ಜಿಲ್ಲಾಧಿಕಾರಿಗಳ ನಿರ್ದೇಶನ: ಆಗಸ್ಟ್‌ 22ರಂದು ಇಂಚಗೇರಿ ಮಠದಲ್ಲಿ ಆಜಾದಿ ಕಾ ಅಮೃತ ಮಹೋತ್ಸವ

By Govindaraj SFirst Published Aug 19, 2022, 11:28 PM IST
Highlights

ಮೊನ್ನೆಯಷ್ಟೇ 75ನೇ ಸ್ವಾತಂತ್ರ್ಯ ಮಹೋತ್ಸವ ಅದ್ದೂರಿಯಾಗಿ ಜರುಗಿತು. ವಿಜಯಪುರ ಜಿಲ್ಲೆಯಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರನ್ನ ಗೌರವಿಸುವ ಕಾರ್ಯ ಮುಂದುವರೆದಿದ್ದು, ಆಗಸ್ಟ್‌ 22ರಂದು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಇಂಚಗೇರಿ ಮಠದಲ್ಲಿ ಆಜಾದಿ ಕಾ ಅಮೃತ ಮಹೋತ್ಸವ ಅದ್ದೂರಿಯಾಗಿ ನಡೆಯಲಿದೆ.

ಷಡಕ್ಷರಿ ಕಂಪೂನವರ್‌, ಏಷ್ಯಾನೆಟ್‌ ಸುವರ್ಣ ನ್ಯೂಸ್, ವಿಜಯಪುರ

ವಿಜಯಪುರ (ಆ.19): ಮೊನ್ನೆಯಷ್ಟೇ 75ನೇ ಸ್ವಾತಂತ್ರ್ಯ ಮಹೋತ್ಸವ ಅದ್ದೂರಿಯಾಗಿ ಜರುಗಿತು. ವಿಜಯಪುರ ಜಿಲ್ಲೆಯಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರನ್ನ ಗೌರವಿಸುವ ಕಾರ್ಯ ಮುಂದುವರೆದಿದ್ದು, ಆಗಸ್ಟ್‌ 22ರಂದು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಇಂಚಗೇರಿ ಮಠದಲ್ಲಿ ಆಜಾದಿ ಕಾ ಅಮೃತ ಮಹೋತ್ಸವ ಅದ್ದೂರಿಯಾಗಿ ನಡೆಯಲಿದೆ.

ಬ್ರಿಟಿಷರ ಹೋರಾಡಿದ ಮಠವನ್ನೆ ಮರೆತಿದ್ದರು: ಜಿಲ್ಲೆಯ ಚಡಚಣ ತಾಲೂಕಿನ ಇಂಚಗೇರಿ ಮಠ ಭಾರತ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿತ್ತು. ಅಂದು ಮಠದ ಪೀಠಾಧಿಕಾರಿಯಾಗಿದ್ದ ಮಾಧವಾನಂದ ಪ್ರಭುಜಿಗಳು ಸ್ವತಃ ಬಂದೂಕು ಕಾರ್ಖಾನೆ ತೆರೆದು ಬ್ರಿಟಿಷರ ಹುಟ್ಟಡಗಿಸಿದ್ದರು. ಆದ್ರೆ ವಿಪರ್ಯಾಸ ಅಂದ್ರೆ ಸರ್ಕಾರ ಹಾಗೂ ಜಿಲ್ಲಾಡಳಿತ ಈ ವಿಚಾರವನ್ನೆ ಮರೆತು ಬಿಟ್ಟಿತ್ತು. ಅದ್ಯಾವ ಮಟ್ಟಿಗೆ ಎಂದರೆ ಪ್ರತಿ ವರ್ಷ ಆಗಸ್ಟ್‌ 15 ರಂದು ನಡೆಯುವ ಸ್ವಾತಂತ್ರ್ಯ ದಿನಾಚರಣೆಯಂದು ಸೌಜನ್ಯಕ್ಕು ಮಠದ ಹೆಸ್ರು ಅಥವಾ ಮಾಧವಾನಂದ ಪ್ರಭುಜಿಗಳ ಹೆಸ್ರು ಪ್ರಸ್ತಾಪವಾಗುತ್ತಲೇ ಇರಲಿಲ್ಲ. ಆದ್ರೆ ಈ ಬಾರಿ ವಿಜಯಪುರ ಜಿಲ್ಲೆಗೆ ಆಗಮಿಸಿದ ನೂತನ ಜಿಲ್ಲಾಧಿಕಾರಿಗಳು ಸ್ವಾತಂತ್ರ್ಯಕ್ಕೆ ಹೋರಾಡಿದ ಇಂಚಗೇರಿ ಮಠಕ್ಕೆ ಹಾಗೂ ಮಾಧವಾನಂದ ಪ್ರಭುಜಿಗಳಿಗೆ ಗೌರವಿಸುವ ಕಾರ್ಯಕ್ಕೆ ಕೈ ಹಾಕಿದ್ದಾರೆ.

