ಆಲೂರಿನ ಯಗಚಿ ಡ್ಯಾಂನಲ್ಲಿ ಈಜಲು ಹೋದ ಮೂವರು ನೀರು ಪಾಲು

By Web DeskFirst Published Oct 9, 2019, 2:37 PM IST
Highlights

ಯಗಚಿ ನದಿಯ ಚೆಕ್‌ಡ್ಯಾಂನಿಂದ ಈಜಲೆಂದು ನೀರಿಗೆ ಜಿಗಿದ ಮೂವರು ಯುವಕರ ಸಾವು| ಐವರಲ್ಲಿ ಇಬ್ಬರು ಪ್ರಾಣಾಪಾಯದಿಂದ ಪಾರು| ಅಗ್ನಿಶಾಮಕ ದಳದ ಸಿಬ್ಬಂದಿ ನೀರಿನಲ್ಲಿ ಕೊಚ್ಚಿ ಹೋಗಿರುವವರನ್ನು ಹುಡುಕುವ ಕಾರ್ಯದಲ್ಲಿ ತೊಡಗಿದ್ದಾರೆ| 

ಆಲೂರು(ಅ.9): ಯಗಚಿ ನದಿಯ ಚೆಕ್‌ಡ್ಯಾಂನಿಂದ ಈಜಲೆಂದು ನೀರಿಗೆ ಜಿಗಿದ ಐವರು ಯುವಕರ ಪೈಕಿ ಮೂವರು ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ಹಾಸನ ಜಿಲ್ಲೆಯ ಆಲೂರಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ. ಕಸಬಾ ಹುಣಸವಳ್ಳಿ ಗ್ರಾಮದ ರತನ್‌ (19), ಮತ್ತು ದೊಡ್ಡಕಣಗಾಲು ಗ್ರಾಮದ ಮನು (18), ಭೀಮರಾಜ್‌ (19) ಎಂಬ ಯುವಕರು ನಾಪತ್ತೆಯಾಗಿದ್ದು ಅಗ್ನಿಶಾಮಕ ದಳದ ಸಿಬ್ಬಂದಿ ನೀರಿನಲ್ಲಿ ಕೊಚ್ಚಿ ಹೋಗಿರುವವರನ್ನು ಹುಡುಕುವ ಕಾರ್ಯದಲ್ಲಿ ತೊಡಗಿದ್ದಾರೆ. ಧನುಷ್‌ ಮತ್ತು ಪ್ರಜ್ವಲ್‌ ಅಪಾಯದಿಂದ ಪಾರಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಆಲೂರು ಪಟ್ಟಣಕ್ಕೆ ಕುಡಿಯುವ ನೀರು ಶೇಖರಣೆ ಮಾಡಲು ಯಗಚಿ ನದಿಯಲ್ಲಿ ಚೆಕ್‌ಡ್ಯಾಂ ನಿರ್ಮಾಣ ಮಾಡಲಾಗಿದೆ. ಈ ಡ್ಯಾಂ ಏರಿ ಈಜುವ ಸಲುವಾಗಿ ಮೇಲಿಂದ ಜಿಗಿದ ಐವರು ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾರೆ. ಈ  ಮೂವರೂ ಯುವಕರು ಈಜು ತರಬೇತಿ ಹೊಂದಿದವರಾಗಿದ್ದರು ಎಂದು ತಿಳಿದು ಬಂದಿದೆ. ಉಳಿದ ಇಬ್ಬರು ಯುವಕರು ಆಸರೆಗಾಗಿ ನೀರಿನಲ್ಲಿದ್ದ ಗಿಡಗಳನ್ನು ಹಿಡಿದು ರಕ್ಷಣೆಗೆ ಕೂಗುತ್ತಿದ್ದಾಗ ಗಮನಿಸಿದ ಸ್ಥಳೀಯರು ತಕ್ಷಣ ಅವರನ್ನು ರಕ್ಷಣೆ ಮಾಡಿದ್ದಾರೆ. 
 

click me!