ಮೆಟಾ ಸಿಇಒ ಮಾರ್ಕ್ ಜುಕರ್ಬರ್ಗ್ ಐರ್ಲೆಂಡ್ನಲ್ಲಿ 538 ಕೋಟಿ ರೂ. ಮೌಲ್ಯದ 19ನೇ ಶತಮಾನದ ಐತಿಹಾಸಿಕ ಸ್ಟ್ರಾಂಕಲ್ಲಿ ಕ್ಯಾಸಲ್ ಖರೀದಿಸಿದ್ದಾರೆ. 440 ಎಕರೆ ವಿಸ್ತೀರ್ಣದ ಈ ಅರಮನೆ ಡಬ್ಲಿನ್ನಲ್ಲಿರುವ ಮೆಟಾ ಕೇಂದ್ರ ಕಚೇರಿಗೆ ಹತ್ತಿರದಲ್ಲಿದೆ.
ಟೆಕ್ ಉದ್ಯಮಿ ಮಾರ್ಕ್ ಜುಕರ್ಬರ್ಗ್ ಅವರ ಆಸ್ತಿ ಪಟ್ಟಿಗೆ ಹೊಸ ಐತಿಹಾಸಿಕ ಅರಮನೆ ಸೇರ್ಪಡೆಯಾಗಿದೆ. ಮೆಟಾ ಸಿಇಒ ಮತ್ತು ಅವರ ಪತ್ನಿ ಪ್ರಿಸ್ಸಿಲ್ಲಾ ಚಾನ್ ಐರ್ಲೆಂಡ್ನ ಕೌಂಟಿ ವಾಟರ್ಫೋರ್ಡ್ನಲ್ಲಿ 19ನೇ ಶತಮಾನದ ಸ್ಟ್ರಾಂಕಲ್ಲಿ ಕ್ಯಾಸಲ್ (Strancally Castle) ಖರೀದಿಸಿದ್ದಾರೆ. ಸುಮಾರು 538 ಕೋಟಿ ರೂ. ಮೌಲ್ಯದ ಈ ಆಸ್ತಿ ಬಗ್ಗೆ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ಶುರುವಾಗಿದೆ.
26
440 ಎಕರೆ ಪ್ರದೇಶ
ಈ ಐತಿಹಾಸಿಕ ಆಸ್ತಿ ಐರ್ಲೆಂಡ್ನ ಕೌಂಟಿ ವಾಟರ್ಫೋರ್ಡ್ನಲ್ಲಿ ಬ್ಲ್ಯಾಕ್ವಾಟರ್ ನದಿ ದಡದಲ್ಲಿದೆ. ಸುಮಾರು 440 ಎಕರೆ ಪ್ರದೇಶದಲ್ಲಿ ಹರಡಿರುವ ಈ ಎಸ್ಟೇಟ್ನ ಪ್ರಮುಖ ಆಕರ್ಷಣೆ 3 ಅಂತಸ್ತಿನ ದೊಡ್ಡ ಅರಮನೆ. ಇದು ಸುಮಾರು 16,000 ಚದರ ಅಡಿ ವಿಸ್ತೀರ್ಣ ಹೊಂದಿದೆ. ಅರಮನೆ ಸುತ್ತಮುತ್ತ ಹಸಿರು ಜಾಗ, ಕಾಡು ಮತ್ತು ನದಿ ದಡದಲ್ಲಿ ಖಾಸಗಿ ಜೆಟ್ಟಿ ಇದೆ.
36
ಅರಮನೆ
ಮಾಹಿತಿ ಪ್ರಕಾರ, 1830ರ ಸುಮಾರಿಗೆ ಮಾಜಿ ಸಂಸದ ಜಾನ್ ಕೀಲಿ ಅವರಿಗಾಗಿ ಈ ಅರಮನೆ ನಿರ್ಮಿಸಲಾಗಿತ್ತು. ಇದು ಗೋಥಿಕ್ ರಿವೈವಲ್ ಶೈಲಿಯಲ್ಲಿದೆ. ಪ್ರಸಿದ್ಧ ವಾಸ್ತುಶಿಲ್ಪಿಗಳಾದ ಜೇಮ್ಸ್ ಮತ್ತು ಜಾರ್ಜ್ ರಿಚರ್ಡ್ ಪೇನ್ ಇದರ ವಿನ್ಯಾಸ ಮಾಡಿದ್ದರು. 2003ರಲ್ಲಿ ಇದರ ನವೀಕರಣ ಮಾಡಲಾಗಿತ್ತು. ಹಿಂದಿನ ಮಾಲೀಕರಾದ ಮೈಕೆಲ್ ಮತ್ತು ಜಿಯಾನ್ಕಾರ್ಲಾ ಅಲೆನ್-ಬಕ್ಲಿ ದೀರ್ಘಕಾಲದಿಂದ ಈ ಆಸ್ತಿಯನ್ನು ನಿರ್ವಹಣೆ ಮಾಡುತ್ತಿದ್ದರು.
ವರದಿಗಳ ಪ್ರಕಾರ, ಐರಿಶ್ ಪ್ರಾಪರ್ಟಿ ಪ್ರೈಸ್ ರಿಜಿಸ್ಟರ್ನಲ್ಲಿ ಈ ವ್ಯವಹಾರದ ಮೌಲ್ಯ 51.17 ಮಿಲಿಯನ್ ಯುರೋ, ಅಂದರೆ ಭಾರತೀಯ ರೂಪಾಯಿಯಲ್ಲಿ ಸುಮಾರು 538 ಕೋಟಿ ರೂ. ಆದರೆ ಈ ಮೌಲ್ಯ ಕೇವಲ ಅರಮನೆ ಮತ್ತು ಅದರ ಸುತ್ತಲಿನ 1 ಎಕರೆ ಜಾಗಕ್ಕೆ ಮಾತ್ರ. ಸಂಪೂರ್ಣ 440 ಎಕರೆ ಎಸ್ಟೇಟ್ ಖರೀದಿಯ ಒಟ್ಟು ಮೊತ್ತ ಬಹಿರಂಗವಾಗಿಲ್ಲ. ಹೀಗಾಗಿ ಒಟ್ಟು ಆಸ್ತಿಗೆ ಜುಕರ್ಬರ್ಗ್ ಖರ್ಚು ಮಾಡಿದ ಮೊತ್ತ ಇನ್ನೂ ಹೆಚ್ಚಿರಬಹುದು.
56
ಮೆಟಾದ 1,500ಕ್ಕೂ ಹೆಚ್ಚು ಉದ್ಯೋಗಿಗಳು
ಮೆಟಾ ಕಂಪನಿಯು ಐರ್ಲೆಂಡ್ ಜೊತೆ ದೀರ್ಘಕಾಲದ ವ್ಯಾಪಾರ ಸಂಬಂಧ ಹೊಂದಿದೆ. ಡಬ್ಲಿನ್ನಲ್ಲಿ ಕಂಪನಿಯ ಯುರೋಪಿಯನ್ ಕೇಂದ್ರ ಕಚೇರಿ ಇದೆ. ಈ ಅರಮನೆ ಆ ಕಚೇರಿಯಿಂದ ಸುಮಾರು 200 ಕಿ.ಮೀ ದೂರದಲ್ಲಿದೆ. ಐರ್ಲೆಂಡ್ನಲ್ಲಿ ಮೆಟಾದ 1,500ಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ.
66
ಐತಿಹಾಸಿಕ ಅರಮನೆ
ಈ ಐತಿಹಾಸಿಕ ಮನೆಯನ್ನು ಕಾಪಾಡಿಕೊಳ್ಳಲು ಜುಕರ್ಬರ್ಗ್ ಕುಟುಂಬ ಆಸಕ್ತಿ ಹೊಂದಿದೆ ಎಂದು ಅವರ ವಕ್ತಾರರು ತಿಳಿಸಿದ್ದಾರೆ. ಜುಕರ್ಬರ್ಗ್ ಮತ್ತು ಅವರ ಪತ್ನಿ ಅಮೆರಿಕದಲ್ಲೇ ವಾಸಿಸುತ್ತಾರೆ. ಆದರೆ ಐರ್ಲೆಂಡ್ಗೆ ಭೇಟಿ ನೀಡಿದಾಗ ಅವರು ಈ ಐತಿಹಾಸಿಕ ಅರಮನೆಯನ್ನು ಬಳಸಲಿದ್ದಾರೆ ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