ಮನೆಯಲ್ಲಿದ್ದ ಭರ್ಜರಿ ಬಾಡೂಟದ ಪಾರ್ಟಿಗೆ ಕೋಳಿಗಳ ತಲೆಗಳನ್ನು ಕತ್ತರಿಸಿದ ಮಾಲೀಕ ಬಂಧುಗಳಿಗೆಲ್ಲಾ ಊಟ ಮಾಡಿಸಿ ಕಳಿಸಿದ್ದನು. ತಾನೂ ಊಟ ಮಾಡಿ ಮನೆಯ ಹೊರಗೆ ಬಂದು ನೋಡಿದರೆ ತಲೆಯನ್ನು ಕತ್ತರಿಸಿದ ಕೋಳಿಯೊಂದು ಬದುಕುಳಿದು ನಿಧಾನವಾಗಿ ಓಡಾಡುತ್ತಿದ್ದುದು ಕಂಡಿದೆ. ಇದನ್ನು ನೋಡಿದ ಮಾಲೀಕ ಕೋಳಿ ಮೇಲೆ ಕರುಣೆ ತೋರಿಸಿ ಆರೈಕೆ ಮಾಡಿ ಸಾಕಿದ್ದಾನೆ. ಈ ಕೋಳಿ ತಲೆಯಿಲ್ಲದೇ ಬರೋಬ್ಬರಿ 18 ತಿಂಗಳ ಕಾಲ ಬದುಕಿದ್ದೂ ಅಲ್ಲದೇ ತನ್ನ ಮಾಲೀಕನನ್ನು ಶ್ರೀಮಂತನನ್ನಾಗಿ ಮಾಡಿ ಉಸಿರು ಚೆಲ್ಲಿದೆ. ಇದರ ಗೌರವಾರ್ಥವಾಗಿ ಈಗಲೂ ರೈತನ ಕುಟುಂಬದಿಂದ ಪ್ರತಿವರ್ಷ 'ಮೈಕ್ ದಿ ಹೆಡ್‌ಲೆಸ್ ಚಿಕನ್ ಡೇ'(Mike the Headless Chicken Day) ಆಚರಿಸಲಾಗುತ್ತದೆ.
ಹೌದು, ಈ ತಲೆಯಿಲ್ಲದ ಕೋಳಿ ಬದುಕಿದ್ದು ಅಮೇರಿಕಾದಲ್ಲಿ. ಈ ಕೋಳಿ ಬದುಕಿದ ಕಾಲಾವಧಿಯೂ ಕೂಡ 79 ವರ್ಷಗಳ ಹಿಂದಿನ (ಅಂದರೆ 1945ರಿಂದ 1947ರ ಮಾರ್ಚ್ ಕಾಲಾವಧಿ) ಅವಧಿಯಾಗಿದೆ. ಈ ಕೋಳಿಗೆ ವಿಶೇಷವಾಗಿ ಮೈಕ್ ದಿ ಹೆಡ್‌ಲೆಸ್ ಚಿಕನ್ ಎಂದು ಹೆಸರಿಡಲಾಗಿದೆ. ಅಂದಿನ ಕಾಲದಲ್ಲಿ ಕೋಳಿಯ ಕುರಿತಾಗಿ ಹಲವು ಲೇಖನಗಳನ್ನು ಕೂಡ ಪ್ರಕಟಿಸಲಾಗಿದೆ. ಈ ಅಮೇರಿಕಾದ ಕೋಳಿಗೆ 'ಅಕಾ ಮಿರಾಕಲ್ ಮೈಕ್' ಎಂದು ಕರೆಯಲಾಗಿದೆ. ಇದು 1945ರಲ್ಲಿ ಬಾಡೂಟಕ್ಕೆ ತಲೆ ಕತ್ತರಿಸಿದ ನಂತರವೂ 18 ತಿಂಗಳ ಕಾಲ ಬದುಕುಳಿದು ತನ್ನ ಮಾಲೀಕನ್ನು ಶ್ರೀಮಂತನನ್ನಾಗಿ ಮಾಡಿದ ನೈಜ ಘಟನೆಯಾಗಿದೆ.
