ಹಾಸನ (ಏ.22): ಹಾಸನ (Hassan) ಜಿಲ್ಲೆಯ ಆಲೂರು, ಸಕಲೇಶಪುರ, ಬೇಲೂರು ಕಾಡಾನೆಗಳು ನಿರಂತರ ದಾಳಿ ನಡೆಸಿ ಬೆಳೆ ,ಆಸ್ತಿಪಾಸ್ತಿ ಹಾನಿಗೊಳಿಸುತ್ತಿವೆ. ತೋಟದಲ್ಲಿ ಬೆಳೆ ಹಾನಿ ಮಾಡುತ್ತಿದ್ದ ಕಾಡಾನೆಗಳು ಈಗ ಊರೊಳಗೂ ದಾಂಧಲೆ ನಡೆಸುತ್ತಿವೆ. ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಅನುಘಟ್ಟ ಗ್ರಾಮದೊಳಗೆ ಬಂದ ಕಾಡಾನೆ ಪ್ರಾಥಮಿಕ ಕೃಷಿ ಪತ್ತಿನ ಸಂಘದ ಕಟ್ಟಡದಲ್ಲಿದ್ದ ಅಕ್ಕಿಯನ್ನು ಕಾಡಾನೆ ತಿಂದಿದೆ.
ಬಾಗಿಲು ಮುರಿದು ಅಕ್ಕಿಚೀಲಗಳ ಎಳೆದಾಡಿ ಅಕ್ಕಿ ಮುಕ್ಕಿದೆ. ಅನ್ನಭಾಗ್ಯ ಅಕ್ಕಿಯನ್ನು (anna bhagya rice ) ಕಾಡಾನೆ ತಿನ್ನುತ್ತಿರುವ ದೃಶ್ಯ ಸಿಸಿ ಟಿವಿ ಯಲ್ಲಿ ಸೆರೆಯಾಗಿದೆ. ಇಂದು ಮುಂಜಾನೆ 12:30 ರ ವೇಳೆಯಲ್ಲಿ ಸಂಘದ ಕಟ್ಟಡದೊಳಗೆ ಬಂದ ಕಾಡನೆ ಅಕ್ಕಿ ಚೀಲಗಳ ಇಟ್ಟಿದ್ದ ಕೊಠಡಿಯ ಬಾಗಿಲು ಮುರಿದು ಅಲ್ಲಿದ್ದ ಅಕ್ಕಿ ತಿಂದಿದೆ.
Uttara Kannada 108 ಆ್ಯಂಬುಲೆನ್ಸ್‌ನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ
ಅನುಘಟ್ಟ ಗ್ರಾಮದಲ್ಲಿ ಕಾಡಾನೆ ದಾಂಧಲೆ ನಡೆಸಿರುವ ವಿಡಿಯೋ ಜನರನ್ನು ಶಾಕ್ ಗೆ ಒಳಗಾಗಿಸಿದೆ. ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡಕ್ಕೆ ಲಗ್ಗೆಯಿಟ್ಟ ಒಂಟಿ ಸಲಗ ಜನರಿಗೆ ವಿತರಿಸಲು ಇಟ್ಟಿದ್ದ ಪಡಿತರ ಅನ್ನಭಾಗ್ಯ ತಿಂದಿದೆ. ಬೇಲೂರು ತಾಲೂಕಿನ ಕಡೆಗರ್ಜೆಯಲ್ಲಿ ಕಳೆದ ತಿಂಗಳು ಇಬ್ಬರು ಕೂಲಿ ಕಾರ್ಮಿಕರನ್ನು ಬಲಿ ಪಡೆದ ಆನೆಯೇ ಕಳೆದ ರಾತ್ರಿ ಅನುಘಟ್ಟ ಪ್ರಾಥಾಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪಡಿತರವಿದ್ದ ಕೊಠಡಿ ಬಾಗಿಲು ಮುರಿದು ಅಕ್ಕಿ ತಿಂದಿದೆ ಎನ್ನಲಾಗುತ್ತಿದೆ.
ಘಟನಾ ಸ್ಥಳಕ್ಕೆ ಅರೇಹಳ್ಳಿ ಪಿಎಸ್ಐ ಸುರೇಶ್, ವಲಯ ಅರಣ್ಯಾಧಿಕಾರಿ ಯಶ್ಮಾ ಮಾಚಮ್ಮ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡದಲ್ಲಿ ಅಕ್ಕಿ ತಿಂದ ಕಾಡಾನೆ ಅನುಘಟ್ಟ ಸಮೀಪದ ದೊಡ್ಡ ಸಾಲಾವರದ ಕೃಷ್ಣೇಗೌಡರ ಕಾಫಿ ತೋಟದಲ್ಲಿ ನಿಂತಿದ್ದು, ಸುತ್ತ ಮುತ್ತಲ ಜನರು ಆತಂಕಗೊಂಡಿದ್ದಾರೆ. ಪುಂಡಾನೆ ಸೆರೆಗೆ ಒತ್ತಾಯಿಸಿದ್ದಾರೆ.
