India@75 ಅಮೃತ ಮಹೋತ್ಸವದ ಸಂಭ್ರಮ, ಏಷ್ಯಾನೆಟ್ -ಎನ್‌ಸಿಸಿ ಜಂಟಿಯಾಗಿ ವಜ್ರ ಜಯಂತಿ ಯಾತ್ರೆಗೆ ಚಾಲನೆ!

By Chethan KumarFirst Published Jun 14, 2022, 7:20 PM IST
Highlights
  • ಅಜಾದಿಕಾ ಅಮೃತ ಮಹೋತ್ಸವ ಸಂಭ್ರಮಕ್ಕೆ ಮತ್ತಷ್ಚು ಮೆರುಗು
  • India@75 ಸಂಭ್ರಮದಲ್ಲಿ ಏಷ್ಯಾನೆಟ್ ನ್ಯೂಸ್ ಭಾಗಿ
  • ಏಷ್ಯಾನೆಟ್-NCC ಜಂಟಿಯಾಗಿ ವಜ್ರ ಜಯಂತಿ ಯಾತ್ರೆಗೆ ಚಾಲನೆ

ಕೇರಳ(ಜೂ.14): ಅಜಾದಿ ಕಾ ಅಮೃತಮಹೋತ್ಸವ ಸಂಭ್ರಮಕ್ಕೆ ಏಷ್ಯಾನೆಟ್ ನ್ಯೂಸ್ ಮತ್ತಷ್ಟು ಮೆರೆಗು ನೀಡಿದೆ. ಏಷ್ಯಾನೆಟ್ ನ್ಯೂಸ್ ಹಾಗೂ ಎನ್‌ಎಸಿಸಿ ಕೆಡೆಟ್ ಜಂಟಿಯಾಗಿ ಇಂದು(ಜೂ.14) ವಜ್ರ ಜಯಂತಿ ಯಾತ್ರೆಗೆ ಚಾಲನೆ ನೀಡಿದೆ. ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಐತಿಹಾಸಿಕ ಯಾತ್ರೆಗೆ ಚಾಲನೆ ನೀಡಿದ್ದಾರೆ.

ಕೇರಳದಲ್ಲಿ ವಿಶೇಷ ಯಾತ್ರೆಗೆ ಚಾಲನೆ ನೀಡಲಾಗಿದೆ. ಈ ಕಾರ್ಯಕ್ರಮಕ್ಕೆ 200 ಎನ್‌ಸಿಸಿ ಕೆಡೆಟ್ ಹಾಜರಿದ್ದರು.  ಈ ವಜ್ರಜಯಂತಿ ಯಾತ್ರೆಯಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟದ ವಿವಿಧ ಮಜಲುಗಳು, ಹೋರಾಟಗಾರರು, ಭಾರತದ ಐತಿಹಾಸಿಕ ಪಾರಪಂರಿಕ ತಾಣಗಳು, ಮಿಲಿಟರಿ ಬೇಸ್, ಕೃಷಿ, ಸಾಂಸ್ಕೃತಿ, ವೈಜ್ಞಾನಿಕ ಸಂಶೋಧನಾ ಕೇಂದ್ರಗಳ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಲಾಗುತ್ತದೆ. ಈ ಮೂಲಕ ಭಾರತದ 75ನೇ ವರ್ಷದ ಸ್ವಾತಂತ್ರ್ಯ ಸಂಭ್ರಮದಲ್ಲಿ ಭಾರತೀಯರು ಈ ದೇಶದ ಕುರಿತು ಮತ್ತಷ್ಟು ಹೆಮ್ಮೆ ಪಡುವಂತೆ ಹಾಗೂ ದೇಶದ ಇತಿಹಾಸದ ಕುರಿತು ಬೆಳಕು ಚೆಲ್ಲು ಪ್ರಯತ್ನ ನಡೆಯಲಿದೆ.

