‘ಹಾಸನಾಂಬೆಯ ಬಳಿ ಬೇಡಿಕೆ ಈಡೇರಿಸೆಂದ ಪ್ರಜ್ವಲ್’

Published : Oct 18, 2019, 01:29 PM ISTUpdated : Oct 18, 2019, 01:31 PM IST
‘ಹಾಸನಾಂಬೆಯ ಬಳಿ ಬೇಡಿಕೆ ಈಡೇರಿಸೆಂದ ಪ್ರಜ್ವಲ್’

ಸಾರಾಂಶ

ಹಾಸನದ ಅಧಿದೇವತೆ ಹಾಸನಾಂಬೆಯ ಬಳಿ ತಮ್ಮ ಬೇಡಿಕೆ ಈಡೇರಿಸೆಂದು ಸಂಸದ ಪ್ರಜ್ವಲ್ ರೇವಣ್ಣ ಕೋರಿದ್ದಾರೆ. 

ಹಾಸನ [ಅ.18] : ಮಾಜಿ ಸಚಿವ ರಾಜೀನಾಮೆ ಹಳೆ ವಿಚಾರ. ಅವರನ್ನು ಎಚ್.ಡಿ ದೇವೇಗೌಡ, ಕುಮಾರಣ್ಣ, ರೇವಣ್ಣ ಮನ ಒಲಿಸಿದ್ದಾರೆ ಎಂದು ಹಾಸನದಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು. 

ಹಾಸನದ ಅಧಿದೇವತೆ ಹಾಸನಾಂಬೆಯ ದರ್ಶನದ ಬಳಿಕ ಮಾತನಾಡಿದ ಪ್ರಜ್ವಲ್ ರೇವಣ್ಣ ವಿಶ್ವನಾಥ್- ಸಾರಾ ಮಹೇಶ್ ಆಣೆ ಪ್ರಮಾಣ ಅವರಿಬ್ಬರ ವೈಯಕ್ತಿಕ ವಿಚಾರ. ಅದರ ಬಗ್ಗೆ ಅವತ ಬಳಿಯ ಕೇಳಬೇಕು ಎಂದರು. 

ಹಾಸನಾಂಬೆಯ ಬಳಿ ರಾಜ್ಯದ ನೆರೆ ಪೀಡಿತ ಜನರಿಗೆ ಸಂತಸದ ದಿನಗಳು ಬರಲಿ ಎಂದು ಪ್ರಾರ್ಥಿಸಿದ್ದೇನೆ ಎಂದು ಪ್ರಜ್ವಲ್ ರೇವಣ್ಣ ಹೇಳಿದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇನ್ನು ಹಾಸನಾಂಬ ಉತ್ಸವದ ಆಹ್ವಾನ ಪತ್ರಿಯಲ್ಲಿ ಸಂಸದರ ಹೆಸರು ಹಾಕದಿರುವ ಬಗ್ಗೆಯೂ ಪ್ರತಿಕ್ರಿಯಿಸಿದ ಪ್ರಜ್ವಲ್,  ಈ ನಡೆ ಬೇಸರ ತರಿಸಿತ್ತು.  ಈ ಬಗ್ಗೆ ಜಿಲ್ಲಾಧಿಕಾರಿ ಬಳಿ ನಾನೇ ಮಾತನಾಡಿದ್ದೆ. ದ್ವೇಷದ ನಡೆ ಎಂದಿಗೂ ನಡೆಯಬಾರದು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದೇ ಇರಲಿ ಎಂದು ಬಿಜೆಪಿ ನಾಯಕರ ವಿರುದ್ಧ ಪರೋಕ್ಷ ಹೇಳಿಕೆ ನೀಡಿದರು. 

ಹಾಸನಾಂಬ ದೇವಿ ಉತ್ಸವ ಅಕ್ಟೋಬರ್ 17 ರಿಂದ ಆರಂಭವಾಗಿದ್ದು, ಒಟ್ಟು 11 ದಿನಗಳ ಕಾಲ ನಡೆಯಲಿದೆ. 

PREV
click me!

Recommended Stories

ಎಚ್‌ಡಿ ಕುಮಾರಸ್ವಾಮಿ, ನಿರ್ಮಲಾ ಸೀತಾರಾಮನ್‌ ವಿರುದ್ಧ ಗುಡುಗಿದ ಸಿಎಂ ಸಿದ್ದರಾಮಯ್ಯ
ನಾನು ಹತ್ತು ಲಕ್ಷದ ವಾಚಾದ್ರೂ ಕಟ್ಟುತ್ತೇನೆ, ಅದು ನನ್ನ ಆಸ್ತಿ: ಬಿಜೆಪಿಗೆ ತಿರುಗೇಟು ಕೊಟ್ಟ ಡಿಕೆಶಿ