ಸಚಿವ ಮಾಧುಸ್ವಾಮಿಗೆ ಭವಾನಿ ರೇವಣ್ಣ ಸವಾಲು

Published : Oct 19, 2019, 08:37 AM IST
ಸಚಿವ ಮಾಧುಸ್ವಾಮಿಗೆ  ಭವಾನಿ ರೇವಣ್ಣ ಸವಾಲು

ಸಾರಾಂಶ

ಭವಾನಿ ರೇವಣ್ಣ ಹಾಸನ ಉಸ್ತುವಾರಿ ಸಚಿವರಾಗಿರುವ ಮಾಧುಸ್ವಾಮಿ ಅವರಿಗೆ ಸವಾಲು ಹಾಕಿದ್ದಾರೆ. ನಂಬರ್ ಒನ್ ಸ್ಥಾನದ ಚಾಲೇಂಜ್ ಹಾಕಿದ್ದಾರೆ. 

ಹಾಸನ [ಅ.19]:  ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಹಾಸನ ಜಿಲ್ಲೆ ನಂ.1 ಸ್ಥಾನಕ್ಕೇರಲು ನಾನೊಬ್ಬಳೇ ಕಾರಣ ಎಂದು ನಾನು ಹೇಳಿಲ್ಲ. 

ನನ್ನಿಂದ ಅಥವಾ ರೇವಣ್ಣ ಅವರಿಂದಲೇ ಆಗಿದೆ ಎಂದೂ ಹೇಳಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರಾಗಿ ತಿಳಿದುಕೊಂಡು ಮಾತನಾಡಬೇಕು ಎಂದು ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರ ಪತ್ನಿ, ಜಿಪಂ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಭವಾನಿ ರೇವಣ್ಣ ಅವರು ಸಚಿವ ಜೆ.ಸಿ.ಮಾಧುಸ್ವಾಮಿಗೆ ತಿರುಗೇಟು ನೀಡಿದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಹಾಸನಾಂಬೆ ದರ್ಶನ ಪಡೆದ ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಈಗ ಅವರೇ ಉಸ್ತುವಾರಿ ಸಚಿವರಾಗಿದ್ದಾರೆ. ನಂಬರ್‌ ಒನ್‌ ಮಾಡಲಿ ಎಂದು ಸವಾಲು ಹಾಕಿದರು. ಅಧಿಕಾರಿಗಳು, ಪೋಷಕರು, ಎಲ್ಲರ ಸಹಕಾರದಿಂದ ಸಾಧನೆ ಮಾಡಲಾಗಿದೆ. ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಪೋಷಕರ ಸಭೆ ಮಾಡಿದ್ದು ಹಾಸನದಲ್ಲೇ ಮೊದಲು. ಇದನ್ನು ಈಗ ಉಳಿದವರು ಅನುಸರಿಸುತ್ತಿದ್ದಾರೆ ಎಂದರು.

PREV
click me!

Recommended Stories

ಎಚ್‌ಡಿ ಕುಮಾರಸ್ವಾಮಿ, ನಿರ್ಮಲಾ ಸೀತಾರಾಮನ್‌ ವಿರುದ್ಧ ಗುಡುಗಿದ ಸಿಎಂ ಸಿದ್ದರಾಮಯ್ಯ
ನಾನು ಹತ್ತು ಲಕ್ಷದ ವಾಚಾದ್ರೂ ಕಟ್ಟುತ್ತೇನೆ, ಅದು ನನ್ನ ಆಸ್ತಿ: ಬಿಜೆಪಿಗೆ ತಿರುಗೇಟು ಕೊಟ್ಟ ಡಿಕೆಶಿ