ಇಲಿಯೋನಿಸ್‌ನ ನಾರ್ಥ್‌ವೆಸ್ಟರ್ನ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು 16 ಗರ್ಭಿಣಿ ಮಹಿಳೆಯರ ಮೇಲೆ ಕೊರೋನಾ ವೈರಸ್ ಸಂಬಂಧ ಅಧ್ಯಯನ ನಡೆಸಿದ್ದಾರೆ. ಈ ಎಲ್ಲಾ ಮಹಿಳೆಯರು ಕೊರೋನಾ ಸೋಂಕಿತರಾಗಿದ್ದರು.
undefined
ಈ ಅಧ್ಯಯನದಲ್ಲಿ 16 ಗರ್ಭಿಣಿಯರ ದೇಹದೊಳಗೆ ಸೇರಿಕೊಂಡಿದ್ದ ಕೊರೋನಾ ವೈರಸ್ ಹೇಗೆ ನಿಧಾನವಾಗಿ ರಕ್ತವನ್ನು ಗಟ್ಟಿಗೊಳಿಸಿರುವುದನ್ನು ಕಂಡುಕೊಳ್ಳಲಾಯಿತು. ಇದರಿಂದ ಕೆಲ ಅಂಗಗಳು ಡ್ಯಾಮೇಜ್ ಆಗಿದ್ದವು.
undefined
ಕೊರೋನಾ ವೈರಸ್ ತಾಯಿ ಹಾಗು ಶಿಶುವಿನ ನಡುವೆ ವೈಟಲ್ ವಿಟಮಿನ್ ಶೇಖರಿಸುವ ಪ್ಲಾಸೆಂಟಾ ಮೇಲೆ ಮೊದಲು ದಾಳಿ ಮಾಡುತ್ತದೆ. ಇದರಿಂದಾಗಿ ಮಗು ಜನಿಸುವಾಗ ಶಕ್ತಿಹೀನವಾಗಿರುತ್ತದೆ ಎಲ್ಲವೇ ಸಾಯುತ್ತದೆ.
undefined
ಅಧ್ಯಯನದ ವೇಳೆ 16 ಗರ್ಭಿಣಿಯರಿಗೆ ನೀಡಲಾದ ಹೆರಿಗೆ ದಿನಾಂಕದಂದೇ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಹೀಗಿರುವಾಗ ಓರ್ವ ಮಹಿಳೆಯ ಮಗು ಗರ್ಭದಲ್ಲೇ ಸಾವನ್ನಪ್ಪಿದೆ. ಆದರೆ ಈ ಮಗು ಸಾವನ್ನಪ್ಪಿದ್ದು ಕೊರೋನಾದಿಂದಾಗಿಯೋ ಅಥವಾ ಬೇರೆ ಕಾರಣದಿಂದಲೋ ಎಂಬುವುದನ್ನು ವಿಜ್ಞಾನಿಗಳು ದೃಢಪಟಿಸಿಲ್ಲ
undefined
ಈ ಅಧ್ಯಯನದಲ್ಲಿ ಕೊರೋನಾ ವೈರಸ್ ಗರ್ಭನಾಳದ ಮೇಲೆ ದಾಳಿ ಮಾಡುತ್ತದೆ. ಈ ಮೂಲಕ ಹುಟ್ಟುವ ಮಗು ಹಾಗೂ ತಾಯಿ ನಡುವಿನ ರಕ್ತದ ಚಲನೆ ನಿಲ್ಲುವಂತೆ ಮಾಡುತ್ತದೆ ಎಂಬುವುದು ಅಧ್ಯಯನದಲ್ಲಿ ಬಯಲಾಗಿದೆ.
undefined
ಈ ಅಧ್ಯಯನದಲ್ಲಿ ಪಾಲ್ಗೊಂಡ 16ಮಹಿಳೆಯರ ಗರ್ಭನಾಳ ಡ್ಯಾಮೇಜ್ ಆಗಿತ್ತು. ಅವರೆಲ್ಲರ ವೈಟಲ್ ಆರ್ಗನ್ಸ್ ಹಾಳಾಗಿತ್ತು. ಹೀಗಾಗಿ ಹೊಟ್ಟೆಯಲ್ಲಿದ್ದ ಮಗುವಿಗೆ ಆಮ್ಲಜನಕ ಹಾಗೂ ಪೋಷಕಾಶಂಗಳು ತಲುಪಿಲ್ಲ.
undefined
ಪ್ಲಾಸೆಂಟಾದಲ್ಲಿ ರಕ್ತ ಕಡಿಮೆಯಾದ ಪರಿಣಾಮ ಗರ್ಭದಲ್ಲಿರುವ ಶಿಶುವಿನ ಮೇಲೆ ಹಲವು ರೀತಿಯ ಪರಿಣಾಮ ಬಿದ್ದಿದೆ. ಒಂದೆಡೆ ತೂಕ ಕಡಿಮೆಯಾದರೆ, ಮತ್ತೊಂದೆಡೆ ಗರ್ಭದಲ್ಲೇ ಶಿಶುವಿನ ಕೆಲ ಅಂಗಗಳು ಡ್ಯಾಮೇಜ್ ಆಗಿವೆ.
undefined
ಇನ್ನು ಕೆಲ ಮಕ್ಕಳು ಆಮ್ಲಜನಕ ಪೂರೈಕೆ ಕಡಿಮೆಯಾಗುವುದರಿಂದ ಗರ್ಭದಲ್ಲೇ ಸಾವನ್ನಪ್ಪುತ್ತವೆ.
undefined
ಒಟ್ಟಾರೆಯಾಗಿ ಈ ಅಧ್ಯಯನದಲ್ಲಿ ಗರ್ಭಿಣಿ ಮಹಿಳೆಯರು ಕೊರೋನಾದ ಈ ಸಂಕಷ್ಟದ ಸಮಯದಲ್ಲಿ ಬಹಳ ಜಾಗರೂಕರಾಗಿರಬೇಕು. ಇದು ಕೇವಲ ಮಗುವಿನ ಮೇಲೆ ಮಾತ್ರವಲ್ಲ ತಾಯಿ ಮೇಲೂ ಬಹಳ ಕೆಟ್ಟ ಪರಿಣಾಮ ಬೀರುತ್ತದೆ ಎಂಬುವುದು ತಿಳಿದು ಬಂದಿದೆ.
undefined