'ಸಿದ್ದರಾಮಯ್ಯರನ್ನು ಅಪಮಾನಿಸಲು ಮುಂದಾದರೇ ಉಗ್ರ ಹೋರಾಟ'

ಜಿಲ್ಲಾಧಿಕಾರಿಗಳ ಸ್ಪಂದನೆ, ಶ್ರೀಮಠಕ್ಕೆ ಗೌರವಿಸಲು ನಿರ್ಧಾರ: ಸ್ವಾತಂತ್ರ್ಯಕ್ಕಾಗಿ ಸಶಸ್ತ್ರವಾಗಿ ಹೋರಾಡಿದ್ದ ಮಠವನ್ನೆ ಮರೆತಿದ್ದ ಜಿಲ್ಲಾಡಳಿತ ಹಾಗೂ ಸರ್ಕಾರವನ್ನ ಎಚ್ಚರಿಸುವ ಕೆಲಸವನ್ನ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಮಾಡಿತ್ತು. ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ asianetsuvarnanews.com ವೆಬ್‌ನಲ್ಲು ಸರಣಿಯಲ್ಲಿ ವರದಿಗಳು ಪ್ರಕಟವಾಗಿದ್ದವು. ಇನ್ನು ವಿಜಯಪುರ ಜಿಲ್ಲೆಗೆ ನೂತನವಾಗಿ ನೇಮಕಗೊಂಡ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ್‌ ಈ ವಿಚಾರವನ್ನ ಗಮನಿಸಿ ತುರ್ತಾಗಿ ಕ್ರಮಕ್ಕೆ ಸೂಚನೆ ನೀಡಿದರು. ಪರಿಣಾಮ ಮೊನ್ನೆ ನಡೆದ ಸ್ವಾತಂತ್ರ್ಯೋತ್ಸವದ ದಿನ ವೇದಿಕೆ ಭಾಷಣದಲ್ಲು ಇಂಚಗೇರಿ ಮಠದ ಮಾಧವಾನಂದ ಪ್ರಭುಜಿಗಳ ಹೆಸ್ರು ಪ್ರಸ್ತಾಪವಾಗಿದೆ.

22 ರಂದು ಜಿಲ್ಲಾಡಳಿತದಿಂದ ಗೌರವ ಸಲ್ಲಿಕೆ: ಬರುವ ದಿನಾಂಕ 22 ರಂದು ವಿಜಯಪುರ ಜಿಲ್ಲಾಡಳಿತ ಇಂಚಗೇರಿ ಮಠದಲ್ಲಿ ಆಜಾದಿ ಕಾ ಅಮೃತ ಮಹೋತ್ಸವ ಹಿನ್ನೆಲೆ ಸಾಂಸ್ಕೃತಿಕ ಸೌರಭ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಮೂಲಕ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಇಂಚಗೇರಿ ಮಠ ಹಾಗೂ ಮಾಧವಾನಂದ ಪ್ರಭುಜಿಗಳಿಗೆ ಗೌರವ ಸಲ್ಲಿಸುವ ಕೆಲಸ ಮಾಡ್ತಿದೆ. ಅಂದು ಸಾಯಂಕಾಲ 4ಗಂಟೆ ಸುಮಾರಿಗೆ ನಡೆಯಲಿರುವ ಸಾಂಸ್ಕೃತಿಕ ಸೌರಭ ಕಾರ್ಯಕ್ರಮದ ಸಾನಿಧ್ಯವನ್ನ ಶ್ರೀಮಠದ ರೇವಣಸಿದ್ದೇಶ್ವ ಮಹಾರಾಜರು ವಹಿಸಿಕೊಳ್ಳಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ, ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ್‌, ನಾಗಠಾಣ ಶಾಸಕ ದೇವಾನಂದ ಚೌಹಾಣ, ಮುದ್ದೇಬಿಹಾಳ ಶಾಸಕ ಎ ಎಸ್‌ ಪಾಟೀಲ್‌ ನಡಹಳ್ಳಿ, ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್‌ ಸೇರಿದಂತೆ ಜಿಲ್ಲೆಯ ಶಾಸಕರುಗಳು, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿ ನಾಗರಾಜ್‌ ಭಾಗವಹಿಸಲಿದ್ದಾರೆ.

ಇಂಚಗೇರಿ ಗ್ರಾಮದಲ್ಲಿ ಭವ್ಯ ಮೆರವಣಿಗೆ: ಇಂಚಗೇರಿ ಮಠದಿಂದ ಗ್ರಾಮ ಪಂಚಾಯ್ತಿವರೆಗೆ ಮಾಧವಾನಂದ ಪ್ರಭುಜಿಗಳ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಲಿದೆ. ಈ ವೇಳೆ ಹಲವು ಕಲಾ ತಂಡಗಳು ಪಾಲ್ಗೊಳ್ಳಲಿವೆ. ವೇದಿಕೆ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಗೀತೆಗಳು, ಸಂಗೋಳ್ಳಿ ರಾಯಣ್ಣ ನಾಟಕ ಪ್ರದರ್ಶನವಾಗಲಿದೆ.

ಭೀಮಾತೀರದಲ್ಲಿ ಆತಂಕ ಸೃಷ್ಟಿಸಿದ ಆಯಿಲ್‌ ಗ್ಯಾಂಗ್: ಉದ್ಯಮಿ, ವ್ಯಾಪಾರಿಗಳೇ ಇವರ ಟಾರ್ಗೆಟ್!

ಭಕ್ತರಿಂದ ಜಿಲ್ಲಾಧಿಕಾರಿಗಳಿಗೆ ಧನ್ಯವಾದ: ಇಂಚಗೇರಿ ಮಠದ ಸ್ವಾತಂತ್ರ್ಯ ಹೋರಾಟವನ್ನ ಗುರುತಿಸಿ ಗೌರವ ಸಲ್ಲಿಸುತ್ತಿರುವ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ್‌ ಅವರಿಗೆ ಮಠ ಭಕ್ತರು ಧನ್ಯವಾದ ಹೇಳಿದ್ದಾರೆ. ಮಠದ ಹೋರಾಟಕ್ಕೆ ಗೌರವಿಸುತ್ತಿರುವುದನ್ನ ಸ್ವಾಗತಿಸುತ್ತಿದ್ದೇವೆ. ಪ್ರತಿ ವರ್ಷವು ಸ್ವಾತಂತ್ರ್ಯ ದಿನೋತ್ಸವದಂದು ಮಾಧವಾನಂದ ಪ್ರಭುಜಿಗಳ ಹೋರಾಟವನ್ನ ಸ್ಮರಿಸುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

click me!