15 ಸಾವಿರ ವರ್ಷ ಹಿಂದೆ ಮಾನವನಿಂದ 'ದಾನವ'ನ ಬೇಟೆ: ಸಾಕ್ಷಿಗೆ ಸಿಕ್ತು ಬೃಹತ್ ಮೂಳೆ!

First Published May 22, 2020, 5:54 PM IST

ಮೆಕ್ಸಿಕೋದ ಫೆಲಿಪೆ ಏಂಜಲೀಸ್ ಇಂಟರ್‌ ನ್ಯಾಷನಲ್ ವಿಮಾನ ನಿಲ್ದಾಣದ ಬಳಿ ಭೂಮಿ ಅಗೆಯುತ್ತಿದ್ದ ವೇಳೆ ಯಾರೂ ಊಹಿಸದಿರುವ ವಸ್ತುಗಳು ಕಾರ್ಮಿಕರಿಗೆ ಸಿಕ್ಕಿವೆ. ಇಲ್ಲಿನ ಕಾಮಗಾರಿ ವೇಳೆ ಒಂದೆರಡಲ್ಲ ಬದಲಾಗಿ ಬರೋಬ್ಬರಿ 60 ಬೃಹದ್ಗಜಗಳ ಮೂಳೆಗಳು ಸಿಕ್ಕಿವೆ. ಇಷ್ಟೇ ಅಲ್ಲದೇ ಇಲ್ಲಿ ಕೆಲ ಕಾಡು ಕೋಣ ಒಂಟೆಗಳ ಮೂಳೆಗಳೂ ಲಭ್ಯವಾಗಿವೆ. ಅದಕ್ಕೂ ಅಚ್ಚರಿಯ ವಿಚಾರವೆಂದರೆ ಇವೆಲ್ಲದರ ನಡುವೆ ಸುಮಾರು ಹದಿನೈದು ಮಾನವರ ತಲೆ ಬುರುಡೆಯೂ ಲಭ್ಯವಾಗಿವೆ. ಇವೆಲ್ಲವೂ ಕಳೆದ ವರ್ಷವೇ ಸಿಕ್ಕಿವೆ, ಸದ್ಯ ಇದರ ಫೋಟೋಗಳು ಬಹಿರಂಗಗೊಂಡಿವೆ. ಸದ್ಯ ಈ ವಿಮಾನ ನಿಲ್ದಾಣ ಇರುವಲ್ಲಿ ಹಲವಾರು ವರ್ಷಗಳ ಹಿಂದೆ ಪ್ರಾಣಿಗಳನ್ನು ಕೂಡಿಡಲಾಗುತ್ತಿತ್ತು ಎಂಬ ಮಾತುಗಳು ಕೇಳಿ ಬಂದಿವೆ. ಅಲ್ಲದೇ ಈ ಮೂಳೆಗಳು ಸುಮಾರು ಹದಿನೈದು ಸಾವಿರ ಹಳೆಯದೆನ್ನಲಾಗಿದೆ. ವಿಶಾಲವಾದ ದೇಹ ಹೊಂದಿದ್ದ ಬೃಹದ್ಗಜಗಳು ಈಗ ಅಳಿದು ಹೋಗಿವೆ.

