108 ಗಂಟೆಯಲ್ಲಿ 75 ಕಿ.ಮೀ. ರಸ್ತೆ ನಿರ್ಮಾಣದ ಗುರಿ: ಗಿನ್ನೆಸ್‌ ದಾಖಲೆಗೆ ಭರ್ಜರಿ ಸಜ್ಜು

By Anusha Kb  |  First Published Jun 4, 2022, 3:24 PM IST

ಕೇವಲ 108 ಗಂಟೆಗಳಲ್ಲಿ 75 ಕಿ.ಮೀ ಉದ್ದದ ಹೆದ್ದಾರಿ ನಿರ್ಮಾಣ ಗುರಿಯನ್ನು ಸಾಧಿಸಿ ಗಿನ್ನೆಸ್ ಪುಟ ಸೇರಲು ಮುಂದಾಗಿರುವ ಕೇಂದ್ರ ಲೋಕಪಯೋಗಿ ಇಲಾಖೆ ಇದಕ್ಕಾಗಿ ಭರದ ಕಾಮಗಾರಿಯಲ್ಲಿ ತೊಡಗಿದೆ. 


ಅಮರಾವತಿ: ಕೇವಲ 108 ಗಂಟೆಗಳಲ್ಲಿ 75 ಕಿ.ಮೀ ಉದ್ದದ ಹೆದ್ದಾರಿ ನಿರ್ಮಾಣ ಗುರಿಯನ್ನು ಸಾಧಿಸಿ ಗಿನ್ನೆಸ್ ಪುಟ ಸೇರಲು ಮುಂದಾಗಿರುವ ಕೇಂದ್ರ ಲೋಕಪಯೋಗಿ ಇಲಾಖೆ ಇದಕ್ಕಾಗಿ ಭರದ ಕಾಮಗಾರಿಯಲ್ಲಿ ತೊಡಗಿದೆ. ಅಮರಾವತಿಯಿಂದ ಮಹಾರಾಷ್ಟ್ರದಲ್ಲಿರುವ ಅಕೋಲಾದವರೆಗೆ ಒಟ್ಟು  75 ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದ್ದು, ಜೂನ್‌ 3 ರಂದು ಈ ರಸ್ತೆ ನಿರ್ಮಾಣ ಯೋಜನೆಗೆ ಚಾಲನೆ ನೀಡಲಾಗಿದೆ. ಜೂನ್‌ 7ರಂದು ಈ ಕಾಮಗಾರಿ ಪೂರ್ಣಗೊಳ್ಳುವ ಗುರಿ ಹೊಂದಲಾಗಿದ್ದು, ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. 

ಅಮರಾವತಿಯ ಲೋಣಿ ಗ್ರಾಮದಿಂದ (Loni village) ಅಕೋಲಾದ ಮನ (Mana village of Akola) ಗ್ರಾಮದವರೆಗಿನ ಹೆದ್ದಾರಿಯನ್ನು ರಾತ್ರಿ ಹಗಲೆಂಬ ಬಿಡುವಿಲ್ಲದೇ ನಿರ್ಮಿಸಲಾಗುತ್ತಿದ್ದು, 108 ಗಂಟೆಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಈ ಪ್ರಯೋಗ ಯಶಸ್ವಿಯಾದರೆ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ಗೆ ಸೇರ್ಪಡೆಯಾಗಲಿದೆ.

