ರೈತರಿಗೆ ತಿಂಗಳಿಗೆ 12 ಕೋಟಿ ರು.

By Kannadaprabha NewsFirst Published Oct 18, 2019, 10:33 AM IST
Highlights

ರೈತರಿಗೆ ತಿಂಗಳಿಗೆ 12 ಕೋಟಿ ಸಿಗುತ್ತಿದೆ ಎಂದು ಶಾಸಕರು ತಿಳಿಸಿದ್ದಾರೆ. ಅತ್ಯಧಿಕ ಹಾಲು ಉತ್ಪಾದನೆಯಾಗುತ್ತಿದ್ದು ಈ ನಿಟ್ಟಿನಲ್ಲಿ ಹೆಚ್ಚಿನ ಹಣ ಲಭ್ಯವಾಗುತ್ತಿದೆ. 

ಬಾಗೂರು [ಅ.18] : ತಾಲೂಕಿನ 308 ಹಾಲು ಉತ್ಪಾದಕರ ಸಹಕಾರ ಸಂಘಗಳಿವೆ ದಿನಕ್ಕೆ 1 ಲಕ್ಷದ 50 ಸಾವಿರ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ರೈತರಿಗೆ ತಿಂಗಳಿಗೆ 12 ಕೋಟಿ ಹಣ ಸಿಗುತ್ತಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು. 

ಹೋಬಳಿಯ ಭಕ್ತರಹಳ್ಳಿಯಲ್ಲಿ ಮಂಗಳವಾರ ನೂತನ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಉದ್ಘಾಟಿಸಿ ಮಾತನಾಡಿದ ಅವರು, ಶೆಟ್ಟಿಹಳ್ಳಿ ಶೀತಲೀಕರಣ ಕೇಂದ್ರದಲ್ಲಿ 1 ಲಕ್ಷದ 30 ಸಾವಿರ ಲೀಟರ್ ಹಾಲನ್ನು  ಶಿತಿಲೀಕರಣಗೊಳಿಸಿ ಪೌಡರ್ ಮಾಡಲಾಗುತ್ತಿದೆ. ಹೊರ
ರಾಜ್ಯಗಳಾದ ಮಹಾರಾಷ್ಟ್ರ, ಹೈದರಬಾದ್, ದೆಹಲಿಯಲ್ಲಿಯೂ ನಂದಿನಿ ಹಾಲಿಗೆ ಬೇಡಿಕೆ ಇದೆ. ನಿಮ್ಮ ಸಹಕಾರ ಸಂಘಗಳಿಗೆ ಗುಣಮಟ್ಟದ ಹಾಲು ಹಾಕಿದರೆ ಹೈನುಗಾರಿಕೆಯಿಂದ ಲಾಭವಿದೆ ಎಂದರು. 

ಪಶು ಆಹಾರಗಳ ಬದಲಾಗಿ ಮಳೆಗಾಲದಲ್ಲಿ ಹಸಿರು ಮೇವು ಬೆಳೆದು ಸಂಗ್ರಹಿಸಿಕೊಳ್ಳಿ ಜಾನುವಾರುಗಳ ಆರೋಗ್ಯ ಕಪಾಡಿ ಪರಿಶುದ್ಧ ಹಾಲಿನಿಂದ ಆರೋಗ್ಯ ಚೆನ್ನಾಗಿರುತ್ತದೆ. ಮದ್ಯಪಾನದ ದುಶ್ಚಟಗಳಿಗೆ ಬಲಿಯಾಗಬೇಡಿ. ನಿಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ಎಂದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸಮಾರಂಭದಲ್ಲಿ ಜೆಡಿಎಸ್ ಮುಖಂಡ ಎ.ಸಿ.ಆನಂದ್ ಕುಮಾರ್, ಎಪಿಎಂಸಿ ಮಾಜಿ ಅಧ್ಯಕ್ಷ ಮಂಜುನಾಥ್, ದಯಾನಂದ, ಗ್ರಾಪಂ ಸದಸ್ಯ ನಂಜುಂಡಪ್ಪ, ಮುಖಂಡರಾದ ಪಟ್ಟರಾಜು, ಮಂಜುನಾಥ್, ಕಾಂತರಾಜ್, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷೆ ರಾಧಾಮಣಿ, ಕಾರ್ಯದರ್ಶಿ ಲಕ್ಷ್ಮಿನಂಜುಂಡಪ್ಪ ಇತರರು ಇದ್ದರು. 

click me!