ಸೆಕೆ ತಡೆಯಲಾಗದೆ ಗುಪ್ತಾಂಗಕ್ಕೆ ಕುಲ್ಫೀ ಹಾಕಿದ ಮಹಿಳೆ: ಮುಂದಾಗಿದ್ದು ದುರಂತ!

First Published | May 25, 2020, 4:49 PM IST

ಸದ್ಯ ವಿಶ್ವವ್ಯಾಪಿ ಕೊರೋನಾ ತಾಂಡವ ಮುಂದುವರೆದಿದೆ. ಈ ಮಹಾಮಾರಿಯಿಂದಾಗಿ ಜನರು ಕೂಡಾ ಮನೆಯಲ್ಲೇ ಉಳಿಯುವಂತಾಗಿದೆ. ಈ ನಡುವೆ ಬಿಸಲು ಕೂಡಾ ಹೆಚ್ಚಾಗಿದ್ದು, ಭಾರತದಲ್ಲೂ ಬಿಸಿಲಿನ ಝಳ ಹೆಚ್ಚಾಗಿದೆ. ಅತ್ತ ಬ್ರಿಟನ್‌ನಲ್ಲೂ ಇಂತುದೇ ಪರಿಸ್ಥಿತಿ ಇದೆ. ಈವರೆಗೆ ಸೆಕೆ ತಡೆಯಲು ಜನರು ಫ್ಯಾನ್ ಕೆಳಗೆ ಕುಳಿತುಕೊಳ್ಳುವುದು ಅಥವಾ ಎಸಿ ಹಾಕುವುದನ್ನು ಕೇಳಿರುತ್ತೇವೆ. ಆದರೆ ಬ್ರಿಟನ್‌ನಲ್ಲಿ ವರದಿಯಾದ ಪ್ರಕರಣದಿಂದ ಖುದ್ದು ವೈದ್ಯರೇ ಜನರಿಗೆ ಎಚ್ಚರದಿಂದಿರಲು ಸೂಚಿಸುತ್ತಿದ್ದಾರೆ. ಹೌದು ಬ್ರಿಟನ್‌ನ ಮಹಿಳೆಯೊಬ್ಬಳನ್ನು ವೈದ್ಯರು ಸಮಯ ವ್ಯರ್ಥ ಮಾಡದೇ ತುರ್ತು ನಿಗಾ ಘಟಕಕ್ಕೆ ದಾಖಲು ಮಾಡಿದ್ದಾರೆ. ಸೆಕೆ ತಡೆಯಲಾಗದೆ ಈ ಮಹಿಳೆ ತನ್ನ ಗುಪ್ತಾಂಗಕ್ಕೆ ಐಸ್ ಕ್ಯಾಂಡಿ ಅಂದರೆ ಕುಲ್ಫೀ ಹಾಕಿಕೊಂಡಿದ್ದಳು. ಇದರಿಂದ ಆ ಮಹಿಳೆಗೆ ಎಷ್ಟು ತಂಪಾಯ್ತು ತಿಳಿಯದು, ಆದರೆ ಕೂಡಲೇ ಆಸ್ಪತ್ರೆಗೆ ಕರೆದೊಯ್ಯಬೇಕಾದ ಅನಿವಾರ್ಯತೆ ಎದುರಾಗಿತ್ತು. ಇಲ್ಲಿದೆ ಘಟನೆಯ ವಿವರ
 

ಕೊರೋನಾ ಬೆನ್ನಲ್ಲೇ ಬ್ರಿಟನ್‌ನಲ್ಲಿ ತಾಪಮಾನವೂ ಹೆಚ್ಚಲಾರಂಭಿಸಿದೆ. ನಿಧಾನವಾಗಿ ಇದು ಭಯಾನಕ ರೂಪ ಪಡೆದುಕೊಳ್ಳಲಾರಂಭಿಸಿದೆ. ಹೀಗಿರುವಾಗ ಜನ ಸಾಮಾನ್ಯರು ಈ ಬಿಸಿಲಿನಿಂದ ಕಾಪಾಡಿಕೊಳ್ಳಲು ವಿಭಿನ್ನ ಹಾದಿ ಹುಡುಕುತ್ತಿದ್ದಾರೆ.
undefined
ಮೆಟ್ರೋ ಯುಕೆ ಅನ್ವಯ ಬ್ರಿಟನ್‌ನ ಓರ್ವ ಮಹಿಳೆಗೆ ಈ ತಾಪಮಾನ ಸಹಿಸಿಕೊಳ್ಳಲು ಆಗಲಿಲ್ಲ, ಹೀಗಾಗಿ ಆಕೆ ತನ್ನ ಗುಪ್ತಾಂಗಕ್ಕೆ ತಂಪಗಿನ ಕುಲ್ಫೀ ಹಾಕಿದ್ದಾಳೆ.
undefined

