ಸಾ.ರಾ. ಮಹೇಶ್ ರಾಜೀನಾಮೆ ವಿಚಾರ : ರೇವಣ್ಣ ರಿಯಾಕ್ಷನ್ ಏನು?

By Web DeskFirst Published Oct 16, 2019, 2:54 PM IST
Highlights

ಕೆ .ಆರ್. ನಗರ ಕ್ಷೇತ್ರದ ಶಾಸಕ ಸಾ .ರಾ. ಮಹೇಶ್ ರಾಜೀನಾಮೆ ನೀಡಿರುವ ವಿಚಾರದ ಬಗ್ಗೆ ಮಾಜಿ ಶಾಸಕ ಎಚ್. ಡಿ. ರೇವಣ್ಣ ಪ್ರತಿಕ್ರಿಯಿಸಿದ್ದಾರೆ. 

ಹಾಸನ [ಅ.16]: ರಾಜೀನಾಮೆ ನೀಡಿ ಯಾವುದೇ ವಿಚಾರದ ಬಗ್ಗೆ ತನಿಖೆ ನಡೆಸಬೇಕು ಎನ್ನುವ ನಿಯಮ ಇಲ್ಲ. ರಾಜೀನಾಮೆ ನೀಡದೇ ತನಿಖೆ ಮಾಡುವ ಬಗ್ಗೆ ಪಕ್ಷ ತೀರ್ಮಾನ ಮಾಡುತ್ತದೆ ಎಂದು, ಸಾ ರಾ ಮಹೇಶ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ವಿಚಾರದ ಬಗ್ಗೆ ಎಚ್ .ಡಿ. ರೇವಣ್ಣ ಪ್ರತಿಕ್ರಿಯಿಸಿದ್ದಾರೆ. 

 ಸಾರಾ ಮಹೇಶ್ ಅವರದ್ದು ಬ್ಲೂ ಫಿಲಂ ಕುಟುಂಬ.  ಹಲವು ಅಕ್ರಮ ನಡೆಸಿದ್ದಾರೆ ಎಂದು ವಿಶ್ವನಾಥ್ ಹೇಳಿದ್ದು, ಇದರಿಂದ ನೊಂದು ರಾಜೀನಾಮೆ ನೀಡಿದ್ದಾಗಿ ಸಾ ರಾ ಮಹೇಶ್ ಹೇಳಿದ್ದು, ಈ ಎಲ್ಲಾ ವಿಚಾರದ ಬಗ್ಗೆ ಪಕ್ಷ ತೀರ್ಮಾನಿ ಸುತ್ತದೆ ಎಂದು ಹಾಸನದಲ್ಲಿ ಎಚ್ .ಡಿ. ರೇವಣ್ಣ ಇಂದು ಹೇಳಿದರು. 

ಸಂತ್ರಸ್ತರ ವಿಚಾರ ಪ್ರಸ್ತಾಪ : ಹೇಮಾವತಿ ನೆರೆ ಸಂತ್ರಸ್ತರಿಗೆ ವಿಶೇಷ ಭೂಸ್ವಾದೀನದಡಿ 1654 ಎಕರೆ ಅಕ್ರಮವಾಗಿ ಮಂಜೂರಾಗಿದೆ. ಎಲ್ಲಾ ಅಧಿಕಾರಿಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ಡಿಸಿ ಸೂಚನೆ ನೀಡಿದ್ದು, ಇಂತಹ ಅಧಿಕಾರಿಗಳನ್ನು ಬಲಿ ಹಾಕುವಂತೆ ಸಿಎಂಗೆ ಮನವಿ ಮಾಡಲಾಗಿದೆ. ಇದಕ್ಕೆ ಸಂಭಂದಿಸಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಹಾಸನ ಮತ್ತು ಸಕಲೇಶಪುರ ಉಪವಿಭಾಗಾಧಿಕಾರಿ ಹಾಗೂ ಎಲ್ಲಾ ತಾಲೂಕುಗಳ ತಹಶೀಲ್ದಾರ್ ಗಳು ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಅಕ್ರಮದಲ್ಲಿ ಭಾಗಿಯಾದ ಅಧಿಕಾರಿಗಳ ವಿರುದ್ದ ಕ್ರಮಕೈಗೊಳ್ಳುವಂತೆ ಕಂದಾಯ ಸಚಿವ ಅಶೋಕ್ ಅವರಿಗೆ ಮನವಿ ಮಾಡಿದ್ದೇವೆ. ಅಕ್ರಮದಲ್ಲಿ ಭಾಗಿಯಾದ ಅಧಿಕಾರಿಗಳನ್ನ ಅಮಾನತು ಮಾಡಬೇಕು ಎಂದರು. 

ಇದಕ್ಕೆ ಸಂಬಂಧಿಸಿದ ದಾಖಲಾತಿಗಳನ್ನ ಸುಟ್ಟು ಹಾಕುವಂತವರು ಇದ್ದಾರೆ. ದಾಖಲಾತಿಗಳನ್ನ ಸುಟ್ಟುಹಾಕಿದರೆ ನಮ್ಮ ಹತ್ತಿರವೂ ದಾಖಲೆಗಳಿವೆ ಎಂದರು. 

click me!