ಅಮೇರಿಕಾದಲ್ಲಿ 1945ರ ಏಪ್ರಿಲ್ 20ರಂದು ಕೊಲೊರಾಡೋದ ಫ್ರೂಟಾದಲ್ಲಿ ಜನಿಸಿದ ಕೋಳಿ ಮೈಕ್, ತನ್ನ ಮಾಲೀಕ ರೈತ ಲಾಯ್ಡ್ ಓಲ್ಸೆನ್ ಅವರ ಕುಟುಂಬಕ್ಕೆ ಭೋಜನವಾಗಬೇಕಿತ್ತು. ಆದಾಗ್ಯೂ, ರೈತ ಓಲ್ಸೆನ್ ತನ್ನ ಕೋಳಿ ಮೈಕ್‌ನ ಶಿರಚ್ಛೇದ ಮಾಡಲು ಪ್ರಯತ್ನಿಸಿದಾಗ, ಅದು ಅರ್ಧಭಾಗ ಮಾತ್ರ ಸೀಳಿಕೊಂಡಿತ್ತು. ಒಂದು ಕಿವಿ ಮತ್ತು ಮೆದುಳಿನ ಕಾಂಡದ ಹೆಚ್ಚಿನ ಭಾಗವನ್ನು ತುಂಡಾಗದೇ ತಲೆಯಲ್ಲಿಯೇ ಉಳೊಇದುಕೊಂಡಿತು. ಆದರೆ, ಕೋಳಿಯ ಕೊಕ್ಕು, ಕಣ್ಣುಗಳು, ಜುಟ್ಟು ಎಲ್ಲವೂ ಬಹುತೇಕವಾಗಿ ತುಂಡಾಗಿ ಹೋಗಿತ್ತು. ಆದರೆ, ತನ್ನ ತಲೆಯನ್ನು ಕಳೆದುಕೊಂಡ ನಂತರವೂ ಕೋಳಿ ಮೈಕ್ ಚಿಕನ್ ತುಂಡರಿಸಿದ ಜಾಗದ ಪಕ್ಕದಲ್ಲಿ ಕಣ್ಣು ಕಾಣಿಸದಂತೆ ರಕ್ತ ಸಿಕ್ತವಾದ ಕತ್ತನ್ನು ಹೊಂದಿ ವಿಚಿತ್ರವಾಗಿ ನಡೆಯುತ್ತಿತ್ತು.
ಇನ್ನು ಮನೆಯಲ್ಲಿ ಎಲ್ಲರೂ ಭರ್ಜರಿ ಬಾಡೂಟ ಮಾಡಿದ ನಂತರ ಬಂದು ನೋಡಿದರೆ ಕೋಳಿ ಮೈಕ್ ಸಾಯದೇ ಬದುಕುಳಿದು ಓಡಾಡುತ್ತಿತ್ತು. ಇದನ್ನು ನೋಡಿ ಕನಿಕರ ತೋರಿಸಿದ ರೈತ ಓಲ್ಸೆನ್ ಅದಕ್ಕೆ ಹಾಲು ಮತ್ತು ಸಣ್ಣ ಕಾಳುಗಳನ್ನು ನೀರಿನ ಮಿಶ್ರಣದ ಮೂಲಕ ನೇರವಾಗಿ ತಿನ್ನಿಸಲು ಆರಂಭಿಸಿದನು. ಈ ಕೋಳಿ ಬದುಕಿದ್ದು ಆಶ್ಚರ್ಯವಾಗಿದ್ದರಿಂದ ಅದಕ್ಕೆ ಸಣ್ಣ ಹುಳುಗಳು, ಸಣ್ಣ ಕಾಳುಗಳನ್ನು ತಿನ್ನಿಸುತ್ತಾ ಜೋಪಾನ ಮಾಡಿದನು. ಆದರೆ, ಈ ಘಟನೆ ಸುತ್ತಲಿನ ನೋಡುಗರಿಗೆ ಮಾತ್ರ ಪರಮಾಶ್ಚರ್ಯ ಉಂಟುಮಾಡಿತ್ತು. ತಲೆಯಿಲ್ಲದ ಕೋಳಿ ಬದುಕಿದ್ದ ಸುದ್ದಿ ಕಾಡ್ಗಿಚ್ಚಿನಂತೆ ಹರಡಿ ಸಾವಿರಾರು ಜನರು ಕೋಳಿ ಜನರು ರೈತನ ಫಾರ್ಮ್‌ಗೆ ಬರಲಾರಂಭಿಸಿದರು.