Latest Videos


ಆದರೆ ಕೆಲವೇ ಕ್ಷಣದಲ್ಲಿ ಆಕೆಗೆ ತನ್ನ ನಿರ್ಧಾರ ತಪ್ಪು ಎಂದು ಅರಿವಾಗಿದೆ. ಯಾಕೆಂದರೆ ಈ ಐಡಿಯಾ ಬಹಳ ಅಪಾಯಕಾರಿ ಎಂದು ಸಾಬೀತಾಗಿದ್ದು, ಮಹಿಳೆ ನೋವಿನಿಂದ ನರಳಾಡಲಾರಂಭಿಸಿದ್ದಾಳೆ.
undefined
ಆಕೆಯನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ವೈದ್ಯರು ಕೂಡಾ ಅವಸರದಲ್ಲಿ ಚಿಕಿತ್ಸೆ ಆರಂಭಿಸಿದ್ದಾರೆ. ಅನೇಕ ಗಂಟೆ ನಡೆದ ಚಿಕಿತ್ಸೆ ಬಳಿಕ ಮಹಿಳೆ ಕೊಂಚ ಸುಧಾರಿಸಿಕೊಂಡಿದ್ದಾಳೆ.
undefined
ಮಹಿಳೆಯ ಗುಪ್ತಾಂಗ ಸಂಪೂರ್ಣವಾಗಿ ಊದಿಕೊಂಡಿತ್ತು. ಸಂಬಂಧ ವೈದ್ಯರು ಮಾಹಿತಿ ನೀಡಿದ್ದು, ಐಸ್‌ ಕುಲ್ಫೀಯಲ್ಲಿ ಅನೇಕ ಬಗೆಯ ಕೆಮಿಕಲ್ ಇರುತ್ತದೆ. ಬಣ್ಣ ಹಾಗೂ ರುಚಿಗಾಗಿ ಹಾಕಲಾದ ಈ ಕೆಮಿಕಲ್ ಗುಪ್ತಾಂಗದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದಿದ್ದಾರೆ
undefined
ಬ್ರಿಟನ್‌ನ ಪ್ರಖ್ಯಾತ ಮಹಿಳಾ ತಜ್ಞೆ ಡಾ. ಆನಿ ಹ್ಯಾಂಡರ್ಸನ್ ಈ ಸಂಬಂಧ ಪ್ರತಿಕ್ರಿಯಿಸಿದ್ದು ಈ ಐಸ್‌ ಕ್ರೀಂಗಳಲ್ಲಿ ಫುಡ್‌ ಕಲರ್ ಹಾಕಲಾಗುತ್ತದೆ. ಜೊತೆಗೆ ಪರ್ಫಗ್ಯೂಮ್ ಹಾಗೂ ಉಪ್ಪಿನ ಅಧಿಕ ಪ್ರಮಾಣದಿಂದ ಗುಪ್ತಾಂಗದ ಪಿಎಚ್‌ ಲೆವೆಲ್‌ ಮೇಲೆ ಭಾರೀ ನೆಗೆಟಿವ್ ಪ್ರಭಾವ ಬೀರುತ್ತದೆ ಎಂದಿದ್ದಾರೆ.
undefined
ಇದರಿಂದಾಗಿ ಗುಪ್ತಾಂಗದ ಸೋಂಕು ಉಂಟಾಗುತ್ತದೆ. ಅಲ್ಲದೇ ಈ ಐಸ್‌ಕ್ರೀಂ ಕೆಲ ಸಮಯದಲ್ಲಿ ಕರಗುವುದರಿಂದ ಅನೇಕ ರೀತಿಯ ಸೋಂಕು ಉಂಟಾಗುತ್ತದೆ.
undefined
ಇನ್ನು ಫ್ರಿಜ್‌ನಲ್ಲಿರುವ ಐಸ್‌ ತೆಗೆದು ನೇರವಾಗಿ ನಾಲಗೆ ಮೇಲೆ ಇಟ್ಟರೆ, ಕೆಲ ಹೊತ್ತು ಇದು ಬಲವಿಲ್ಲದಂತೆ ಭಾಸವಾಗುತ್ತದೆ. ಗುಪ್ತಾಂಗದಲ್ಲೂ ಹೀಗೇ ಆಗುತ್ತದೆ. ವಾಸ್ತವವಾಗಿ ಈ ಭಾಗ ನಾಲಗೆಗಿಂತಲೂ ಸೂಕ್ಷ್ಮವಾಗಿರುತ್ತದೆ ಎಂದಿದ್ದಾರೆ ವೈದ್ಯರು.
undefined
ಹೀಗಿರುವಾಗ ವೈದ್ಯರು ಯಾವ ಮಹಿಳೆಯರೂ ಇಂತಹ ಹೆಜ್ಜೆ ಇರಿಸದಂತೆ ಎಚ್ಚರಿಸಿದ್ದಾರೆ. ಐಸ್‌ ಕ್ರಿಂ ಮಾತ್ರವಲ್ಲ ಗುಪ್ತಾಂಗಕ್ಕೆ ಯಾವುದೇ ವಸ್ತುಗಳನ್ನು ಹಾಕದಂತೆ ಮನವಿ ಮಾಡಿಕೊಂಡಿದ್ದಾರೆ.
undefined
click me!