ನೊಣ ಹೊಡೆಯುವ ಧಾವಂತದಲ್ಲಿ ಮನೆ ಕಳ್ಕೊಂಡ: ಭಾರೀ ಸ್ಫೋಟ!

Published : Sep 07, 2020, 05:26 PM IST

ದುರಂತ ಯಾವಾಗ ಬೇಕಾದರೂ ಸಂಭವಿಸುತ್ತೆ, ಆದರೆ ಪುಟ್ಟ ನೊಣವೊಂದು ವ್ಯಕ್ತಿಯನ್ನು ಮನೆ ಇಲ್ಲದಂತೆ ಮಾಡಲು ಸಾಧ್ಯವಾ? ಬಹುಶಃ ಇದು ಸಿನಿಮಾದಲ್ಲಷಷ್ಟೇ ಸಾಧ್ಯ ಎಂದು ನಾವು ಹೇಳಬಹುದು. ಆದರೀಗ ನೊಣವೊಂದರಿಂದ ಫ್ರಾನ್ಸ್‌ನ ವ್ಯಕ್ತಿಯೊಬ್ಬ ಮನೆ ಇಲ್ಲದೆ ನಿರಾಶ್ರಿತನಾಗಿದ್ದು, ಸದ್ಯ ಆತ ಉಳಿದುಕೊಳ್ಳಲು ತನ್ನ ಗೆಳೆಯನ ಮನೆಗೆ ಶಿಫ್ಟ್‌ ಆಗಿದ್ದಾನೆ. ಈ ಪುಟ್ಟ ಜೀವಿ ಆತನನ್ನು ಅದೆಷ್ಟು ಸತಾಯಿಸಿದೆ ಎಂದರೆ, ಅದನ್ನು ಹೊಡೆಯಲಲು ಆತ ತನ್ನ ಮನೆಯನ್ನೇ ಸ್ಫೋಟಿಸಿದ್ದಾನೆ. ಈ ಸ್ಫೋಟದ ತೀವ್ರತೆ ಅದೆಷ್ಟಿತ್ತೆಂದರೆ ಆ ವ್ಯಕ್ತಿಯ ಅಡುಗೆ ಮನೆ ಹಾಗೂ ಛಾವಣಿ ಸಂಪೂರ್ಣ ಧ್ವಂಸಗೊಂಡಿದೆ.

PREV
17
ನೊಣ ಹೊಡೆಯುವ ಧಾವಂತದಲ್ಲಿ ಮನೆ ಕಳ್ಕೊಂಡ: ಭಾರೀ ಸ್ಫೋಟ!

ಈ ಘಟನೆ ಫ್ರಾನ್ಸ್‌ನ ಡೋರ್‌ಡೋಗ್ನೆಯಲ್ಲಿ ನಡೆದಿದೆ. ಪುಟ್ಟ ನೊಣವೊಂದು ವ್ಯಕ್ತಿಯನ್ನು ಅದೆಷ್ಟು ಸತಾಯಿಸಿದೆ ಎಂದರೆ ಆತ ಅದನ್ನು ಓಡಿಸಲು ತನ್ನ ಮನೆಯನ್ನೇ ಸ್ಫೋಟಿಸಿದ್ದಾನೆ.

27

ರಾತ್ರಿ ಆ ವ್ಯಕ್ತಿ ಮಾಡಲು ಮುಂದಾದಾಗ ಆತನ ಕೋಣೆಗೆ ಪುಟ್ಟ ನೊಣ ಎಂಟ್ರಿ ಕೊಟ್ಟಿದೆ. 

37

ಪದೇ ಪದೇ ಈ ನೊಣ ವ್ಯಕ್ತಿಯ ಮೂಗಿನ ಮೇಲೆ ಕುಳಿಕೊಳ್ಳಲಾರಂಭಿಸಿದೆ. ಆತ ಅದನ್ನು ಓಡಿಸಲು ಅದೆಷ್ಟೇ ಯತ್ನಿಸಿದರೂ ಪ್ರಯೋಜನವಾಗಿಲ್ಲ. ನೊಣ ಆತನ ಬೆನ್ನು ಬಿಟ್ಟಿಲ್ಲ. 

47

ಆತ ಆ ನೊಣವನ್ನು ಓಡಿಸುವ ಧಾವಂತದಲ್ಲಿ 80 ವರ್ಷದ ವ್ಯಕ್ತಿ ಎಲೆಕ್ಟ್ರಿಕ್ ಬ್ಯಾಟ್ ತೆಗೆದುಕೊಂಡಿದ್ದಾನೆ. 

57

ಬ್ಯಾಟ್ ಮೂಲಕ ನೊಣವನ್ನು ಓಡಿಸುತ್ತಾ ಆತ ಅಡುಗೆ ಮನೆಗೆ ಹೋಗಿದ್ದಾನೆ. ಆದರೆ ಈ ವೇಳೆ ಅಲ್ಲಿ ಗ್ಯಾಸ್ ಲೀಕ್ ಆಗುತ್ತಿದೆ ಎಂಬುವುದನ್ನು ಮರೆತಿದ್ದಾನೆ. 

67

ಹೀಗಿರುವಾಗ ಈ ಎಲೆಕ್ಟ್ರಿಕ್ ಬ್ಯಾಟ್‌ ಹಾಗೂ ಗ್ಯಾಸ್ ನಡುವಿನ ರಿಯಾಕ್ಷನ್‌ನಿಂದ ಬೆಂಕಿ ಹೊತ್ತಿಕೊಂಡಿದೆ. ಇದರಿಂದಾಗಿ ಆ ವ್ಯಕ್ತಿಯ ಅಡುಗೆ ಮನೆ ಉಡೀಸ್ ಆಗಿದೆ.

77

 ಇಷ್ಟೇ ಅಲ್ಲದೇ ಆ ವ್ಯಕ್ತಿಯ ಕೈ ಕೂಡಾ ಸುಟ್ಟು ಹೋಗಿದೆ. 

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories