ಪ್ರಯಾಣಿಕರ ಗಮನಕ್ಕೆ: ಹಾಸನ-ಬೆಂಗಳೂರಿನ ಈ ಬಸ್ ಕೆಟ್ಟು ನಿಂತಿದೆ

Published : Oct 15, 2019, 11:32 AM ISTUpdated : Oct 15, 2019, 11:36 AM IST
ಪ್ರಯಾಣಿಕರ ಗಮನಕ್ಕೆ: ಹಾಸನ-ಬೆಂಗಳೂರಿನ ಈ ಬಸ್ ಕೆಟ್ಟು ನಿಂತಿದೆ

ಸಾರಾಂಶ

ಮಧ್ಯರಾತ್ರಿಯಿಂದಲೂ ಬಸ್ ಕೆಟ್ಟು ನಿಂತಿದ್ದು, ಪ್ರಯಾಣಿಕರು ಪರದಾಡುವ ಸ್ಥಿತಿ ಹಾಸನದ ರಾಷ್ಟ್ರೀಯ ಹೆದ್ದಾರಿ ಬಳಿ ನಡೆದಿದೆ. 

ಹಾಸನ [ಅ.15]: ಟಯರ್ ಪಂಕ್ಚರ್ ಆಗಿ ಮಧ್ಯರಾತ್ರಿಯಿಂದಲೂ ಖಾಸಗಿ ಬಸ್ ಕೆಟ್ಟು ನಿಂತಿದ್ದು ಪ್ರಯಾಣಿಕರು ಪರದಾಡುವಂತಾಗಿದೆ. 

ಹಾಸನ ಜಿಲ್ಲೆ ಸಕಲೇಶಪುರ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್ ನಿಂತಿದ್ದು, ಬಸ್ಸಿನಲ್ಲಿದ್ದ 30 ಪ್ರಯಾಣಿಕರು ಪರದಾಟ ಕೇಳುವರಿಲ್ಲದಂತಾಗಿದೆ.

ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ದೋಣಿಗಲ್ ಸಮೀಪ ಬಸ್ ಭಾರತಿ ಬಸ್ ಟಯರ್ ಪಂಕ್ಚರ್ ಆಗಿ ಕೆಟ್ಟು ನಿಂತಿದ್ದು, ರಸ್ತೆಯಲ್ಲಿ ರಾತ್ರಿ ಕಳೆಯುವಂತಾಯ್ತು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮಂಗಳೂರು ಮೂಲದ ಭಾರತಿ ಟ್ರಾವೆಲ್ಸ್ ಸೇರಿದ ಬಸ್ ಇದಾಗಿದ್ದು, ಈ ಬಗ್ಗೆ ಪರ್ಯಾಯ ವ್ಯವಸ್ಥೆ ಕಲ್ಪಿಸದ ಸಂಸ್ಥೆ ವಿರುದ್ಧ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

PREV
click me!

Recommended Stories

ಎಚ್‌ಡಿ ಕುಮಾರಸ್ವಾಮಿ, ನಿರ್ಮಲಾ ಸೀತಾರಾಮನ್‌ ವಿರುದ್ಧ ಗುಡುಗಿದ ಸಿಎಂ ಸಿದ್ದರಾಮಯ್ಯ
ನಾನು ಹತ್ತು ಲಕ್ಷದ ವಾಚಾದ್ರೂ ಕಟ್ಟುತ್ತೇನೆ, ಅದು ನನ್ನ ಆಸ್ತಿ: ಬಿಜೆಪಿಗೆ ತಿರುಗೇಟು ಕೊಟ್ಟ ಡಿಕೆಶಿ