ರಾತ್ರೋರಾತ್ರಿ ಸಾವಿರಾರು ಮಹಿಳೆಯರ ನಾಗರೀಕತ್ವ ರದ್ದುಗೊಳಿಸಿದ ಮುಸ್ಲಿಂ ರಾಷ್ಟ್ರ

Published : May 25, 2025, 03:05 PM IST

ಕುವೈತ್ ಸರ್ಕಾರ ರಾತ್ರೋರಾತ್ರಿ ಸಾವಿರಾರು ಜನರ ಪೌರತ್ವವನ್ನು ರದ್ದುಗೊಳಿಸಿದೆ. ಮದುವೆಯ ನಂತರ ಪೌರತ್ವ ಪಡೆದ ಮಹಿಳೆಯರ ಸಂಖ್ಯೆ ಹೆಚ್ಚಾಗಿದ್ದು, ಬ್ಯಾಂಕ್ ಖಾತೆಗಳು ಸ್ಥಗಿತಗೊಂಡಿವೆ. ಪೌರತ್ವ ರದ್ದತಿಯಿಂದಾಗಿ ಜನರು ತಮ್ಮ ಹಣಕಾಸಿನ ವಹಿವಾಟುಗಳನ್ನು ನಿಲ್ಲಿಸಬೇಕಾಯಿತು.

PREV
17
ಒಂದು ಕ್ಷಣ ಶಾಕ್

ಸುಖವಾದ ನಿದ್ದೆಯಿಂದ ಎದ್ದಾಗ ನಿಮ್ಮ ಬ್ಯಾಂಕ್‌ ಖಾತೆ ಕ್ಲೋಸ್ ಆಗಿದೆ ಎಂಬ ವಿಷಯ ತಿಳಿದ್ರೆ ಒಂದು ಕ್ಷಣ ಶಾಕ್ ಆಗೋದು ಗ್ಯಾರಂಟಿ. ನಿಮ್ಮ ಹಣಕಾಸಿನ ಎಲ್ಲಾ ವಹಿವಾಟುಗಳು ಸ್ಥಗಿತಗೊಂಡ್ರೆ ಮರುಕ್ಷಣವೇ ಏನು ಮಾಡಬೇಕು ಎಂದು ತೋಚುವುದೇ ಇಲ್ಲ. ಇಂತಹುವುದೇ ಒಂದು ಘಟನೆ ಕುವೈತ್‌ನಲ್ಲಿ ನಡೆದಿದೆ.

27
ಪೌರತ್ವ ರದ್ದು

ಕುವೈತ್ ಸರ್ಕಾರ ರಾತ್ರೋರಾತ್ರಿ ಸಾವಿರಾರು ಜನರ ಪೌರತ್ವವನ್ನು ರದ್ದುಗೊಳಿಸಿದೆ. ಬೆಳಗ್ಗ ಎದ್ದ ಜನರು ತಮ್ಮ ಆನ್‌ಲೈನ್ ಪಾವತಿಗಳು ಯಾಕೆ ನಿಷ್ಕ್ರಿಯೆಯಾಗಿದೆ ಎಂದು ತಿಳಿದುಕೊಳ್ಳಲು ಪ್ರಯತ್ನಿಸಿದಾಗ ತಾವು ಕುವೈತ್‌ನ ಪೌರತ್ವ ಕಳೆದುಕೊಂಡಿರೋದು ಗೊತ್ತಾಗಿ ಶಾಕ್ ಆಗಿದ್ದಾರೆ.

37
ಮಹಿಳೆಯರ ಸಂಖ್ಯೆಯೇ ಹೆಚ್ಚು

ಪೌರತ್ವ ರದ್ದುಗೊಂಡವರ ಪೈಕಿಯ ಮಹಿಳೆಯರ ಸಂಖ್ಯೆಯೇ ಹೆಚ್ಚಾಗಿದೆ. ಮದುವೆ ಬಳಿಕ ಮಹಿಳೆಯರು ಕುವೈತ್‌ ಪೌರತ್ವ ಪಡೆದುಕೊಂಡಿದ್ದರು. ಮದುವೆಯ ನಂತರ ಇಲ್ಲಿ ಪೌರತ್ವ ಪಡೆದ ಜನರ ಪೌರತ್ವವನ್ನು ಸರ್ಕಾರ ಹೆಚ್ಚಾಗಿ ರದ್ದುಗೊಳಿಸುತ್ತಿದೆ. ಈ ಪಟ್ಟಿಯಲ್ಲಿ ಕುವೈತ್ ಪುರುಷರನ್ನು ಮದುವೆಯಾಗುವ ಮೂಲಕ ಪೌರತ್ವ ಪಡೆದ ಮಹಿಳೆಯರು ಸೇರಿದ್ದಾರೆ.

47
ಪೌರತ್ವ ರದ್ದು

ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಜೋರ್ಡಾನ್ ನಿವಾಸಿಯಾಗಿರುವ ಮಹಿಳೆಯೊಬ್ಬರು ಕ್ರೆಡಿಟ್ ಕಾರ್ಡ್ ಬಳಸಲು ಹೋದಾಗ ತಮ್ಮ ಖಾತೆಯನ್ನು ಸ್ಥಗಿತಗೊಳಿಸಲಾಗಿದೆ ಎಂಬ ವಿಷಯ ತಿಳಿದಿದೆ. ಕ್ರೆಡಿಟ್ ಕಾರ್ಡ್ ಯಾಕೆ ಬ್ಲಾಕ್ ಆಗಿದೆ ಎಂದು ತಿಳಿದುಕೊಳ್ಳಲು ಮಹಿಳೆ ಪ್ರಯತ್ನಿಸಿದಾಗ ತಾವು ಕುವೈತ್ ಸರ್ಕಾರ ತಮ್ಮ ಪೌರತ್ವ ರದ್ದುಗೊಳಿಸಿರುವ ವಿಷಯ ತಿಳಿದಿದೆ.

57
ಕುವೈತ್ ಪುರುಷರನ್ನು ಮದುವೆಯಾಗುವ ಮೂಲಕ ಪೌರತ್ವ

ಡಿಸೆಂಬರ್ 202ರಲ್ಲಿ ಅಮಿರ್ ಶೇಖ್ ಮೆಶಾಲ್ ಅಲ್ ಅಹ್ಮದ್ ಅಲ್ ಸಬಾ ಕುವೈತ್‌ನ ಎಮಿರ್ ಆದರು. ಎಮಿರ್ ಆಗುತ್ತಿದ್ದಂತೆ ಸಂಸತ್ ವಿಸರ್ಜಿಸಿ, ಕುವೈತ್ ಸಂವಿಧಾನದ ಕೆಲ ಭಾಗಗಳನ್ನು ಅಮಾನತುಗೊಳಿಸಿ ಆದೇಶಿಸಿದರು. ಅಮಿರ್ ಶೇಖ್ ಆದೇಶದ ಪ್ರಕಾರ, ಇಲ್ಲಿನ ಜನರೊಂದಿಗೆ ರಕ್ತ ಸಂಬಂಧ ಹೊಂದಿರುವ ಜನರು ಮಾತ್ರ ಕುವೈತ್ ಪೌರತ್ವವನ್ನು ಪಡೆಯಬಹುದಾಗಿತ್ತು. ಕುವೈತ್ ಪುರುಷರನ್ನು ಮದುವೆಯಾಗುವ ಮೂಲಕ ಮಹಿಳೆಯರು ಕುವೈತ್ ಪೌರತ್ವ ಪಡೆದುಕೊಂಡಿದ್ದರು.

67
ಪೌರತ್ವ ಪಡೆದವರಿಗೆ ಯಾವೆಲ್ಲಾ ಸೌಲಭ್ಯ?

ಕುವೈತ್‌ನಲ್ಲಿ ಪೌರತ್ವ ಪಡೆಯದ ಅನೇಕ ಜನರು ವಾಸಿಸುತ್ತಿದ್ದಾರೆ. 1961ರಲ್ಲಿ ಬ್ರಿಟಿಷರಿಂದ ಸ್ವಾತಂತ್ರ ಪಡೆದುಕೊಂಡ ನಂತರವೂ ಇಲ್ಲಿಯ 1 ಲಕ್ಷ ಜನರಿಗೆ ಪೌರತ್ವ ಸಿಗಲಿಲ್ಲ. ಇಲ್ಲಿಯ ಪೌರತ್ವ ಹೊಂದಿರುವ ಜನರಿಗೆ ಮಾತ್ರ ಇಲ್ಲಿಯ ಬ್ಯಾಂಕಿಂಗ್, ಶಿಕ್ಷಣ, ಸರ್ಕಾರಿ ಉದ್ಯೋಗ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ.

77
38,505 ಮಹಿಳೆಯರು

1987ರಿಂದ ವಿವಾಹದ ಆಧಾರದ ಮೇಲೆ ಪೌರತ್ವ ಪಡೆದವರ ವಿರುದ್ಧ ಕುವೈತ್ ಸರ್ಕಾರ ತಿರುಗಿಬಿದ್ದಿದೆ. ಕೆಲ ವರದಿಗಳ ಪ್ರಕಾರ, 1992 ರಿಂದ 2020 ಅವಧಿ ನಡುವೆ 38,505 ಮಹಿಳೆಯರು ವಿವಾಹದ ಆಧಾರದ ಮೇಲೆ ಕುವೈತ್ ಪೌರತ್ವ ಪಡೆದುಕೊಂಡಿದ್ದಾರೆ. ಕುವೈತ್ ಸರ್ಕಾರ ದ್ವಿಪೌರತ್ವ ಹೊಂದಿರುವ ಜನರ ಪೌರತ್ವವನ್ನು ಸಹ ಕಸಿದುಕೊಳ್ಳಲಾಗುತ್ತಿದೆ. ಪಾಪ್ ಗಾಯಕ ನವಲ್ ಮತ್ತು ನಟ ದಾವೂದ್ ಹುಸೇನ್ ಹೆಸರು ಸಹ ಪೌರತ್ವ ಪಡೆದುಕೊಂಡವರ ಪಟ್ಟಿಯಲ್ಲಿದೆ ಎಂದು ವರದಿಯಾಗಿದೆ.

Read more Photos on
click me!

Recommended Stories