"

India@75: ಬ್ರಿಟಿಷರ ವಿರುದ್ಧ ಹೋರಾಡಿದ ಹಿಂದುಳಿದ ಜಾತಿಯ ವೀರ ಮಹಿಳೆಯರು

ವಜ್ರ ಜಯಂತಿ ಯಾತ್ರೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಏಷ್ಯಾನೆಟ್ ನ್ಯೂಸ್ ಮೀಡಿಯಾ ಮತ್ತು ಎಂಟರ್ಟೈನ್ಮೆಂಟ್ ಎಕ್ಸಿಕ್ಯೂಟೀವ್ ಚೇರ್ಮೆನ್ ರಾಜೇಶ್ ಕಾರ್ಲ, ಈ ಯಾತ್ರೆಯಿಂದ ಜನರು ನೋಡುವ ಹಾಗೂ ಅನುಭವಿಸುವ ಐತಿಹಾಸಿಕ ಸ್ಥಳಗಳು, ಸಂಗ್ರಾಮದ ಮಾಹಿತಿಯನ್ನು ಗೆಳೆಯರು, ಕುಟುಂಬ ವರ್ಗದವರೊಂದಿಗೆ ಹಂಚಿಕೊಳ್ಳಲಿದ್ದಾರೆ. ಇದು ಇತರರಲ್ಲಿ ಮತ್ತಷ್ಟು ಚೈತನ್ಯ ತುಂಬಲಿದೆ ಎಂದರು. ಈ ಯಾತ್ರೆ ಭವಿಷ್ಯ ಯೋಧರನ್ನು ಹುಟ್ಟುಹಾಕಲಿದೆ ಎಂದು ರಾಜೇಶ್ ಕಾರ್ಲ ಹೇಳಿದರು.

ಈ ವಿಶೇಷ ಕಾರ್ಯಕ್ರಮದಲ್ಲಿ ಏಷ್ಯಾನೆಟ್ ನ್ಯೂಸ್ ಬ್ಯೂಸಿನೆಸ್ ಹೆಡ್ ಫ್ರಾಂಕ್ ಪಿ ಥಾಮಸ್ ಗ್ರೂಪ್ ಮ್ಯಾನೇಜಿಂಗ್ ಎಡಿಟರ್ ಮನೋಜ್ ಕೆ ದಾಸ್ ಹಾಗೂ ಸಂಪಾದಿಕೀಯ ಸಲಹೆಗಾರ ಎಂಜಿ ರಾಧಾಕೃಷ್ಣನ್ ಹಾಜರಿದ್ದರು. 75ರ ಭಾರತ ಸ್ವಾತಂತ್ರ್ಯ ಸಂಭ್ರಮದ ಈ ಕಾರ್ಯಕ್ರಮಕ್ಕೂ ಮೊದಲು 75 ಮಂದಿ ಎನ್‌ಸಿಸಿ ಕೆಡೆಟ್ ರಕ್ತದಾನ ಮಾಡಿ ಗಮನಸೆಳೆದರು.

ಏಷ್ಯಾನೆಟ್ ನ್ಯೂಸ್ ಹಾಗೂ ಎಂಟರ್ಟೈನ್ಮೆಂಟ್ 25ರ ಸಂಭ್ರಮದಲ್ಲಿದೆ. ಕಳೆದ 25 ವರ್ಷಗಳಿಂದ ಮಾಧ್ಯಮ ಜಗತ್ತಿನಲ್ಲಿ ಅನನ್ಯ ಸೇವೆ ನೀಡುತ್ತಿರುವ ಏಷ್ಯಾನೆಟ್ ಟಿವಿ, ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮದ ಮೂಲಕ ಹೊಸ ಕ್ರಾಂತಿ ಮಾಡಿದೆ. ಇದೀಗ ಭಾರತದ 75ನೇ ವರ್ಷದ ಸ್ವಾತಂತ್ರ್ಯ ಸಂಭ್ರಮದಲ್ಲಿ ಏಷ್ಯಾನೆಟ್ ವಿಶೇಷ ಕಾರ್ಯಕ್ರಮ ಆಯೋಜಿಸುವ ಮೂಲಕ ಸಂಭ್ರಮದಲ್ಲಿ ಪಾಲುದಾರನಾಗಿದೆ.

India@75: ಜಗದೀಶ್‌ ಚಂದ್ರ ಬೋಸ್‌: ಬ್ರಿಟಿಷರ ಮುಂದೆ ಭಾರತ ತಲೆಯೆತ್ತಿ ನಿಲ್ಲುವಂತೆ ಮಾಡಿದ ವಿಜ್ಞಾನಿ

ಎನ್‌ಸಿಸಿ ಕೆಡೆಟ್ ಈಗಾಗಲೇ 75ರ ಸ್ವಾತಂತ್ರ್ಯ ಸಂಭ್ರಮದಲ್ಲಿ ಹಲವು ಯಾತ್ರೆಗಳನ್ನು ಆಯೋಜಿಸಿದೆ. ಈ ಕಾರ್ಯಕ್ರಮದ ಮೂಲಕ ಎನ್‌ಸಿಸಿ ಕೆಡೆಟ್ ದೇಶದ ಐತಿಹಾಸಿಕ ಹಾಗೂ ಪಾರಂಪರಿಕ ತಾಣಗಳಿಗೆ ಭೇಟಿ ನೀಡಲಿದೆ. ಇದರಿಂದ ದೇಶದ ಐತಿಹಾಸಿಕ, ಪಾರಂಪರಿಕ ಹಾಗೂ ಸಾಂಸ್ಕೃತಿಕ ಕೇಂದ್ರಗಳ, ಭಾರತದ ಇತಿಹಾಸದ ಮಾಹಿತಿ ತಿಳಿಯಲಿದೆ. ಇದು ಭಾರತೀಯನನ್ನು ಮತ್ತಷ್ಟು ಹೆಮ್ಮೆ ಪಡುವಂತೆ ಮಾಡಲಿದೆ ಎಂದು ನ್ಯಾಷಲ್ ಕೆಡೆಟ್ ಕಾರ್ಪ್ಸ್ ಹೇಳಿದೆ.

ವಜ್ರ ಜಯಂತಿ ಯಾತ್ರೆಗೆ ಚಾಲನೆ ನೀಡಿದ ರಾಜ್ಯಪಾಲ ಆರಿಫ್ ಮೊಹಮ್ಮದ್ ತಮ್ಮ ನೇರ ನುಡಿಗಳಿಂದಲೆ ಹೆಚ್ಚು ಸುದ್ದಿಯಾಗಿದ್ದಾರೆ. ಭಾರತೀಯತೆ, ದೇಶದ ವಿಚಾರದಲ್ಲಿ ಆರಿಫ್ ಮೊಹಮ್ಮದ್ ಖಡಕ್ ನಿಲುವು ಹೊಂದಿದ್ದಾರೆ. ದೇಶದ ಅಖಂಡತೆ, ಸೌರ್ವಭೌಮತೆ ಹಾಗೂ ಇತಿಹಾಸಗಳ ಅಗಾಧ ಜ್ಞಾನ ಹೊಂದಿರು ಆರಿಫ್ ಮೊಹಮ್ಮದ್, ಏಷ್ಯಾನೆಟ್ ನ್ಯೂಸ್ ಧ್ಯೇಯೋದ್ದೇಶವಾಗಿರುವ ನೇರ, ದಿಟ್ಟ, ನಿರಂತರ ತತ್ವದಡಿಯಲ್ಲಿ ಕಾರ್ಯನಿರ್ವಹಿಸುವ ವ್ಯಕ್ತಿತ್ವ ಹೊಂದಿದ್ದಾರೆ.

click me!