ಕುಮಾರಸ್ವಾಮಿ ನನ್ನ ಬಗ್ಗೆ ಮಾತನಾಡುವ ಹಕ್ಕಿಲ್ಲ ಎಂದ ಕಾಂಗ್ರೆಸ್ ಅನರ್ಹ ಶಾಸಕ ಬಿ.ಸಿ. ಪಾಟೀಲ್| ನಾನು ನೈತಿಕತೆ ಕಳೆದುಕೊಂಡಿಲ್ಲ| ನನ್ನನ್ನು ಸಮ್ಮಿಶ್ರ ಸರ್ಕಾರಕ್ಕೆ ಕರೆದವರು ಕುಮಾರಸ್ವಾಮಿ|
ಹಾವೇರಿ[ನ.7]: ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರಿಗೆ ನನ್ನ ಬಗ್ಗೆ ಮಾತನಾಡುವ ಹಕ್ಕಿಲ್ಲ. ನಾನು ನೈತಿಕತೆ ಕಳೆದುಕೊಂಡಿಲ್ಲ ಎಂದ ಕಾಂಗ್ರೆಸ್ ಅನರ್ಹ ಶಾಸಕ ಬಿ.ಸಿ. ಪಾಟೀಲ್ ಅವರು ಹೇಳಿದ್ದಾರೆ.
ಗುರುವಾರ ನಗರದಲ್ಲಿ ಮಾತನಾಡಿದ ಅವರು, ನೈತಿಕತೆ ಕಳಕೊಂಡಿದ್ದೇನೆ ಅಂದ್ರೆ, ಅನೈತಿಕತೆ ಕೆಲಸ ಮಾಡಿದ್ದೇವಾ ಹಾಗಾದ್ರೆ ಎಂದು ಪ್ರಶ್ನಿಸಿದ್ದಾರೆ. ಕುಮಾರಸ್ವಾಮಿ ಪಿಎ ಕಾಲ್ ಮಾಡಿದ್ದು ನನಗೇನೆ. ನೋಡಿ ಮೊದಲು ಅವರೀಗೇನೆ ನೈತಿಕತೆ ಇಲ್ಲಾ. ಇನ್ನು ನನ್ನ ನೈತಿಕತೆ ಬಗ್ಗೆ ಮಾತಾಡುವ ಹಕ್ಕು ಅವರಿಗಿಲ್ಲ, ಅವರಿಗೆ ನೈತಿಕತೆ ಇಲ್ಲ ಎಂದು ಕುಮಾರಸ್ವಾಮಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ನನ್ನನ್ನು ಸಮ್ಮಿಶ್ರ ಸರ್ಕಾರಕ್ಕೆ ಕರೆದವರು ಕುಮಾರಸ್ವಾಮಿ ಅವರೇ, ನನ್ನ ಬಳಿ ಫೋನ್ ರೆಕಾರ್ಡ್ಸ್ ಇವೆ. ಕಳೆದ ವರ್ಷ ಜುಲೈ 13 ರಂದು ನನಗೆ ಅವರ ಪಿಎ ಕಾಲ್ ಮಾಡಿದ್ದರು. ಇದರ ಬಗ್ಗೆ ನನ್ನ ಬಳಿ ಎಲ್ಲದಾಕಲೆಗಳು ಇವೆ ಎಂದು ತಿಳಿಸಿದ್ದಾರೆ.