Tap to resize

Latest Videos

undefined

ಸ್ಥಳದಲ್ಲಿ ಗಿನ್ನಿಸ್ ಸಂಸ್ಥೆಯ ತಂಡವೊಂದು ಹಾಜರಿದ್ದು, ರಸ್ತೆ ನಿರ್ಮಾಣ ಕಾಮಗಾರಿಯನ್ನು ದಾಖಲಿಸಿಕೊಳ್ಳುತ್ತಿದೆ. ಆಧುನಿಕ ತಂತ್ರಜ್ಞಾನ ಮತ್ತು ಬಿಟುಮಿನಸ್ ಕಾಂಕ್ರೀಟ್ ಹೊಂದಿರುವ ಯಂತ್ರಗಳನ್ನು ನಿರ್ಮಾಣಕ್ಕೆ ಬಳಸಲಾಗುತ್ತಿದೆ. ಸುಮಾರು 800 ರಿಂದ 1,000 ಕಾರ್ಮಿಕರು ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಯಾವುದೇ ಬಿಕ್ಕಟ್ಟಿನ ನಡುವೆಯೂ ರಾಜ್ ಪಥ್ ಇನ್ಫ್ರಾಕಾನ್ ಸಂಸ್ಥೆಯೂ ಕಾಮಗಾರಿ ಪೂರ್ಣಗೊಳಿಸಲು ತೀರ್ಮಾನಿಸಿದೆ.

ಲೋಕೋಪಯೋಗಿ ಪ್ರಾಧಿಕಾರ ಅಶ್ಗುಲ್ (Ashgul) ಈ ಹಿಂದೆ ಕತಾರ್‌ನ (Qatar) ದೋಹಾದಲ್ಲಿ (Doha) ಇದೇ ರೀತಿಯ ದಾಖಲೆ ನಿರ್ಮಿಸಿತ್ತು. ಸುಮಾರು 242 ಗಂಟೆಗಳಲ್ಲಿ ಅಂದರೆ 10 ದಿನಗಳಲ್ಲಿ 25 ಕಿಮೀ ಉದ್ದದ ರಸ್ತೆ ನಿರ್ಮಿಸಿ ದಾಖಲೆ ನಿರ್ಮಿಸಿತ್ತು. ಆ ದಾಖಲೆಯನ್ನು ಮುರಿಯಲು ಈಗ ರಾಜ್ ಪಥ್ ಇನ್ಫ್ರಾಕಾನ್ (Rajpath Infracon) ಸಜ್ಜಾಗುತ್ತಿದೆ. 
ರಾಜ್‌ಪಥ್ ಇನ್‌ಫ್ರಾಕಾನ್ ಪ್ರೈವೇಟ್ ಲಿಮಿಟೆಡ್ ಪುಣೆಯಲ್ಲಿ ಮೂಲಸೌಕರ್ಯ ನಿರ್ಮಾಣ ಕ್ಷೇತ್ರದಲ್ಲಿ ಉತ್ತಮ ಹೆಸರು ಮಾಡಿದ್ದು, ಸಂಸ್ಥೆಯು ಇದೀಗ ಐತಿಹಾಸಿಕ ದಾಖಲೆ ನಿರ್ಮಿಸಲು ಸಜ್ಜಾಗಿದೆ.

ನಿರ್ಮಾಣ ಕಂಪನಿಯು ಗುಣಮಟ್ಟ ನಿಯಂತ್ರಣ ಎಂಜಿನಿಯರ್‌ಗಳು ಮತ್ತು ಸುರಕ್ಷತಾ ಅಧಿಕಾರಿಗಳ ಸುಸಜ್ಜಿತ ತಂಡವನ್ನು ಹೊಂದಿದೆ. ಅವರು ಗುಣಮಟ್ಟ ನಿಯಂತ್ರಣಕ್ಕಾಗಿ ನಿರಂತರವಾಗಿ ಕೆಲಸ ಮಾಡುತ್ತಾರೆ. ಗುಣಮಟ್ಟ ನಿಯಂತ್ರಣಕ್ಕಾಗಿ ಸುಸಜ್ಜಿತ ಪ್ರಯೋಗಾಲಯವನ್ನೂ ಸ್ಥಾಪಿಸಲಾಗಿದೆ. ಈ ಪ್ರಯೋಗಾಲಯದ ಮೂಲಕ ಬಳಸಿದ ವಸ್ತುಗಳು ಮತ್ತು ನಡೆಯುತ್ತಿರುವ ಕೆಲಸವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವ ಮೂಲಕ ಗುಣಮಟ್ಟವನ್ನು ಕಾಯ್ದುಕೊಳ್ಳಲಾಗುತ್ತದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ನಿಗದಿಪಡಿಸಿದ ಮಾನದಂಡಗಳ ಪ್ರಕಾರ ಕೆಲಸ ಮಾಡಲಾಗುತ್ತದೆ ಎಂದು ಖಚಿತಪಡಿಸಿಕೊಳ್ಳುವುದು ಇದರ ಉದ್ದೇಶವಾಗಿದೆ.