2022-23ನೇ ಸಾಲಿನ ಶೈಕ್ಷಣಿಕ ವರ್ಷದ ವೇಳಾಪಟ್ಟಿ ಬಿಡುಗಡೆ
ಕಾರು ಹತ್ತಿಸಿ ಬೀದಿ ನಾಯಿಯ ಕೊಂದ: ರಾಜಧಾನಿಯಲ್ಲಿ (Bengaluru) ಮತ್ತೊಂದು ಅಮಾನವೀಯ ಘಟನೆ ನಡೆದಿದೆ. ದುರುಳನೊಬ್ಬ ರಸ್ತೆಯಲ್ಲಿ ಹೋಗುತ್ತಿದ್ದ ಬೀದಿ ನಾಯಿ (Street Dog) ಮೇಲೆ ಏಕಾಏಕಿ ಕಾರು ಹತ್ತಿಸಿ ಸಾಯಿಸಿ ವಿಕೃತಿ ಮೆರೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಸರ್ ಎಂ.ವಿಶ್ವೇಶ್ವರಯ್ಯ ಲೇಔಟ್ 1ನೇ ಬ್ಲಾಕ್‌ನ ನಾಗದೇವಹಳ್ಳಿಯಲ್ಲಿ ಏ.19ರಂದು ಬೆಳಗ್ಗೆ 8.50ರ ಸುಮಾರಿಗೆ ಈ ದುರ್ಘಟನೆ ನಡೆದಿದೆ. ವಿಕೃತ ಮನಸ್ಥಿಯ ವ್ಯಕ್ತಿ ನಾಯಿ ಮೇಲೆ ಕಾರು ಹತ್ತಿಸಿಕೊಂಡು ಹೋಗುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ (CCTV Camera) ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ (Viral) ಆಗಿದೆ. ಈ ಸಂಬಂಧ ಕೆಂಗೇರಿ ನಿವಾಸಿ ರಾಮಚಂದ್ರ ಭಟ್ಟಎಂಬುವವರು ಜ್ಞಾನಭಾರತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಪಘಾತ ಎಸಗಿರುವ ಕಾರು ಸತ್ಯನಾರಾಯಣ ಎಂಬುವವರ ಹೆಸರಿನಲ್ಲಿರುವುದು ಗೊತ್ತಾಗಿದೆ. ಇದರ ಆಧಾರದ ಮೇಲೆ ಪೊಲೀಸರು ಕಾರು ಚಾಲಕನನ್ನು ಬಂಧಿಸಲು ಬಲೆ ಬೀಸಿದ್ದಾರೆ.
ರಸ್ತೆಯಲ್ಲಿ ನಾಯಿ ತನ್ನಪಾಡಿಗೆ ತಾನು ಹೋಗುತ್ತಿದ್ದಾಗ ಹಿಂದಿನಿಂದ ಬಂದಿರುವ ಬಿಳಿ ಬಣ್ಣದ ಕಾರು ನಾಯಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ರಸ್ತೆಗೆ ಬಿದ್ದ ನಾಯಿಯ ಮೇಲೆ ಕಾರಿನ ಮುಂದಿನ ಬಲಚಕ್ರ ಹಾಗೂ ಹಿಂಬದಿಯ ಬಲಚಕ್ರ ಉರುಳಿದೆ. ಕಾರು ಚಾಲಕ ಕಾರನ್ನು ನಿಲ್ಲಿಸಿದೆ ಪರಾರಿಯಾಗಿದ್ದಾನೆ. ಈ ವೇಳೆ ತೀವ್ರ ಗಾಯಗೊಂಡಿದ್ದ ನಾಯಿ ಒದ್ದಾಡಿಕೊಂಡು ರಸ್ತೆ ಪಕ್ಕಕ್ಕೆ ಬಂದಿದ್ದು, ಬಳಿಕ ನರಳಾಡಿ ಕೆಲವೇ ನಿಮಿಷಗಳಲ್ಲಿ ಪ್ರಾಣ ಬಿಟ್ಟಿದೆ. ಈ ವೇಳೆ ಸ್ಥಳೀಯರು ನಾಯಿಗೆ ಬಾಯಿಗೆ ನೀರು ಬಿಟ್ಟಿದ್ದಾರೆ. ಇಡೀ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಘಟನೆ ಸಂಬಂಧ ದೂರು ನೀಡಿರುವ ರಾಮಚಂದ್ರ ಭಟ್ಟ, ನಾನು ವೃತ್ತಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದು, ಕೆಲ ವರ್ಷಗಳಿಂದ ಮನೆಯ ಸುತ್ತಮುತ್ತ ಇರುವ ಬೀದಿ ನಾಯಿಗಳನ್ನು ನೋಡಿಕೊಳ್ಳುತ್ತಿದ್ದೇನೆ. ಏ.19ರಂದು ಬಿಳಿ ಬಣ್ಣದ ಕಾರಿನ ಚಾಲಕ ಉದ್ದೇಶ ಪೂರ್ವಕವಾಗಿ ಬೀದಿ ನಾಯಿ ಮೇಲೆ ಕಾರು ಹತ್ತಿಸಿ ಸಾಯಿಸಿದ್ದಾನೆ. ಹೀಗಾಗಿ ನಾಯಿಯನ್ನು ಕೊಲೆ ಮಾಡಿದ ಕಾರು ಚಾಲಕನನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಕೋರಿದ್ದಾರೆ. ಇತ್ತೀಚೆಗೆ ದಿವಂಗತ ಉದ್ಯಮಿ ಆದಿಕೇಶವಲು ಮೊಮ್ಮಗ ಆದಿ ಎಂಬಾತ ಜಯನಗರ ರಸ್ತೆ ಬದಿ ಮಲಗಿದ್ದ ನಾಯಿ ಮೇಲೆ ಐಷಾರಾಮಿ ಹತ್ತಿಸಿ ಸಾಯಿಸಿದ್ದ ಘಟನೆಯನ್ನು ಇಲ್ಲಿ ಸ್ಮರಿಸಬಹುದಾಗಿದೆ.