ಬಿಜೆಪಿ ನಾಯಕರನ್ನು ನೋಡಿ ಕಲಿಯಿರಿ

By Web Desk  |  First Published Aug 3, 2018, 4:07 PM IST

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಉಡುಪಿ, ಚಿಕ್ಕಮಂಗಳೂರು ಕ್ಷೇತ್ರಕ್ಕೆ ಅತಿಹೆಚ್ಚು ಅನುಧಾನ ನೀಡಲಾಯಿತು. ಆದರೂ ನಾಯಕರು ಮತ ಸೆಳೆಯಲು ವಿಫಲರಾದರು. ಒಂದು ಕಾಲದಲ್ಲಿ ಕರಾವಳಿಯಲ್ಲಿ ಕಾಂಗ್ರೆಸ್ ಪಕ್ಷ ಬಲವಾಗಿತ್ತು ಈಗ ನಾವು ಅದರ ಖದರ್ ಕಳೆದುಕೊಂಡಿದ್ದೇವೆ. ಮತ್ತೆ ಅಲ್ಲಿ ಪಕ್ಷ ಸಂಘಟನೆ ಚುರುಕು ಗೊಳಿಸಬೇಕು ಅಂದ್ರೆ ಬಿಜೆಪಿ ಮಾದರಿಯಲ್ಲಿ ಬೂತ್ ಮಟ್ಟದಲ್ಲಿ ಸಂಘಟನೆ ಬಲಪಡಿಸಿ ಎಂದು ಕಾರ್ಯಕರ್ತರಿಗೆ ವೇಣುಗೋಪಾಲ್ ಕಿವಿಮಾತು ಹೇಳಿದರು.

ಚಿಕ್ಕಮಗಳೂರು[ಆ.03]: ಪಕ್ಷ ಬಲವರ್ಧನೆ ವಿಚಾರದಲ್ಲಿ ಬಿಜೆಪಿಯ ’ವಿಸ್ತಾರಕ್’ ಯೋಜನೆ ಆ ಪಕ್ಷಕ್ಕೆ ಮತ ತಂದುಕೊಡಲು ಸಹಕಾರಿಯಾಯಿತು. ಅದೇ ರೀತಿ ಬ್ಲಾಕ್ ಹಾಗೂ ತಾಲೂಕು ಮಟ್ಟದಲ್ಲಿ ಪಕ್ಷವನ್ನು ಮರು ಸಂಘಟಿಸಬೇಕು. ಇನ್ನಾದರೂ ಬಿಜೆಪಿಯವರನ್ನು ನೋಡಿ ಕಲಿಯಿರಿ ಎಂದು ಕಾರ್ಯಕರ್ತರಿಗೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ತಿಳಿಸಿದ್ದಾರೆ.

ಇದನ್ನು ಓದಿ: ಕಾಂಗ್ರೆಸ್ ನಾಯಕರಿಗೆ ವೇಣುಗೋಪಾಲ್ ನೀಡಿದ ಸೂಚನೆ ಏನು..?

Tap to resize

Latest Videos

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಉಡುಪಿ, ಚಿಕ್ಕಮಂಗಳೂರು ಕ್ಷೇತ್ರಕ್ಕೆ ಅತಿಹೆಚ್ಚು ಅನುಧಾನ ನೀಡಲಾಯಿತು. ಆದರೂ ನಾಯಕರು ಮತ ಸೆಳೆಯಲು ವಿಫಲರಾದರು. ಒಂದು ಕಾಲದಲ್ಲಿ ಕರಾವಳಿಯಲ್ಲಿ ಕಾಂಗ್ರೆಸ್ ಪಕ್ಷ ಬಲವಾಗಿತ್ತು ಈಗ ನಾವು ಅದರ ಖದರ್ ಕಳೆದುಕೊಂಡಿದ್ದೇವೆ. ಮತ್ತೆ ಅಲ್ಲಿ ಪಕ್ಷ ಸಂಘಟನೆ ಚುರುಕು ಗೊಳಿಸಬೇಕು ಅಂದ್ರೆ ಬಿಜೆಪಿ ಮಾದರಿಯಲ್ಲಿ ಬೂತ್ ಮಟ್ಟದಲ್ಲಿ ಸಂಘಟನೆ ಬಲಪಡಿಸಿ ಎಂದು ಕಾರ್ಯಕರ್ತರಿಗೆ ವೇಣುಗೋಪಾಲ್ ಕಿವಿಮಾತು ಹೇಳಿದರು.

ಇದನ್ನು ಓದಿ: ವೇಣುಗೋಪಾಲ್‌ ಶಿಫ್ಟ್? ರಾಜ್ಯ ಕಾಂಗ್ರೆಸ್‌ಗೆ ಹೊಸ ಉಸ್ತುವಾರಿ?

ನಾಯಕರು ಯಾರೂ ಮನೆಯಲ್ಲೇ ಕುಳಿತುಕೊಳ್ಬೇಡಿ. ವಿಸ್ತಾರಕ ರೀತಿ ನೀವು ಬ್ಲಾಕ್ ಮಟ್ಟದಲ್ಲಿ ಒಬ್ಬರಿಗೆ ಜವಾಬ್ದಾರಿ ಕೊಡಿ. ನಮಗೆ ಚುನಾವಣಾ ಉಸ್ತುವಾರಿ ತೆಗೆದುಕೊಳ್ಳುವವರು ಬೇಕಿಲ್ಲ, ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡೋರು ಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಕಾಂಕ್ಷಿಗಳ ಪಟ್ಟಿಯಲ್ಲಿ ಬಿ.ಕೆ ಹರಿಪ್ರಸಾದ್, ವಿನಯ್ ಕುಮಾರ್ ಸೊರಕೆ ಹಾಗೂ ವೀರಪ್ಪ ಮೋಯ್ಲಿ ಹೆಸರು ಬಲವಾಗಿ ಕೇಳಿಬರುತ್ತಿದೆ. ಆದರೆ ಸಭೆಯಲ್ಲಿ ಸೊರಕೆ ಬಗ್ಗೆಯೇ ಕಾರ್ಯಕರ್ತರು ಒಲವು ವ್ಯಕ್ತಪಡಿಸಿದರು ಎನ್ನಲಾಗುತ್ತದೆ.

click me!