ಕೊರೋನಾ ಮಧ್ಯೆ ಭೀಕರ ಪ್ರವಾಹ: ಎಲ್ಲವೂ ನಾಶ, ಇನ್ನೇನೂ ಉಳಿದಿಲ್ಲ: ಬೆಚ್ಚಿ ಬೀಳಿಸಿದೆ ದೃಶ್ಯ!
First Published | Jul 10, 2020, 1:27 PM ISTವಿಶ್ವಾದ್ಯಂತ ಕೊರೋನಾ ಮಹಾಮಾರಿ ಜನರನ್ನು ಇನ್ನಿಲ್ಲದಂತೆ ನಲುಗಿಸಿದೆ. ಹೀಗಿರುವಾಗ ಈ ಮಹಾಮಾರಿ ಬೆನ್ನಲ್ಲೇ ಸುರಿದ ಭೀಕರ ಮಳೆ, ಭೂಕುಸಿತ ಹಾಗೂ ಪ್ರವಾಹದಿಂದ ಜಪಾನ್‌ನ ದ್ವೀಪಗಳ ಸ್ವರೂಪವೇ ಬದಲಾಗಿದೆ. ಎಲ್ಲಿ ನೋಡಿದರಲ್ಲಿ ಕುಸಿದ ಭೂಮಿ, ಕಟ್ಟಡ, ರಸ್ತೆ, ಕೊಚ್ಚಿ ಹೋದ ಮನೆ ಹಾಗೂ ವಾಹನಗಳ ದೃಶ್ಯ ನೋಡುಗರನ್ನು ಬೆಚ್ಚಿ ಬೀಳಿಸಿದೆ. ಜಪಾನ್‌ನ ನೈರುತ್ಯ ದ್ವೀಪ ಕ್ಯುಶುನಲ್ಲಿ ಈ ಭೀಕರ ದುರಂತ ಸಂಭವಿಸಿದ್ದು, ಪ್ರವಾಹ ಮತ್ತು ಭೂಕುಸಿತದಲ್ಲಿ ಕನಿಷ್ಠ 60 ಜನರು ಸಾವನ್ನಪ್ಪಿದ್ದಾರೆ. ನದಿಗಳು ತುಂಬಿ ಹರಿಯುತ್ತಿದ್ದು, ಮಳೆ ತೀವ್ರಗೊಂಡರರೆ ಜಪಾನ್ ಸ್ಥಿತಿ ಮತ್ತಷ್ಟು ಹದಗೆಡುವುದರಲ್ಲಿ ಅನುಮಾನವಿಲ್ಲ. ಇನ್ನು ಕೊರೋನಾ ವಿಚಾರದಲ್ಲಿ ಜಪಾನ್ ಸ್ಥಿತಿ ಕೊಂಚ ನಿಯಂತ್ರಣದಲ್ಲಿದೆ. ದೇಶದಲ್ಲಿ ಒಟ್ಟು 20,174 ಜನರಿಗೆ ಈ ರೋಗ ಪತ್ತೆಯಾಗಿದೆ. 17,331 ಮಂದಿ ಗುಣಮುಖರಾಗಿದ್ದು, 980 ಮಂದಿ ಸಾವನ್ನಪ್ಪಿದ್ದಾರೆ.