ಕೊರೋನಾದಿಂದ ಸಾವು, ತಿಂಗಳ ಬಳಿಕ ಜೀವಂತವಾದಳು!

First Published May 5, 2020, 2:22 PM IST

ಕೊರೋನಾ ಅಟ್ಟಹಾಸಕ್ಕೆ ವಿಶ್ವದ ಅನೇಕ ರಾಷ್ಟ್ರಗಳು ಸಾವಿನ ಮನೆಯಂತಾಗುವೆ. ಈವರೆಗೂ ಈ ವೈರಸ್‌ 36 ಲಕ್ಷದ 46 ಸಾವಿರ ಮಂದಿಯಲ್ಲಿ ಕಾಣಿಸಿಕೊಮಡಿದ್ದು, ಎರಡೂವರೆ ಲಕ್ಷ ದಾಟಿದೆ. ಅನೇಕ ರಾಷ್ಟ್ರಗಳಲ್ಲಿ ಸ್ಮಶಾನಗಳಲ್ಲಿ ಶವ ಹೂಳಲು ಸ್ಥಳವಿಲ್ಲದೇ, ಹೊಸ ಸ್ಮಶಾನಗಳನ್ನು ನಿರ್ಮಿಸಬೇಕಾದ ಪರಿಸ್ಥಿತಿಯೂ ಎದುರಾಗಿದೆ. ಆಸ್ಪತ್ರೆ ಶವಾಗಾರಗಳು ಕೂಡಾ ತುಂಬಿ ತುಳುಕಾಡುತ್ತಿದ್ದು, ಶವಗಳನ್ನು ಸಂರಕ್ಷಿಸಲು ಸ್ಥಳವಿಲ್ಲದಂತಾಗಿದೆ. ಹೀಗಿರುವಾಗ ಅನೇಕ ಕಡೆ ವೈದ್ಯರೂ ಕೂಡಾ ಗೊಂದಲಕ್ಕೀಡಾಗುತ್ತಿದ್ದು, ಮೃತರ ಗುರುತಿಸುವಲ್ಲಿ ಎಡವುತ್ತಿದ್ದಾರೆ. ಇತ್ತೀಚೆಗಷ್ಟೇ ದಕ್ಷಿಣ ಅಮೆರಿಕದ ಇಕ್ವೆಡಾರ್‌ನಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ ಎಂಬ ಹಿನ್ನೆಲೆ ಕುಟುಂಬ ಅಂತಿಮ ಸಂಸ್ಕಾರಕ್ಕೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡಿ, ಕ್ರಿಯೆಗಳನ್ನೂ ನೆರವೇರಿಸಿತ್ತು. ಆದರೆ ಒಂದು ತಿಂಗಳ ಬಳಿಕ ಆ ಮಹಿಳೆ ಜೀವಂತವಾಗಿ ಮನೆಗೆ ಮರಳಿದ್ದಾರೆ.

