ಇರಾನ್ ಯುದ್ಧದಲ್ಲಿ ಕಂಗಾಲಾದ ಪಾಕಿಸ್ತಾನ, ಪೆಟ್ರೋಲ್ ಬೆಲೆ ಶೇಕಡಾ 200ರಷ್ಟು ಹೆಚ್ಚಳ

Published : Mar 23, 2026, 03:32 PM IST

ಇರಾನ್ ಯುದ್ಧದಲ್ಲಿ ಕಂಗಾಲಾದ ಪಾಕಿಸ್ತಾನ, ಪೆಟ್ರೋಲ್ ಬೆಲೆ ಶೇಕಡಾ 200ರಷ್ಟು ಹೆಚ್ಚಳ, ಭಾರತದಲ್ಲಿ 2 ರೂಪಾಯಿ ಏರಿಕೆ ಮಾಡಲಾಗಿದೆ. ಆದರೆ ಪಾಕಿಸ್ತಾನದಲ್ಲಿ ಬರೋಬ್ಬರಿ 200 ಪರ್ಸೆಂಟ್ ಏರಿಕೆಯಾಗಿದೆ.

PREV
15
ಭಾರತದಲ್ಲಿ 2 ರೂ ಏರಿಕೆ, ಪಾಕಿಸ್ತಾನದಲ್ಲಿ 200 ಪರ್ಸೆಂಟ್

ಇರಾನ್ ಹಾಗೂ ಇಸ್ರೇಲ್ ಯುದ್ದದಿಂದ ಹೊರ್ಮುಜ್ ಜಲಸಂಧಿ ಮೂಲಕ ಸರಕು ಸಾಗಾಣೆ ಹಡಗುಗಳು ಸಾಗುತ್ತಿಲ್ಲ. ಇದರ ಪರಿಣಾಮ ಗ್ಯಾಸ್, ತೈಲ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಜೊತೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ. ಹೀಗಾಗಿ ಪ್ರತಿ ದೇಶಗಳು ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ಏರಿಕೆ ಮಾಡುತ್ತಿದೆ. ಭಾರತ ಇತ್ತೀಚೆಗೆ ಪ್ರೀಮಿಯಂ ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ 2 ರೂಪಾಯಿ ಏರಿಕೆ ಮಾಡಿತ್ತು. ಇದೀಗ ಪಾಕಿಸ್ತಾನದ ಬೆಲೆ ಏರಿಕೆಗೆ ಜನರು ಕಂಗಾಲಾಗಿದ್ದಾರೆ.

25
ಪಾಕಿಸ್ತಾನದಲ್ಲಿ ಪೆಟ್ರೋಲ್ ಬೆಲೆ 321.17 ರೂಪಾಯಿ

ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಪ್ ಸೇರಿದಂತೆ ಉನ್ನತ ಮಟ್ಟದ ನಿಯೋಗ ಇಂದು ಸಭೆ ಸೇರಿ ಬೆಲೆ ಏರಿಕೆಗೆ ಅನುಮೋದನೆ ನೀಡಿದೆ. ತಕ್ಷಣದಿಂದಲೇ ಪರಿಷ್ಕೃತ ಬೆಲೆ ಜಾರಿಗೆ ಬಂದಿದೆ. ಇದರೊಂದಿಗೆ ಪಾಕಿಸ್ತಾನದಲ್ಲಿ ಒಂದು ಲೀಟರ್ ಪ್ರೀಮಿಯಂ ಪೆಟ್ರೋಲ್ ಬೆಲೆ PKR 266.17 ರೂಪಾಯಿಂದ ಇದೀಗ PKR 321.17 ರೂಪಾಯಿಗೆ ಏರಿಕೆಯಾಗಿದೆ.

35
ಡೀಸೆಲ್ ಬೆಲೆ 335.86 ರೂಪಾಯಿಗೆ ಏರಿಕೆ

ಬೆಲೆ ಏರಿಕೆಯಿಂದ ಪ್ರೀಮಿಯಂ ಡೀಸೆಲ್ ಬೆಲೆ ಪಾಕಿಸ್ತಾನದಲ್ಲಿ ಒಂದು ಲೀಟರ್‌ಗೆ PKR 335.86 ರೂಪಾಯಿ ಆಗಿದೆ. PKR 280.86 ರೂಪಾಯಿ ಇದ್ದ ಡೀಸೆಲ್ ಇದೀಗ ದುಬಾರಿಯಾಗಿದೆ. ಪ್ರಿಮಿಯಂ ಪೆಟ್ರೋಲ್ ಹಾಗೂ ಡೀಸೆಲ್ ಎರಡೂ ಬೆಲೆ ಹೆಚ್ಚಾಗಿದೆ.ಇದು ಲಕ್ಷುರಿ ವಾಹನ ಸೇರಿದಂತೆ ಹೈ ಒಕ್ಟೇನ್ ಪೆಟ್ರೋಲಿಯಂ ಆಗಿದೆ. ಜನಸಾಮಾನ್ಯರು ವಾಹನಗಳಿಗೆ ಬಳಸುವ ಪೆಟ್ರೋಲ್ ಡೀಸೆಲ್ ಅಲ್ಲ.

45
ಮಾರ್ಚ್ 6 ರಂದು ನಾರ್ಮಲ್ ಪೆಟ್ರೋಲ್ ಬೆಲೆ 55 ರೂಗೆ ಏರಿಸಿದ್ದ ಪಾಕಿಸ್ತಾನ

ಮಾರ್ಚ್ 6 ರಂದು ಪಾಕಿಸ್ತಾನದಲ್ಲಿ ಸಾಮಾನ್ಯ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಮಾಡಿದೆ. ಯುದ್ದದ ಬೆನ್ನಲ್ಲೇ ಪಾಕಿಸ್ತಾನದಲ್ಲಿ ಸಾಮಾನ್ಯ ಪೆಟ್ರೋಲ್ ಬೆಲೆ ಲೀಟರ್ ಮೇಲೆ PKR 55 ರೂಪಾಯಿ ಏರಿಕೆ ಮಾಡಿತ್ತು.

55
ವಿಮಾನ ಟಿಕೆಟ್ ದರ ಹೆಚ್ಚಿಸಿದ ಪಾಕಿಸ್ತಾನ

ಪಾಕಿಸ್ತಾನದಲ್ಲಿ ತೈಲ ಕೊರತೆ, ಬೆಲೆ ಏರಿಕೆಯಿಂದ ಈಗಾಗಲೇ ವಿಮಾನಯಾನ ಟಿಕೆಟ್ ದರಗಳು ಏರಿಕೆಯಾಗಿದೆ. ಪಾಕಿಸ್ತಾನದಲ್ಲಿ ವಿಮಾನ ಪ್ರಯಾಣ ದುಬಾರಿಯಾಗಿದೆ. ಇದೀಗ ಬೆಲೆ ಏರಿಕೆಯಿಂದ ಮತ್ತಷ್ಟು ದುಬಾರಿಯಾಗಿದೆ. ವಿಮಾನ ಟಿಕೆಟ್ ದರ ಏರಿಕೆ ಕುರಿತು ಪಾಕಿಸ್ತಾನ ಮಾರ್ಚ್ 10 ರಂದು ಆದೇಶ ಹೊರಡಿಸಿತ್ತು.

ವಿಮಾನ ಟಿಕೆಟ್ ದರ ಹೆಚ್ಚಿಸಿದ ಪಾಕಿಸ್ತಾನ

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories