ಎಲ್ಲ ಕಡೆ ಲಭ್ಯವಿರುವ ಮೌತ್ ವಾಶ್ ಮೂವತ್ತು ಸೆಕೆಂಡುಗಳಲ್ಲಿ ಕೊರೋನಾ ನಾಶಮಾಡಲಿದೆ ಎಂದು ಅಧ್ಯಯನ ಹೇಳಿದೆ. ಈ ಹಿಂದೆಯೂ ಸಂಶೊಧಕರು ಇದೆ ಮಾತನ್ನು ಹೇಳಿದ್ದರು.
undefined
ಯುಕೆ ಯ ಕಾರ್ಡಿಫ್ ವಿಶ್ವವಿದ್ಯಾನಿಲಯದ ಈ ಬಾರಿ ನಡೆಸಿದ ಅಧ್ಯಯನ ಈ ಮಾತು ಹೇಳಿದ್ದು ಕೆಲವು ಮೌತ್‌ವಾಶ್‌ಗಳು ಲಾಲಾರಸದಲ್ಲಿ ಕರೋನವೈರಸ್ ಅನ್ನು ಕೊಲ್ಲಲು ಸಹಾಯ ಮಾಡುತ್ತದೆ ಎಂದಿದೆ.
undefined
ಮೌತ್‌ವಾಶ್‌ನ ಬಳಕೆಯು ಲಾಲಾರಸದಲ್ಲಿ ವೈರಸ್‌ನ್ನು ಕೊಲ್ಲಲು ಸಹಾಯ ಮಾಡುತ್ತದೆ ಹೌದಾದರೂ ಕೊರೋನಾಕ್ಕೆ ಚಿಕಿತ್ಸೆ ನೀಡಲು ಬಳಸಬಹುದು ಎಂಬುದನ್ನು ಖಾತ್ರಿಪಡಿಸಲು ಸಾಧ್ಯವಿಲ್ಲ.
undefined
ಮೌತ್ ವಾಶ್ ಶ್ವಾಸಕೋಶವನ್ನು ತಲುಪದ ಕಾರಣ ವೈರಸ್ ನಾಶ ಅಸಾಧ್ಯ.
undefined
ಕನಿಷ್ಠ 0.07 ಶೇಕಡಾ ಸೆಟಿಪಿರಿಡಿನಿಯಮ್ ಕ್ಲೋರೈಡ್ ಕೊರೋನಾ ಸಾಯಿಸಿದ್ದನ್ನು ದೃಢಪಡಿಸಿದೆ.
undefined
ಬಾಯಿಯ ದುರ್ಗಂಧ ಹೋಗಲಾಡಿಸಲು, ಒಸಡಿನ ಸಮಸ್ಯೆ ನಿವಾರಣೆಗೆ ಕಂಡುಕೊಂಡಿರುವ ಮೌತ್ ವಾಶ್ ಗಳು ಬಾಯಲ್ಲಿ ಕೊರೋನಾ ಇದ್ದರೆ ನಾಶ ಮಾಡುತ್ತವೆ ಎಂಬುದನ್ನು ಸಂಶೋಧಕರು ಹೇಳಿದ್ದಾರೆ.
undefined
ಆರಂಭಿಕ ಫಲಿತಾಂಶಗಳು ಈ ಮಾತಿಗೆ ಪುಷ್ಠಿ ನೀಡಿವೆ ಎಂದು ಸಂಶೋಧಕ ಡೇವಿಡ್ ಥಾಮಸ್ ಹೇಳಿದ್ದಾರೆ.
undefined
ಸಾನಿಟೈಸರ್ ಬಳಕೆ ಕೈಯಲ್ಲಿರುವ ಕೊರೋನಾ ಸಾಯಿಸಿದರೆ ಮೌತ್ ವಾಶ್ ಬಾಯಿಯ ಒಳಗೆ ಸೇರಿರುವ ಕೊರೋನಾ ಸಾಯಿಸಬಲ್ಲದು ಎಂಬುದು ಈ ಅಧ್ಯಯನದ ಸಾರಾಂಶ.
undefined