ಇಂದು ರಾತ್ರಿಯಾಗುತ್ತೆ ಉಲ್ಕಾಪಾತ: 27 ವರ್ಷದ ಬಳಿಕ ಆಗಸದಲ್ಲಿ ಬೆಳಕಿನಾಟ!

First Published | Apr 23, 2020, 5:52 PM IST

ಇಡೀ ವಿಶ್ವವೇ ಕೊರೋನಾ ವಿರುದ್ಧ ಹೋರಾಡುತ್ತಿದೆ. ಹೀಗಿರುವಾಗ ಬಹುತೇಕ ಎಲ್ಲರೂ ತಮ್ಮ ಮನೆಗಳಲ್ಲಿ ಉಳಿದಿದ್ದಾರೆ. ಪ್ರಾಣಹಾನಿ ವೈರಸ್ ನಿಯಂತ್ರಿಸುವ ಲಸಿಕೆ ಇನ್ನೂ ಲಭ್ಯವಾಗಿಲ್ಲ. ಹೀಗಿರುವಾಗ ಇದರಿಂದ ಕಾಪಾಡಿಕೊಳ್ಳಲು ಮನೆಯಲ್ಲಿರುವುದೇ ಏಕಮಾತ್ರ ಉಪಪಾಯ. ಇನ್ನು ಸಾಮಾಜಿಕ ಅಂತರದಿಂದಲೂ ಇದರಿಂದ ರಕ್ಷಿಸಿಕೊಳ್ಳಬಹುದು. ಈ ನಿಟ್ಟಿನಲ್ಲೇ ಬಹುತೇಕ ಎಲ್ಲಾ ರಾಷ್ಟ್ರಗಳು ಲಾಕ್‌ಡೌನ್ ಘೋಷಿಸಿವೆ. ಇವುಗಳಲ್ಲಿ ಮಲೇಷ್ಯಾ ಕೂಡಾ ಒಂದು. ಇಂತ ಪರಿಸ್ಥಿತಿಯಲ್ಲಿ ಇಂದು, ಗುರುವಾರ ರಾತ್ರಿ ಇಲ್ಲಿ ಬರೋಬ್ಬರಿ 27 ವರ್ಷಗಳ ಹಿಂದೆ ಕಂಡು ಬಂದ ಬೆಳಕಿನಾಟ ಮತ್ತೆ ಕಂಡು ಬರಲಿದೆ. ಇದಕ್ಕೆಲ್ಲಾ ಕಾರಣ ಲಾಕ್‌ಡೌನ್. ಲಾಕ್‌ಡೌನ್ ಘೋಷಣೆಯಿಂದ ಇಲ್ಲಿ ವಾಯು ಮಾಲಿನ್ಯ ಗಣನೀಯವಾಗಿ ಇಳಿದಿದ್ದು, ವಾತಾವರಣ ಸ್ವಚ್ಛಗೊಂಡಿದೆ. ಇದರ ಪರಿಣಾಮ ಉಲ್ಕಾ ಮಳೆ ಸ್ಪಷ್ಣವಾಗಿ ಗೋಚರಿಸಲಿದೆ. ಇಂದು ರಾತ್ರಿ ಯಾವ ರೀತಿಯ ದೃಶ್ಯ ಕಂಡು ಬರಲಿದೆ ಇಲ್ಲಿದೆ ಕೆಲ ಫೋಟೋಗಳು.

ಕೊರೋನಾದಿಂದಾದ ಲಾಕ್‌ಡೌನ್‌ನಿಂದ ಜನರು ಮನೆಯಲ್ಲೇ ಉಳಿದುಕೊಂಡಿದ್ದಾರೆ. ಇದರಿಂದಾಗಿ ಆದ ಬಹುದೊಡ್ಡ ಪ್ರಯೋಜನವೆಂದರೆ ಪ್ರಕೃತಿ ಶುದ್ಧಗೊಂಡಿದ್ದು, ಸರಿಯಾಗುತ್ತಿದೆ.
ವಾಯುಗುಣ ಭಾರೀ ಪ್ರಮಾಣದಲ್ಲಿ ಸುಧಾರಿಸಿದ್ದು, ಮಾಲಿನ್ಯ ಗಣನೀಯವಾಗಿ ಇಳಿಕೆಯಾಗಿದೆ. ಮಲೇಷ್ಯಾದಲ್ಲೂ ಆಗಸ ಸ್ವಚ್ಛಗೊಂಡಿದ್ದು, ಜನರು ಉಸಿರಾಡುವ ಗಾಳಿಯು ಶುದ್ಧಗೊಂಡಿದೆ.
Tap to resize

ಬಹುಶಃ ಇದೇ ಶುದ್ಧ ಸ್ವಚ್ಛ ಆಗಸ ಹಾಗೂ ಗಾಳಿಯಿಂದಾಗಿ ಮಲೇಷ್ಯಾದಲ್ಲಿರುವವರಿಗೆ ಇಂದು, ಗುರುವಾರ ರಾತ್ರಿಯಾಗುವ ಉಲ್ಕಾಪಾತ ನೋಡಲು ಸಾಧ್ಯವಾಗುತ್ತದೆ.
Lyrid ಉಲ್ಕಾಶಿಲೆಯ ಮಳೆಯ ಮನಮೋಹಕ ದೃಶ್ಯ ಇಂದು ಮಲೇಷ್ಯಾದಲ್ಲಿ ಮನೆಯಲ್ಲೇ ಉಳಿದುಕೊಂಡಿರುವ ಜನ ಕಣ್ತುಂಬಿಕೊಳ್ಳಬಹುದಾಗಿದೆ.
Lyrid ಉಲ್ಕಾಶಿಲೆಯ ಮಳೆ ಏಪ್ರಿಲ್ 16 ರಿಂದ 25ರವರೆಗೆ ನಡೆಯಲಿದೆ.
Timeanddate.com ಅನ್ವಯ ಈ ಮನಮೋಹಕ ದೃಶ್ಯವನ್ನು ಜನರು ಇಂದು ಅಂದರೆ 23 ಏಪ್ರಿಲ್ 2020 ರಂದು 5.48 ಗಂಟೆಗೆ ನೋಡಬಹುದಾಗಿದೆ. ಇದಕ್ಕಾಗಿ ಒಂದೋ ಜನರು ತಡವಾಗಿ ನಿದ್ದೆ ಮಾಡಬೇಕು ಅಥವಾ ಬೇಗನೆ ಏಳಬೇಕು.
ಪ್ರತಿ ಗಂಟೆಗೆ ವೇಗದಲ್ಲಿ ಸುಮಾರು ಹದಿನೆಂಟಕ್ಕೂ ಉಲ್ಕೆಗಳು ಭೂಮಿಯತ್ತ ಹರಿದು ಬರಲಿವೆ. ಇದೊಂದು ಅದ್ಭುತ ಕ್ಷಣವಾಗಲಿದೆ.
ಲಾಕ್‌ಡೌನ್‌ನಿಂದ ಮಾಲಿನ್ಯ ತಗ್ಗಿದ ಪರಿಣಾಮದಿಂದಾಗಿ ಮಾತ್ರ ಈ ಅದ್ಭುತ ಕ್ಷಣ ಆಸ್ವಾದಿಸಲು ಜನರಿಗೆ ಸಾಧ್ಯವಾಗಲಿದೆ.

Latest Videos

click me!