ರೈತ ಅದನ್ನು ಪ್ರತಿನಿತ್ಯ ಜೋಪಾನವಾಗಿ ನೋಡಿಕೊಳ್ಳುತ್ತಾ ಜನರು ಮುಟ್ಟಿ ಘಾಸಿಗೊಳಿಸಿದರೆ ಅಪಾಯವಾಗು ಮುನ್ಸೂಚನೆ ಅರಿತು ಕೋಳಿಯನ್ನು ದೂರದಿಂದ ವೀಕ್ಷಣೆ ಮಾಡಲು ಪಾರದರ್ಶನ ಗಾಜಿನ ಪೆಟ್ಟಿಗೆ ವ್ಯವಸ್ಥೆ ಮಾಡಿದನು. ನಂತರವೂ ಜನರು ಕೋಳಿ ನೋಡಲು ಹೆಚ್ಚಾಗಿ ಆಗಮಿಸಿದ್ದು, ಕೆಲವರು ಪ್ರದರ್ಶನಕ್ಕೆ ಸಮಯ ನಿಗದಿ ಮಾಡುವಂತೆ ಹಾಗೂ ಅದಕ್ಕೆ ಹಣ ಪಡೆಯುವಂತೆ ಸಲಹೆ ನೀಡಿದರು. ಈ ಸಲಹೆ ಸ್ವೀಕರಿಸಿದ ರೈತ ಓಲ್ಸೆನ್ ತನ್ನ ಕೋಳಿ ಮೈಕ್ ಅನ್ನು ವಿಶೇಷ ಪ್ರದರ್ಶನಗಳಲ್ಲಿ ಪ್ರದರ್ಶಿಸಿ ಲಕ್ಷಾಂತರ ರೂ. ಹಣವನ್ನು ಗಳಿಸಿ ಶ್ರೀಮಂತನಾದನು.
ಜೊತೆಗೆ, ತಲೆ ಇಲ್ಲದ ಕೋಳಿ ಮೈಕ್‌ನ ವಿಶಿಷ್ಟ ಸ್ಥಿತಿಯು ರೈತ ಓಲ್ಸೆನ್‌ಗೆ ರಾಷ್ಟ್ರೀಯ ಖ್ಯಾತಿಯನ್ನು ತಂದುಕೊಟ್ಟಿತು. ಅಂದಿನ ಕಾಲದಲ್ಲಿಯೇ ಕೋಳಿಯಿಂದಾಗಿ ಟೈಮ್ ಮತ್ತು ಲೈಫ್ ನಿಯತಕಾಲಿಕೆಗಳಲ್ಲಿ ಕಾಣಿಸಿಕೊಂಡರು. ಇನ್ನು ಶೋ ಒಂದರಲ್ಲಿ ಕೋಳಿಗೆ ಆಹಾರ ಉಣಿಸುವ ಐ-ಡ್ರಾಪರ್ ಅನ್ನು ರೈತ ಕಳೆದುಕೊಂಡು ಬಂದಿದ್ದನು. ಆಗ ಕೋಳಿಗೆ ಆಹಾರ ನೀಡಲು ಬೇರೆ ವ್ಯವಸ್ಥೆ ಇಲ್ಲದೇ ಜೋಳದ ಕಾಳನ್ನು ನೇರವಾಗಿ ಕೈಯಿಂದ ಕೋಳಿಗ ಗಂಟಲಿಗೆ ಹಾಕಿದ್ದಾನೆ. ಆದರೆ, ಕೋಳಿಯ ಆಹಾರ ನಾಳದಲ್ಲಿ ಸಿಕ್ಕಿಕೊಂಡ ಕಾಳು ಉಸಿರಾಟದ ನಾಳಕ್ಕೂ ಹಾನಿಯುಂಟು ಮಾಡಿದೆ. ಆಗ ಕೋಳಿ ಉಸಿರಾಡಲು ಸಾಧ್ಯವಾಗಲೇ ಮಾಲೀಕನ ಮಡಿಲಲ್ಲಿ ಮಾರ್ಚ್ 1947ರಲ್ಲಿ ಸಾವನ್ನಪ್ಪುತ್ತದೆ. ಇನ್ನು ಈ ದಿನವನ್ನು ಅಮೇರಿಕಾದ ಫ್ರುಟಾದಲ್ಲಿ ಪ್ರತಿ ವರ್ಷ 'ಮೈಕ್ ದಿ ಹೆಡ್‌ಲೆಸ್ ಚಿಕನ್ ಡೇ' ಎಂದು ಆಚರಣೆ ಮಾಡಲಾಗುತ್ತದೆ.