ಈ ಶಾಕಿಂಗ್ ಘಟನೆ ನಡೆದಿದ್ದು, ಇಕ್ವೆಡಾರ್‌ನಲ್ಲಿ. ಇಲ್ಲಿ ಕೊರೋನಾದಿಂದಾಗಿ ಮಹಿಳೆಯೊಬ್ಬಳು ಮೃತಪಟ್ಟಿದ್ದು, ಆಕೆಯ ಅಂತಿಮ ಸಂಸ್ಕಾರ ಕೂಡಾ ನೆರವೇರಿಸಲಾಗಿತ್ತು. ಆದರೀಗ ಒಂದು ತಿಂಗಳ ಬಳಿಕ ಆಕೆ ಮರಳಿದ್ದಾಳೆ.
undefined
ಈ ಮಹಿಳೆಯನ್ನು 74 ವರ್ಷದ ಅಲ್ಕಾ ಮರುರೀ ಎಂದು ಗುರುತಿಸಲಾಗಿದೆ. ಆಕೆ ಜೀವಂತವಿದ್ದು, ಆಸ್ಪತ್ರೆ ನಿರ್ಲಕ್ಷ್ಯದಿಂದ ಆಕೆ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆಂದು ಕುಟುಂಬ ಸದದಸ್ಯರು ಆರೋಪಿಸಿದ್ದಾರೆ.
undefined
ಈ ಘಟನೆ ಮಾರ್ಚ್ 27ರಂದು ನಡೆದಿದ್ದು, ಅಂದು ಅಲ್ಕಾರನ್ನು ಮೃತಳೆಂದು ಘೋಷಿಸಿದ್ದರು. ಆಸ್ಪತ್ರೆ ಸಿಬ್ಬಂದಿ ಅಲ್ಕಾರವರ ಕುಟುಂಬ ಸದಸ್ಯರಿಗೆ ಅವರು ಮೃತಪಟ್ಟಿದ್ದಾರೆಂದು ಮಾಹಿತಿ ನೀಡಿದ್ದಾರೆ. ಆದರೆ ವೈರಸ್ ತಗುಲುವ ಭಯದಿಂದ ಕುಟುಂಬ ಸದಸ್ಯರು ಮೃತದೇಹದ ಹತ್ತಿರ ಬಂದಿರಲಿಲ್ಲ.
undefined
ಇದಾದ ಬಳಿಕ ಆಸ್ಪತ್ರೆ ಸಿಬ್ಬಂದಿ ಅಲಲ್ಕಾರವರ ಅಂತಿಮ ಕ್ರಿಯೆ ನಡೆಸಿ ಆಕೆಯ ಬೂದಿಯನ್ನು ಕುಟುಂಬ ಸದಸ್ಯರಿಗೆ ನೀಡಿದ್ದರು. ಅಲ್ಕಾರನ್ನು ಕಳೆದುಕೊಂಡು ದುಃಖದಲ್ಲಿದ್ದ ಕುಟುಂಬ ಇದನ್ನು ವಿಸರ್ಜಿಸಿದ್ದರು.
undefined
ಆದರೆ ಒಂದು ತಿಂಗಳ ಬಳಿಕ ಆಸ್ಪತ್ರೆ ಸಿಬ್ಬಂದಿ ಅಲ್ಕಾ ಜೀವಂತವಾಗಿದ್ದಾರೆ, ಚಿಕಿತ್ಸೆ ಬಳಿಕ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆಂದು ಕರೆ ಮಾಡಿ ತಿಳಿಸಿದ್ದಾರೆ. ಇದರಿಂದ ಇಡೀ ಕುಟುಂಬವೇ ಅಚ್ಚರಿಗೊಳಗಾಗಿದೆ.
undefined
ವಾಸ್ತವವಾಗಿ ಆಸ್ಪತ್ರೆ ಬೇರೊಬ್ಬ ಮಹಿಳೆಯನ್ನು ಅಲ್ಕಾ ಎಂದು ಭಾವಿಸಿ ಆಕೆಯ ಅಸ್ಥಿಗಳನ್ನು ಅಲ್ಕಾ ಕುಟುಂಬ ಸದಸ್ಯರಿಗೆ ನೀಡಿತ್ತು. ಇದೀಗ ಅಲ್ಕಾ ಜೀವಂತವಿದ್ದಾರೆಂದು ತಿಳಿದ ಕುಟುಂಬ ಮಂದಿ ಕುಣಿದು ಕುಪ್ಪಳಿಸಿದ್ದಾರೆ.
undefined
ಲಾಕ್‌ಡೌನ್‌ನಿಂದಾಗಿ ಸದ್ಯ ಕುಟುಂಬ ಮಂದಿ ಅಲ್ಕಾರನ್ನು ಭೇಟಿಯಾಗಲು ಸಾಧ್ಯವಾಗಿಲ್ಲ, ಆದರೆ ಆಕೆ ಕೊರೋನಾದಿಂದ ಸಂಪೂರ್ಣ ಚೇತರಿಸಿಕೊಂಡಿದ್ದಾರೆಂದು ವೈದ್ಯರು ತಿಳಿಸಿದ್ದಾರೆ.
undefined
ಸದ್ಯ ಅಲ್ಕಾ ಕುಟುಂಬ ಮಂದಿ ಆಸ್ಪತ್ರೆ ವಿರುದ್ಧ ದೂರು ನೀಡಿದ್ದಾರೆ. ಅಲ್ಲದೇ ಬೇರೊಬ್ಬರ ಅಸ್ಥಿ ಕಳುಹಿಸಿ ಕೊಟ್ಟು ಆಕೆಯ ಅಂತಿಮ ಸಂಸ್ಕಾರಕ್ಕೆ ತಗುಲಿರುವ ಹಣವನ್ನು ಆಸ್ಪತ್ರೆ ನೀಡಬೇಕೆಂದು ಒತ್ತಾಯಿಸಿದೆ.
undefined
ಇಲ್ಲಿನ ಆರೋಗ್ಯ ಇಲಾಖೆಗೆ ಈ ಸಂಬಂಧ ಅಲ್ಕಾ ಕುಟುಂಬ ಮಂದಿ ದೂರು ನೀಡಿದ್ದು, ಸದ್ಯ ಪ್ರಕರಣದ ತನಿಖೆ ನಡೆಯುತ್ತಿದೆ. ಇನ್ನು ಈ ಪ್ರಕರಣ್ದಲ್ಲಿ ಆಸ್ಪತ್ರೆ ತಪ್ಪಿದ್ದರೆ, ಕುಟುಂಬ ಸದಸ್ಯರು ಕೇಳಿರುವ ಹಣ ನೀಡಲು ತಯಾರಿರಬೇಕು ಎಂದು ತಿಳಿಸಿದೆ.
undefined
click me!