ಆರಂಭದಲ್ಲಿ ರಷ್ಯಾದ ಲಸಿಕೆ ಯಶಸ್ವಿಯಾಗಿತ್ತು ಎಂದು ಹೇಳಿದ್ದರೂ ಅಧಿಕೃತವಾಗಿ ಯಾವವಿಜ್ಞಾನಿಗಳನ್ನು ಇದನ್ನು ಸಾಬೀತು ಮಾಡಿಲ್ಲ.
ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಪುಟಿನ್ ಉಚಿತವಾಗಿ ಲಸಿಕೆ ಕೊಡುವ ಮಾತುಗಳನ್ನಾಡಿದ್ದಾರೆ.
ಇತಿಹಾಸ ಎಂಬಂತೆ ಜನರಲ್ ಅಸೆಂಬ್ಲಿ ಸಹ ವರ್ಕ್ ಫ್ರಾಂ ಹೋಮ್ ಮಾಡಿತ್ತು.
ಅಮೆರಿಕದ ಸಿಬ್ಬಂದಿಗೆ ಉಚಿತವಾಗಿ ಲಸಿಕೆ ನೀಡಲು ರಷ್ಯಾ ಸಿದ್ಧವಿದೆ ಎಂದು ಪುಟಿನ್ ಘೋಷಣೆ ಮಾಡಿದ್ದಾರೆ.
ಪುಟಿನ್ ಮಗಳು ಸಹ ಲಸಿಕೆ ಪಡೆದುಕೊಂಡು ಟ್ರಯಲ್ ಗೆ ಒಳಗಾಗಿದ್ದರು ಎಂದು ವರದಿಯಾಗಿತ್ತು.
ಪುಟಿನ್ ಮಾತಿಗೆ ಧನ್ಯವಾದ ಸಲ್ಲಿಸಿರುವ ಯುಎನ್ ವಕ್ತಾರ ಸ್ಟೆಪನ್ನೆ ದುಜ್ರಿಕ್ ರಷ್ಯಾ ಅಧ್ಯಕ್ಷರು ಇಟ್ಟಿರುವ ಆಫರ್ ಗೆ ಧನ್ಯವಾದ, ನಮ್ಮ ವೈದ್ಯಕೀಯ ಪರಿಶೀಲನೆ ನಂತರ ಮುಂದಿನ ಮಾತು ಹೇಳಬಹುದು ಎಂದಿದ್ದಾರೆ.
ಜೀನಿವಾದಲ್ಲಿರುವ ಯುಎಸ್ ಮೆಡಿಕಲ್ ಏಜೆನ್ಸಿಯ ವಕ್ತಾರ ಡಾ. ಮಾರ್ಗರೇಟ್ ಈ ಬಗ್ಗೆ ಯಾವುದೆ ಕಮೆಂಟ್ ನೀಡಿಲ್ಲ.
ವಿಶ್ವ ಆರೋಗ್ಯ ಸಂಸ್ಥೆಯ ಮುಂದೆ ಹೇಳಿಕೆ ನೀಡಿರುವ ರಷ್ಯಾ Sputnik V ಲಸಿಕೆ ಸುರಕ್ಷಿತ ಮತ್ತು ಪರಿಣಾಮಕಾರಿ ಎಂದಿದೆ.