ಚೀನಾದಲ್ಲಿ ವರದಿಯಾದ ಶಾಕಿಂಗ್ ಘಟನೆ ಸದ್ಯ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿದೆ. ಇಲ್ಲೊಬ್ಬ ತಂದೆಗೆ ತನ್ನ ಹೆಂಡತಿ ತನಗೆ ಮಾಡಿರುವ ಮೋಸ ಅವಳಿ ಮಕ್ಕಳ ಡಿಎನ್‌ಎನಿಂದ ತಿಳಿದು ಬಂದಿದೆ.
ಈ ವ್ಯಕ್ತಿ ತನ್ನ ಮಕ್ಕಳ ಜನನ ಪ್ರಮಾಣ ಪತ್ರ ಮಾಡುವ ವೇಳೆ ವೈದ್ಯರ ಬಳಿ ಡಿಎನ್‌ಎ ಟೆಸ್ಟ್ ಕೂಡಾ ಮಾಡಲು ಹೇಳಿದ್ದಾರೆ.
ಆದರೆ ಎನಾಲಿಸ್ಟ್ ಆತನಿಗೆ ಮಕ್ಕಳ ಡಿಎನ್‌ಎ ವರದಿ ನೀಡಿದಾಗ ಆತ ಬೆಚ್ಚಿ ಬಿದ್ದಿದ್ದಾನೆ. ಈ ಮಕ್ಕಳ ತಂದೆ ಇಬ್ಬರಾಗಿದ್ದರು. ಒಂದು ಮಗುವಿನ ಡಿಎನ್‌ಎ ಆತನೊಂದಿಗೆ ಮ್ಯಾಚ್ ಆಗುತ್ತಿದ್ದರೆ, ಮತ್ತೊಂದು ಮಗುವಿನ ಡಿಎನ್‌ಎ ಮ್ಯಾಚ್ ಆಗುತ್ತಿರಲಿಲ್ಲ.
ಇನ್ನು ಡಿಎನ್‌ಎ ರಿಪೋಸರ್ಟ್ ನೋಡಿದ ವ್ಯಕ್ತಿ, ನನ್ನ ಹೆಂಡತಿ ಹೀಗೆ ಮೊಸ ಮಾಡುತ್ತಾಳೆಂದು ನಾನು ಕನಸಿನಲ್ಲೂ ಊಹಿಸಿರಲಿಲ್ಲ ಎಂದಿದ್ದಾನೆ.
ಇನ್ನು ಡಿಎನ್‌ಎ ಟೆಸ್ಟ್ ಮಾಡಿದ ಎನಾಲಿಸ್ಟ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಇಂತಹ ಪ್ರಕರಣಗಳು ಒಂದು ಕೋಟಿಯಲ್ಲಿ ಕೇವಲ ಒಂದು ಬಾಋಇ ಕಂಡು ಬರುತ್ತದೆ. ಇದಕ್ಕೇನು ಕಾರಣ ಎಂಬುವುದನ್ನೂ ಅವರು ವಿವರಿಸಿದ್ದಾರೆ.
ಓರ್ವ ಮಹಿಳೆ ತಿಂಗಳಿಗೆ ಎರಡು ಮೊಟ್ಟೆ ರಿಲೀಸ್ ಮಾಡಿದರೆ ಹಾಗೂ ಇದಾದ ಕೆಲವೇ ಸಮಯದಲ್ಲಿ ಇಬ್ಬರು ವ್ಯಕ್ತಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದರೆ ಹೀಗೆ ಸಂಭವಿಸುತ್ತದೆ. ಇಬ್ಬರು ವ್ಯಕ್ತಿಯಿಂದ ಬಿಡುಗಡೆಯಾದ ವೀರ್ಯ ಎರಡು ಮೊಟ್ಟೆಗಳೊಂದಿಗೆ ಫ್ಯೂಜ್ ಆಗುತ್ತದೆ ಎಂದು ಹೇಳಿದ್ದಾರೆ.
ಇದರಿಂದ ಮಹಿಳೆ ಅವಳಿ ಮಕ್ಕಳಿಗೆ ಜನ್ಮ ನೀಡುತ್ತಾಳೆ, ಆದರೆ ಮಕ್ಕಳ ತಂದೆ ಬೇರೆ ಬೇರೆಯವರಾಗಿರುತ್ತಾರೆ. ಈ ಪ್ರಕ್ರಿಯೆಯನ್ನು heteropaternal superfecundation ಎನ್ನಲಾಗುತ್ತದೆ.
ಇನ್ನು ಮಹಿಳೆ ಒಂದೇ ದಿನದಲ್ಲಿ ಇಬ್ಬರೊಂದಿಗೆ ಸೆಕ್ಸ್ ನಡೆಸಿದರಷ್ಟೇ ಹೀಗಾಗಲು ಸಾಧ್ಯ ಎಂಬುವುದು ತಜ್ಞರ ಮಾತಾಗಿದೆ.