ಮೆಕ್ಸಿಕೋದ ಫೆಲಿಪೆ ಏಂಜಲೀಸ್ ಏರ್‌ಪೋರ್ಟ್‌ ಬಳಿ ಕೊಲಂಬಿಯಾ ಜಾತಿಯ ಬೃಹದ್ಗಜಗಳ ತಲೆ ಬುರುಡೆ ಹಾಗೂ ಮೂಳೆಗಳು ಸಿಕ್ಕಿವೆ. ಲಭ್ಯವಾದ ಮೂಲೆಗಳ ಪ್ರಕಾರ ಈ ಪ್ರಾಣಿ ಸುಮಾರು 20,000 ಪೌಂಡ್ ತೂಕವಿತ್ತು ಎಂದು ಅಂದಾಜಿಸಲಾಗಿದೆ. ಅಲ್ಲದೇ ಇವು ಹನ್ನೆರಡರಿಂದ ಹದಿನೈದು ವರ್ಷ ಹಳೆಯದ್ದೆನ್ನಲಾಗಿದೆ.
undefined
ಈ ಕೊಲಂಬಿಯಾ ಜಾತಿಯ ಬೃಹದ್ಗಜದ ದಂತ ಹದಿನಾರು ಅಡಿ ಉದ್ದವಿದೆ. ಫೋಟೋಗಳಲ್ಲಿ ತುಂಬಾ ಎಚ್ಚರಿಕೆಯಿಂದ ಇದನ್ನು ಭೂಮಿಯೊಳಗಿಂದ ಮೇಲೆತ್ತುತ್ತಿರುವುದನ್ನು ನೋಡಬಹುದಾಗಿದೆ.
undefined
ಸದ್ಯ ಈ ಬೃಹದ್ಗಜಗಳು ಅಳಿದು ಹೋಗಿವೆ. ಇದು ಸುಮಾರು 65 ವರ್ಷ ಬದುಕುತ್ತಿತ್ತು. ಹದಿನೈದು ಅಡಿ ಎತ್ತರದ ಈ ಪ್ರಾಣಿಗಳ ಮೇಲೆ ಕಡಿಮೆ ರೋಮವಿರುತ್ತಿತ್ತು. ಅಲ್ಲದೇ ಇದು ಭಾರೀ ತೂಕ ಹೊಂದಿರುತ್ತಿತ್ತು.
undefined
ಸೈಟ್‌ನಲ್ಲಿ ಸಿಕ್ಕ ಬೃಹದ್ಗಜದ ದಂತ. ಇದರೊಂದಿಗೆ ಹಲವಾರು ಮೂಳೆಗಳೂ ಸಿಕ್ಕಿವೆ.
undefined
ಈ ಮೂಳೆಗಳು ಸಾತಾ ಲೂಸಿಯಾ ನಗರದ ಬಳಿ ಸಿಕ್ಕಿವೆ. ಕಳೆದ ವರ್ಷವೇ ಸಿಕ್ಕ ಮೂಳೆಗಳ ಫೋಟೋ ಈಗ ಬಹಿರಂಗಗೊಂಡಿವೆ.
undefined
ಇಲ್ಲಿ ಎರಡು ಗುಹೆಗಳೂ ಕಂಡು ಬಂದಿವೆ. ಹದಿನೈದು ವರ್ಷ ಇಂದಿನ ಈ ಗುಹೆಗಳಲ್ಲಿ ಬೃಹದ್ಗಜಗಳನ್ನು ಬಂಧಿಸಿ ಜನರು ಹಿಂಸಿಸುತ್ತಿದ್ದರೆನ್ನಲಾಗಿದೆ.
undefined
ಈ ವಿಶಾಲ ದಂತಗಳನ್ನು ಕಂಡು ಜನರೂ ಅಚ್ಚರಿಗೀಡಾಗಿದ್ದಾರೆ.
undefined
ಈ ಪ್ರಾಣಿಗಳು ಸಸ್ಯಾಹಾರಿಗಾಳಗಿದ್ದವೆನ್ನಲಾಗಿದೆ. ಇನ್ನು ವಿಜ್ಞಾನಿಗಳ ಅನ್ವಯ ಒಂದೇ ಸ್ಥಳದಲ್ಲಿ ಇಷ್ಟು ಪ್ರಮಾಣದ ಮೂಳೆಗಳು ಸಿಕ್ಕಿವೆ ಎಂದರೆ, ಇದು ಅವುಗಳನ್ನು ಇಲ್ಲಿ ಬೇಟೆ ಮಾಡಲಾಗುತ್ತಿತ್ತು ಎಂಬುವುದಕ್ಕೆ ಸಾಕ್ಷಿ ಎಂದಿದ್ದಾರೆ.
undefined
ಈ ಗುಂಡಿ ಬರೋಬ್ಬರಿ ಆರು ಅಡಿ ಆಳವಿದೆ.
undefined
ಎಲ್ಲಕ್ಕಿಂತ ಅಚ್ಚರಿಯ ವಿಚಾರವೆಂದರೆ ಈ ಸ್ಥಳದಲ್ಲಿ ಮಾನವನ ತಲೆ ಬುರುಡೆಯೂ ಸಿಕ್ಕಿವೆ. ಅಲ್ಲದೇ ನಾಯಿ ಮೊದಲಾದ ಹಲವಾರು ಪ್ರಾಣಿಗಳ ಮೂಳೆಗಳೂ ಸಿಕ್ಕಿವೆ.
undefined
click me!