಿವ ಎಚ್. ಆಂಜನೇಯ((H.Anjaneiah), ಮಾಜಿ ಸಂಸದ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ವಿ.ನಾಯಕ(B.V.Nayak), ಎಐಸಿಸಿ ಮುಖಂಡ ಎನ್.ಎಸ್. ಬೋಸರಾಜು(N.S.Bosuraj) ಹಾಗೂ ಎ.ವಸಂತಕುಮಾರ್(A.Vasanth Kumar) ಸೇರಿದಂತೆ ಹತ್ತಾರು ನಾಯಕರು ಪಾದಯಾತ್ರೆಯಲ್ಲಿ ಭಾಗವಹಿಸಿದರು.