
ಹಾಸನ(ಅ.19) : ಕೇವಲ 5 ತಿಂಗಳ ಹಿಂದಷ್ಟೇ ಅಧಿಕಾರದ ಚುಕ್ಕಾಣಿ ಹಿಡಿದಿರುವ ರಾಜ್ಯದ ಬಿಜೆಪಿ ಸರ್ಕಾರ ನವೆಂಬರ್‌ನಿಂದ ಜನವರಿ ಮುಗಿಯುವುದರೊಳಗೆ ಅಂತ್ಯವಾಗುತ್ತದೆ. ಹೊಸಬರು ಮುಖ್ಯಮಂತ್ರಿ ಆಗುತ್ತಾರೆ ಎಂದು ಬ್ರಹ್ಮಾಂಡ ಗುರೂಜಿ ಭವಿಷ್ಯ ನುಡಿದಿದ್ದಾರೆ.
ಮುಂದಿನ ದಿನಗಳಲ್ಲಿ ಒಂದು ಹೆಣ್ಣು ಯುದ್ಧವನ್ನು ತಡೆಯುವಲ್ಲಿ ಯಶಸ್ವಿಯಾಗುತ್ತಾಳೆ. ಜನರು ಪ್ರಕೃತಿ ವಿಕೋಪದ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ರಾಜ್ಯದಲ್ಲಿ ಈಗಾಗಲೇ ನೆರೆಯಿಂದ ಜನರು ಸಂಕಷ್ಟದಲ್ಲಿದ್ದಾರೆ. ಮುಂದಿನ ನವೆಂಬರ್ ನಂತರ ಇನ್ನೂ ಹೆಚ್ಚಿನ ಅವಗಡಗಳು ಸಂಭವಿಸುವುದು ಖಚಿತ. ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಊಟಕ್ಕೂ ತೊಂದರೆಯಾಗುತ್ತದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಅಕ್ಕಿ ದರ ಕೆಜಿಗೆ 1000 ರು.ಗೆ ಏರುವ ಸಾಧ್ಯತೆಯೂ ಇದ್ದೂ, ಕೇತು ಗುರು ಜೊತೆ ಇದ್ದರೆ ಇವೆಲ್ಲಾ ಅವಗಡಗಳು ಸಂಭವಿಸುತ್ತದೆ. ತಮಿಳುನಾಡಿಗೆ ಹೋಗಿ ನಾವು ರಂಗನಾಥನ ದರ್ಶನ ಮಾಡುತ್ತೇವೆ. ನಮ್ಮ ಕರುನಾಡಲ್ಲೇ ಇರುವ ತಾಯಿ ಹಾಸನಾಂಬಯಂತಹ ದೇವಿ ದರ್ಶನ ಪಡೆಯಬೇಕು. ಹಾಸನಾಂಬ ಕ್ಷೇತ್ರ ತುಂಬಾ ವೈಷಿಷ್ಟ್ಯವಾದ ಕ್ಷೇತ್ರವಾಗಿದೆ ಎಂದರು.