ಅಭೂತಪೂರ್ವ ತಯಾರಿ
ವಿಶ್ವ ದಾಖಲೆ ನಿರ್ಮಿಸಲು ತಂಡವು ಕರಾರುವಾಕ್ಕಾದ ಯೋಜನೆ ರೂಪಿಸಿದೆ. ಪ್ರತಿ ಭಾಗಕ್ಕೂ ಪ್ರತ್ಯೇಕ ಸ್ಕ್ವಾಡ್‌ಗಳನ್ನು ರಚಿಸಲಾಗಿದೆ.  ಪ್ರಾಜೆಕ್ಟ್ ಮ್ಯಾನೇಜರ್‌ಗಳು (project managers), ಹೆದ್ದಾರಿ ಎಂಜಿನಿಯರ್‌ಗಳು (highway engineers) , ಗುಣಮಟ್ಟದ ಎಂಜಿನಿಯರ್‌ಗಳು, ಸರ್ವೇಯರ್‌ಗಳು, ಸುರಕ್ಷತಾ ಎಂಜಿನಿಯರ್‌ಗಳು ಮತ್ತು ಇತರ ಉದ್ಯೋಗಿಗಳ ತಂಡವನ್ನು ಹೊಂದಿದ್ದಾರೆ. ಹೆದ್ದಾರಿಯ ಮಾನ ಕ್ಯಾಂಪ್‌ನಲ್ಲಿ ಮ್ಯಾನೇಜ್‌ಮೆಂಟ್ ಥಿಂಕ್ ಟ್ಯಾಂಕ್ ಮತ್ತು ವಾರ್ ರೂಮ್ ನಿರ್ಮಿಸಲಾಗಿದೆ.

ತಂಡವು 728 ಜನರನ್ನು ಒಳಗೊಂಡಿದೆ ಮತ್ತು ನಾಲ್ಕು ಹಾಟ್ ಮಿಕ್ಸ್ ಪ್ಲಾಂಟ್‌ಗಳು, ನಾಲ್ಕು ಚಕ್ರದ ಲೋಡರ್‌ಗಳು (four-wheel loaders) , ಒಂದು ಪೇವರ್, ಒಂದು ಮೊಬೈಲ್ ಫೀಡರ್ (mobile feeder), ಆರು ಟಂಡೆಮ್ ರೋಲರ್‌ಗಳು, ಎರಡು ನ್ಯೂಮ್ಯಾಟಿಕ್ ಟೈರ್ ರೋಲರ್‌ಗಳು ಮತ್ತು ಇತರ ಯಂತ್ರೋಪಕರಣಗಳನ್ನು ಹೊಂದಿದೆ. ಯಂತ್ರೋಪಕರಣಗಳನ್ನು ದೋಷಗಳಿಂದ ಮುಕ್ತಗೊಳಿಸಲು, ಟಾಟಾ ಮೋಟಾರ್ಸ್‌ನ ಐವರು ಎಂಜಿನಿಯರ್‌ಗಳು ಮತ್ತು ಐವರು ಇತರ ಕಾರ್ಯನಿರ್ವಾಹಕರನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ತಂಡವು ಉಪಕರಣಗಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ.

ಆಜಾದಿ ಕಾ ಅಮೃತ್ ಮಹೋತ್ಸವದ (Azadi ka Amrit Mahotsav) ಸಂದರ್ಭದಲ್ಲಿ ರಾಜಪಥ ಇನ್ಫ್ರಾಕಾನ್ ಹೆದ್ದಾರಿಯನ್ನು ರಾಷ್ಟ್ರಕ್ಕೆ ಅರ್ಪಿಸಲು ನಿರ್ಧರಿಸಿದೆ. 
 

click me!