ಹಣ ದುರುಪಯೋಗ ಆರೋಪ, ನೊಂದ ಹಾಸನದ ಯುವಕ ಆತ್ಮಹತ್ಯೆ

Published : Apr 23, 2019, 07:48 PM IST
ಹಣ ದುರುಪಯೋಗ ಆರೋಪ, ನೊಂದ ಹಾಸನದ ಯುವಕ ಆತ್ಮಹತ್ಯೆ

ಸಾರಾಂಶ

ತನ್ನ ಮೇಲೆ ಆರೋಪ ಕೇಳಿ ಬಂದಿದ್ದಕ್ಕೆ ಯುವಕನೊಬ್ಬ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಹಾಸನ(ಏ. 23)   ಆರೋಪ‌  ಬಂದ ಕಾರಣಕ್ಕೆ  ಯುವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಹಾಸನ‌ ನಗರದ ವಿಶಾಲ್ ಮಾರ್ಟ್ ಅಂಗಡಿ ಸಿಬ್ಬಂದಿ ವಿರುದ್ದ ಬ್ರಹ್ಮದೇವರಹಳ್ಳಿಯ ಪ್ರಮೋದ್(19) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಾರ್ಟ್ ನ ವ್ಯಾಪಾರದ  60 ಸಾವಿರ ಹಣ ದುರುಪಯೋಗ ಮಾಡಿಕೊಂಡಿದ್ದು ಎಂಬ ಆರೋಪ ಕೇಳಿ ಬಂದಿತ್ತು. ಆರೋಪದಿಂದ‌ ಮನನೊಂದು ಎರಡು ದಿನದ ಹಿಂದೆ ಪ್ರಮೋದ್ ವಿಷ ಸೇವಿಸಿದ್ದರು.

ಚಿಕಿತ್ಸೆ ಫಲಕಾರಿಯಾಗದೆ  ರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದು ಸಾವಿಗೂ ಮುನ್ನ ಕಿರಣ್ , ಜುನೈದ್, ಆದಿಲ್  ಮಾನಸಿಕ‌ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದು ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಪ್ರಮೋದ್ ಕುಟುಂಬಸ್ಥರು ಆಗ್ರಹಿಸಿದ್ದಾರೆ. ಹಾಸನದ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
click me!

Recommended Stories

ಎಚ್‌ಡಿ ಕುಮಾರಸ್ವಾಮಿ, ನಿರ್ಮಲಾ ಸೀತಾರಾಮನ್‌ ವಿರುದ್ಧ ಗುಡುಗಿದ ಸಿಎಂ ಸಿದ್ದರಾಮಯ್ಯ
ನಾನು ಹತ್ತು ಲಕ್ಷದ ವಾಚಾದ್ರೂ ಕಟ್ಟುತ್ತೇನೆ, ಅದು ನನ್ನ ಆಸ್ತಿ: ಬಿಜೆಪಿಗೆ ತಿರುಗೇಟು ಕೊಟ್ಟ ಡಿಕೆಶಿ